ಕಂಗನಾ ನಿರ್ಮಾಣದ ಹೊಸ ಚಿತ್ರಕ್ಕೆ ಈ ಸ್ಟಾರ್ ನಟನೇ ಹೀರೋ

ಬಾಲಿವುಡ್ ನಟಿ ಕಂಗನಾ ರಣಾವತ್ ನಿರ್ಮಾಣಕ್ಕೆ ಕೈ ಹಾಕಿದ್ದು, ತಮ್ಮ ಚೊಚ್ಚಲ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಸಿನಿಮಾ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾಗಲಿದ್ದು, ಹಿಂದಿಯ ಪ್ರತಿಭಾನ್ವಿತ ನಟ ನವಾಜುದ್ದೀನ್ ಸಿದ್ದಿಕಿ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಇದೊಂದು ಲವ್ ಸ್ಟೋರಿ ಸಿನಿಮಾ ಆಗಿದ್ದು, ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಕಂಗನಾ ಅವರ ಮಣಿಕರ್ಣಿಕಾ ಫಿಲಂಸ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.

ನವಾಜುದ್ದೀನ್ ಸಿದ್ದಿಕಿ ಅವರ ಕಪ್ಪು-ಬಿಳಪು ಬಣ್ಣದ ಫೋಟೋ ಹಂಚಿಕೊಂಡಿರುವ ಮಣಿಕರ್ಣಿಕಾ ಫಿಲಂಸ್, ''ಈ ಜನರೇಷನ್‌ನ ಅತ್ಯುತ್ತಮ ನಟ ಟಿಕು ವೆಡ್ಸ್ ಶೆರು ಸಿನಿಮಾ ತಂಡ ಸೇರಿದ್ದಾರೆ'' ಎಂದು ತಿಳಿಸಿದೆ.

Nawazuddin Siddiqui Playing Lead in Kangana Ranaut’s production Film

ಇದೇ ಫೋಟೋವನ್ನು ಕಂಗನಾ ರಣಾವತ್ ಸಹ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ''ಟಿಕು ವೆಡ್ಸ್ ಶೆರು ಚಿತ್ರತಂಡಕ್ಕೆ ಸ್ವಾಗತ ಸರ್'' ಎಂದು ಪೋಸ್ಟ್ ಹಾಕಿದ್ದಾರೆ.

ಕಂಗನಾ ರಣಾವತ್ ಮತ್ತು ನವಾಜುದ್ದೀನ್ ಸಿದ್ದಿಕಿ ಕಾಂಬಿನೇಷನ್ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಈ ಜೋಡಿಯನ್ನು ಒಟ್ಟಿಗೆ ನೋಡಲು ಉತ್ಸುಕರಾಗಿದ್ದಾರೆ.

ಇನ್ನುಳಿದಂತೆ ನವಾಜುದ್ದೀನ್ ಸಿದ್ದಿಕಿ 'ಜೋಗಿರಾ ಸಾರಾ ರಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನೇಹಾ ಶರ್ಮಾ ಈ ಚಿತ್ರದಲ್ಲಿ ಜೊತೆಯಾಗಿದ್ದಾರೆ. ಆ ಕಡೆ ಕಂಗನಾ ರಣಾವತ್ 'ತಲೈವಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಎಮರ್ಜೆನ್ಸಿ' ಹೆಸರಿನಲ್ಲಿ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಇದು ಇಂದಿರಾ ಗಾಂಧಿ ಅವರ ಕಥೆ ಆಧರಿತ ಸಿನಿಮಾ ಆಗಿದ್ದು, ಖುದ್ದು ಕಂಗನಾ ನಿರ್ದೇಶನ ಮಾಡಲಿದ್ದಾರೆ.

Recommended Video

ಮುಂದಿನ ಜೀವನ ನೆನೆಸಿಕೊಂಡ್ರೆ ಭಯ ಆಗ್ತಿದೆ! | Darshan | Aruna Kumari | Umapathy | Filmibeat Kannada

More from Filmibeat

English summary
Nawazuddin Siddiqui joins the cast of 'Tiku Weds Sheru' being produced by Kangana Ranaut's production house Manikarnika Films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X