For Quick Alerts
  ALLOW NOTIFICATIONS  
  For Daily Alerts

  'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕನ ವ್ಯಾಕ್ಸಿನ್ ಸಿನಿಮಾಕ್ಕೆ ನಾಯಕ ಸಿಕ್ಕಾಯ್ತು, ಯಾರದು?

  By ಫಿಲ್ಮಿಬೀಟ್ ಡೆಸ್ಕ್
  |

  'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ದೇಶಿಸಿದ್ದ ವಿವೇಕ್ ಅಗ್ನಿಹೋತ್ರಿ ಇದೀಗ ಮತ್ತೊಂದು 'ಪ್ರೋ ಗೌರ್ನ್‌ಮೆಂಟ್' ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.

  'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಮೂಲಕ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರು ನಡೆಸಿದ್ದಾರೆನ್ನಲಾಗುವ ದೌರ್ಜನ್ಯದ ಕತೆ ಹೇಳಿದ್ದ ವಿವೇಕ್ ಅಗ್ನಿಹೋತ್ರಿ ಈಗ ವ್ಯಾಕ್ಸಿನ್ ಕುರಿತಾದ ಸಿನಿಮಾ ಮಾಡುತ್ತಿದ್ದಾರೆ.

  ವ್ಯಾಕ್ಸಿನ್ ಸುತ್ತ ನಡೆದ ರಾಜಕೀಯ ಕುರಿತಾಗಿ ಈ ಸಿನಿಮಾ ಇರಲಿದೆ ಎಂದು ವಿವೇಕ್ ಅಗ್ನಿಹೋತ್ರಿ ಈ ಹಿಂದೆಯೇ ಹೇಳಿದ್ದರು. ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿರುವುದಲ್ಲದೆ, ಸಿನಿಮಾದಲ್ಲಿ ನಾಯಕರಾಗಿ ನಟಿಸಲಿರುವವರು ಯಾರು ಎಂಬುದನ್ನೂ ಬಹಿರಂಗಗೊಳಿಸಿದ್ದಾರೆ.

  ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್ ವಾರ್' ಸಿನಿಮಾದ ಮುಖ್ಯ ಪಾತ್ರದಲ್ಲಿ ಹಿರಿಯ ನಟ ನಾನಾ ಪಟೇಕರ್ ನಟಿಸಲಿದ್ದಾರೆ. ಸಿನಿಮಾ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ವ್ಯಾಕ್ಸಿನ್ ವಾರ್ ಸಿನಿಮಾ ಬಿಡುಗಡೆ ಆಗಲಿದೆ.

  ಸಿನಿಮಾದಲ್ಲಿ ವಿವೇಕ್ ಅಗ್ನಿಹೋತ್ರಿಯ ಪತ್ನಿ ಪಲ್ಲವಿ ಜೋಷಿ ಸಹ ನಟಿಸಲಿದ್ದಾರೆ. ಇವರ ಜೊತೆಗೆ ಇತರೆ ಜನಪ್ರಿಯ ನಟರಾದ ದಿವ್ಯಾ ಸೇಠ್, ಗೋಪಾಲ್ ಸಿಂಗ್ ಇನ್ನೂ ಹಲವರು ನಟಿಸಲಿದ್ದಾರೆ.

  ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಹಿಂದಿನ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಈಗಾಗಲೇ ಕೆಲವು ಕಾರಣಗಳಿಗೆ ವಿವಾದ ಸೃಷ್ಟಿಸಿತ್ತು. ಆದರೆ ಹಿಟ್ ಸಹ ಆಗಿತ್ತು. ಸ್ವತಃ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಮಂತ್ರಿಗಳು, ಶಾಸಕರು, ಸಂಸದರಿಂದ ಸಿನಿಮಾಕ್ಕೆ ಭರ್ಜರಿ ಪ್ರಚಾರ ದೊರಕಿತ್ತು. ಕೆಲವೆಡೆಯಂತೂ ಬಿಜೆಪಿ ಶಾಸಕರೇ ಹಣ ನೀಡಿ ಸಿನಿಮಾವನ್ನು ಜನರಿಗೆ ಉಚಿತವಾಗಿ ತೋರಿಸಿದರು ಸಹ.

  ಇದೀಗ ವಿವೇಕ್ ಅಗ್ನಿಹೋತ್ರಿ ವ್ಯಾಕ್ಸಿನ್ ಕುರಿತಾದ ಸಿನಿಮಾ ಮಾಡಲು ಮುಂದಾಗಿದ್ದು, ಈ ಸಿನಿಮಾದಲ್ಲಿ ಕೇಂದ್ರ ಸರ್ಕಾರದ ಗುಣಗಾನ ಇರುತ್ತದೆ ಎಂಬುದನ್ನು ಸುಲಭವಾಗಿ ಊಹಿಸಬಹುದಾಗಿದೆ. ಈ ಸಿನಿಮಾವನ್ನು ಮುಂದಿನ ಲೋಕಸಭೆ ಚುನಾವಣೆಯ ಪ್ರಚಾರದ ಉದ್ಘಾಟನೆಯ ಮಾದರಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಕೆಲವು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

  English summary
  Nana Patekar to act in lead role in Vivek Agnihotri's The Vaccine War movie. Movie will release by August 2023.
  Sunday, January 1, 2023, 22:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X