For Quick Alerts
  ALLOW NOTIFICATIONS  
  For Daily Alerts

  ಎನ್‌ಸಿಬಿಯಿಂದ ಮತ್ತೊಬ್ಬ ಸೆಲೆಬ್ರಿಟಿ ಅರೆಸ್ಟ್: ಕರಣ್ ಜೋಹರ್‌ಗೆ ಆತಂಕ

  |

  ಬಾಲಿವುಡ್‌ನಲ್ಲಿ ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ರಿಯಾ ಚಕ್ರವರ್ತಿ, ಸುಶಾಂತ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ, ರಿಯಾ ಸಹೋದರ ಸೇರಿದಂತೆ ಹಲವರನ್ನು ಬಂಧಿಸಿರುವ ಎನ್‌ಸಿಬಿ ಪೊಲೀಸರು ಈಗ ಎರಡನೇ ಹಂತ ಬೇಟೆ ಶುರು ಮಾಡಿದ್ದಾರೆ.

  ರಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಸೇರಿ ಇತರರಿಗೆ ನೋಟಿಸ್ ನೀಡಿದ್ದ ಎನ್‌ಸಿಬಿ ಇಂದು ಮತ್ತೊಬ್ಬ ಸೆಲೆಬ್ರಿಟಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದೆ. ಇದು ಸಹಜವಾಗಿ ಧರ್ಮ ಪ್ರೊಡಕ್ಷನ್ ಸಂಸ್ಥೆ ಹಾಗೂ ನಿರ್ಮಾಪಕ ಕರಣ್ ಜೋಹರ್‌ಗೆ ಆತಂಕ ಸೃಷ್ಟಿಸಿದೆ. ಮುಂದೆ ಓದಿ....

  ಡ್ರಗ್ಸ್ ಪ್ರಕರಣ: ವೈರಲ್ ಆಗಿರುವ ಪಾರ್ಟಿ ವಿಡಿಯೋ ಬಗ್ಗೆ ಕರಣ್ ಜೋಹರ್ ಸ್ಪಷ್ಟನೆ

  ಧರ್ಮ ಸಂಸ್ಥೆಯ ಮಾಜಿ ಉದ್ಯೋಗಿ ಬಂಧನ

  ಧರ್ಮ ಸಂಸ್ಥೆಯ ಮಾಜಿ ಉದ್ಯೋಗಿ ಬಂಧನ

  ಕರಣ್ ಜೋಹರ್ ಮಾಲೀಕತ್ವದ ಧರ್ಮ ಪ್ರೊಡಕ್ಷನ್ ಸಂಸ್ಥೆಯಲ್ಲಿ ಮಾಜಿ ಉದ್ಯೋಗಿಯಾಗಿದ್ದ ಕ್ಷಿತಿಜ್ ರವಿ ಎಂಬ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ಈತನ ವಿರುದ್ಧ ಬಲವಾದ ಸಾಕ್ಷ್ಯಗಳು ಲಭಿಸಿದ್ದು, ಈತನ ಜೊತೆ ಹಲವು ಸೆಲೆಬ್ರಿಟಿಗಳು ನಂಟು ಸಹ ಹೊಂದಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ.

  ಡ್ರಗ್ಸ್ ಸರಬರಾಜು ಮಾಡಿದ್ದ ಎಂಬ ಆರೋಪ

  ಡ್ರಗ್ಸ್ ಸರಬರಾಜು ಮಾಡಿದ್ದ ಎಂಬ ಆರೋಪ

  ಕ್ಷಿತಿಜ್ ರವಿ ಪ್ರಸಾದ್ ಹಲವು ಕಾರ್ಯಕ್ರಮಗಳಲ್ಲಿ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸರಬರಾಜು ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಅದಕ್ಕೆ ಬಲವಾದ ಸಾಕ್ಷ್ಯ ಸಹ ಎನ್‌ಸಿಬಿ ಪೊಲೀಸರ ಬಳಿ ಇದೆ ಎನ್ನಲಾಗಿದೆ. ವಾಟ್ಸಾಪ್‌ ಚಾಟ್‌ನಲ್ಲಿ ಈತನ ಕುರಿತು ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

  ಮನೆ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು

  ಮನೆ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು

  ಕ್ಷಿತಿಜ್ ರವಿ ಪ್ರಸಾದ್ ಅವರ ದೆಹಲಿ ನಿವಾಸದ ಮೇಲೆ ಗುರುವಾರ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ನಂತರ ಮುಂಬೈಗೆ ಕರೆದುಕೊಂಡ ಬಳಿಕ ಮುಂಬೈ ನಿವಾಸ ಮೇಲೆ ದಾಳಿ ಮಾಡಲಾಗಿದೆ. ಸತತ ಎರಡು ದಿನಗಳಿಂದ ವಿಚಾರಣೆ ನಡೆಸಿದ ನಂತರ ಈಗ ಅಧಿಕೃತವಾಗಿ ಕ್ಷಿತಿಜ್ ರವಿ ಪ್ರಸಾದ್ ಅವರನ್ನು ಅರೆಸ್ಟ್ ಮಾಡಲಾಗಿದೆ.

  SPB Special : Shree Harsha about the Legend ಅವರ ತರ ಜೀವನ ನಡೆಸೋಕೆ ಯಾರಿಂದಲೂ ಆಗಲ್ಲ | Filmibeat Kannada
  ಕರಣ್ ಜೋಹರ್ ಸ್ಪಷ್ಟನೆ

  ಕರಣ್ ಜೋಹರ್ ಸ್ಪಷ್ಟನೆ

  ಡ್ರಗ್ಸ್ ಪ್ರಕರಣದಲ್ಲಿ ನಿರ್ಮಾಪಕ ಹಾಗೂ ಧರ್ಮ ಪ್ರೊಡಕ್ಷನ್ ಸಂಸ್ಥೆಯ ಮಾಲೀಕ ಕರಣ್ ಹೆಸರು ತಳುಕು ಹಾಕಿಕೊಂಡಿದೆ. ಮಾಜಿ ಉದ್ಯೋಗಿ ಬಂಧನವಾದ ಬಳಿಕ ಈ ಕುರಿತು ಸ್ಪಷ್ಟನೆ ನೀಡಿರುವ ಕರಣ್ '' ಈ ಹಿಂದೆ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ. ಆದರೆ, ಆತನ ಕುರಿತು ವೈಯಕ್ತಿಕವಾಗಿ ಗೊತ್ತಿಲ್ಲ. ಈಗ ನಮ್ಮ ಸಂಸ್ಥೆಯಲ್ಲಿ ಆತ ಉದ್ಯೋಗಿ ಅಲ್ಲ'' ಎಂದು ಬಹಿರಂಗಪಡಿಸಿದ್ದಾರೆ.

  English summary
  Narcotics Control Bureau (NCB) on Saturday arrested Dharma Productions ex executive producer Kshitij Ravi Prasad in connection with a drug case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X