»   » ಮ್ಯಾಕ್ಸಿಮ್ ನಲ್ಲಿ ಮಿನಿಮಮ್ ಆದ ನತಾಲಿಯಾ ಕೌರ್

ಮ್ಯಾಕ್ಸಿಮ್ ನಲ್ಲಿ ಮಿನಿಮಮ್ ಆದ ನತಾಲಿಯಾ ಕೌರ್

By: ಉದಯರವಿ
Subscribe to Filmibeat Kannada

ನತಾಲಿಯಾ ಕೌರ್ ಎಂಬ ಬ್ರೆಜಿಲ್ ಬೆಡಗಿ ನೆನಪಿರಬೇಕಲ್ಲಾ. ಕನ್ನಡದ ದೇವ್ ಸನ್ ಆಫ್ ಮುದ್ದೇಗೌಡ ಚಿತ್ರದಲ್ಲಿ ಅಭಿನಯಿಸಿದ್ದ ಈ ತಾರೆ ಎಲ್ಲಿ ಹೋದರು ಎಂದು ಹುಡುಕುವಂತಹ ಪರಿಸ್ಥಿತಿ ಬಂದಿತ್ತು.

ಈಕೆ ಅಭಿನಯದ ಮೊದಲ ಚಿತ್ರವೇ ಇಂದ್ರಜಿತ್ ಲಂಕೇಶ್ ಅವರ 'ದೇವ್ ಸನ್ ಆಫ್ ಮುದ್ದೇಗೌಡ'. ಆ ಚಿತ್ರದ ಬಳಿಕ ಒಂದೆರಡು ತೆಲುಗು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದರೂ ಅಷ್ಟಾಗಿ ಗುರುತಿಸಿಕೊಳ್ಳಲಿಲ್ಲ.

ಒಬ್ಬ ನಟಿಗೆ ಏನು ಬೇಕೋ ಅದೆಲ್ಲವೂ ಇದ್ದರೂ ನತಾಲಿಯಾ ಮಾತ್ರ ಎಲೆಮರೆಯ ಕಾಯಿಯಂತೆಯೇ ಉಳಿದು ಹೋದರು. ಇದೀಗ ಅವರು ಮತ್ತೆ ತಮ್ಮ ಸೌಂದರ್ಯ ತೆರೆದಿಟ್ಟಿದ್ದಾರೆ. ಜುಲೈ ಸಂಚಿಕೆಯ ಮ್ಯಾಕ್ಸಿಮ್ ನಿಯತಕಾಲಿಕೆಯಲ್ಲಿ ತಮ್ಮ ತಾಜಾ ಸೌಂದರ್ಯವನ್ನು ಅನಾವರಣಗೊಳಿಸಿದ್ದಾರೆ.

ಕಿಂಗ್ ಫಿಶರ್ ಬೆಡಗಿಯ ಹೊಸ ಅವತಾರ

ಕಿಂಗ್ ಫಿಶರ್ ಕ್ಯಾಲೆಂಡರ್ ಗಾಗಿ ಈಜುಡುಗೆ ತೊಟ್ಟು ತಮ್ಮ ಮೈಮಾಟ ಮೆರೆದಿದ್ದರು. ಬಳಿಕ ರಾಮ್ ಗೋಮಾಪ್ ವರ್ಮಾ ಅವರ 'ಡಿಫಾರ್ಟ್ ಮೆಂಟ್' ಚಿತ್ರದಲ್ಲಿ ಐಟಂ ಡಾನ್ಸ್ ಮಾಡಿ ಎಲ್ಲರ ಕಣ್ಣು ಕುಕ್ಕಿದ್ದರು.

ಮ್ಯಾಕ್ಸಿಮ್ ನಲ್ಲಿ ಮಿನಿಮಮ್ ಆದ ಕೌರ್

ನೋಡಲು ಹೆಚ್ಚುಕಡಿಮೆ ಸನ್ನಿ ಲಿಯೋನ್ ತಂಗಿ ತರಹ ಕಾಣುವ ನಟಾಲಿಯಾ ಮುಂದೆ ಐಟಂ ಬೆಡಗಿಯಾಗಿ ಸಖತ್ ಮಿಂಚುವ ಎಲ್ಲ ಸೂಚನೆಗಳೂ ಇವೆ. ಅದಕ್ಕೆ ಮುನ್ನುಡಿ ಎಂಬಂತೆ ಮ್ಯಾಕ್ಸಿಮ್ ನಲ್ಲಿ ಈ ರೀತಿ ಕಾಣಿಸಿಕೊಂಡಿದ್ದಾರೆ.

ಬಿಕಿನಿ ಮೂಲಕ ಬಾಲಿವುಡ್ ಗೆ ಸಂದೇಶ

ನನಗೆ ಖುಷಿ ಕೊಡುವ ಪಾತ್ರಗಳಲ್ಲಿ ನಟಿಸುತ್ತೇನೆ ಎಂದು ಒಮ್ಮೆ ಹೇಳಿದ್ದ ಈ ಬೆಡಗಿಗೆ ಇಷ್ಟು ದಿನ ಆ ರೀತಿಯ ಯಾವ ಪಾತ್ರವೂ ಸಿಗಲಿಲ್ಲವೋ ಏನೋ. ಇದೀಗ ಬಿಕಿನಿ ಮೂಲಕ ಬಾಲಿವುಡ್ ಗೆ ಸಂದೇಶ ಕಳುಹಿಸಿದ್ದಾರೆ.

ದುಡ್ಡು ಮಾಡುವ ದರ್ದು ನನಗಿಲ್ಲ

ಮಾಡೆಲಿಂಗ್ ನಲ್ಲಿ ನಾನು ಸಿಕ್ಕಾಪಟ್ಟೆ ದುಡ್ಡು ಮಾಡಿದ್ದೇನೆ. ಇಲ್ಲಿ ನನಗೆ ಆ ದರ್ದು ಇಲ್ಲ ಎನ್ನುತ್ತಿದ್ದ ಬೆಡಗಿ ಈಗ ಏಕಾಏಕಿ ಬಿಕಿನಿಯಲ್ಲಿ ಕಾಣಿಸಿಕೊಂಡು ಚಕಿತಗೊಳಿಸಿದ್ದಾರೆ.

ಸಿನಿಮಾ ನನ್ನ ಪ್ಯಾಶನ್ ಎನ್ನುವ ಕೌರ್

ಸಿನಿಮಾ ನನ್ನ ಪ್ಯಾಶನ್ ಎನ್ನುವ ನಟಾಲಿಯ ಪಾತ್ರಗಳ ಆಯ್ಕೆಯಲ್ಲಿ ಬಹಳ ಚ್ಯೂಸಿಯಂತೆ. ಹಾಗಾಗಿಯೇ ಏನೋ ಇದುವರೆಗೂ ಅಭಿನಯಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ. ಇನ್ಯಾದರೂ ಅವರಿಗೆ ಒಳ್ಳೆಯ ಪಾತ್ರಗಳು ಸಿಗುತ್ತವೋ ಕಾದುನೋಡಬೇಕು.

English summary
Red Hot Nathalia Kaur Maxim Magazine July 2014 PhotoShoot. She looks hot in red skin outfit dress. Nathalia Kaur Spicy Red Bikini Photoshoot photos.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada