ಕರೀನಾ ಕಪೂರ್ ನಟಿಸಿರುವ ಜಾಹೀರಾತು ನಿಷೇಧಿಸಲು ಆಗ್ರಹ

ಜಾಹೀರಾತೊಂದರಲ್ಲಿ ನಟಿಸಿದ್ದಕ್ಕೆ ನಟ ಅಕ್ಷಯ್ ಕುಮಾರ್ ಕೆಲವು ದಿನಗಳ ಹಿಂದೆಯಷ್ಟೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಅಕ್ಷಯ್ ತಂಬಾಕು ಉತ್ಪನ್ನದ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಹಾಗಾಗಿ ಅವರು ಕ್ಷಮೆ ಕೇಳಿದರು. ಈಗ ಕರೀನಾ ಕಪೂರ್ ನಟಿಸಿರುವ ಜಾಹೀರಾತಿನ ಮೇಲೆ ನೆಟ್ಟಿಗರು ಕಣ್ಣು ಹಾಕಿದ್ದಾರೆ.

ನಟಿ ಕರೀನಾ ಕಪೂರ್ ಮಲಬಾರ್ ಗೋಲ್ಡ್ ಜಾಹೀರಾತಿನಲ್ಲಿ ನಟಿಸಿದ್ದು, ಈ ಜಾಹೀರಾತನ್ನು ನಿಷೇಧ ಮಾಡಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಮಲಬಾರ್ ಗೋಲ್ಡ್, ಅಕ್ಷಯ ತೃತೀಯ ಸಂದರ್ಭಕ್ಕಾಗಿ ಜಾಹೀರಾತು ಬಿಡುಗಡೆ ಮಾಡಿದ್ದು, ಜಾಹೀರಾತಿನಲ್ಲಿ ಕರೀನಾ ಕಪೂರ್ ನಟಿಸಿದ್ದಾರೆ. ಈ ಜಾಹೀರಾತಿನಲ್ಲಿ ನಟಿಸಿರುವ ಕರೀನಾ ಕಪೂರ್ ಹಣೆಗೆ ಕುಂಕುಮ ಧರಿಸಿಲ್ಲವೆಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಸಿದ್ದಾರೆ.

Netizen Demand Ban On Kareena Kapoors Malbar Gold Advertisement

ಹಿಂದುಗಳ ಹಬ್ಬದ ಬಗ್ಗೆ ಮಲಬಾರ್ ಜಾಹೀರಾತು ಮಾಡಿದೆ, ಆದರೆ ನಟಿ ಕುಂಕುಮ ಧರಿಸಿಲ್ಲ, ಹಿಂದು ಸಂಸ್ಕೃತಿ ಬಗ್ಗೆ ಮಲಬಾರ್ ಹೊಂದಿರುವ ನಿರ್ಲಕ್ಷ್ಯಕ್ಕೆ ಉದಾಹರಣೆ ಎಂದು ನೆಟ್ಟಿಗರು ಆಕ್ಷೇಪಣೆ ಎತ್ತಿದ್ದಾರೆ.

ಚಿನ್ನದ ಆಭರಣದ ಜಾಹೀರಾತಿನಲ್ಲಿ ಕರೀನಾ ಸುಂದರವಾದ, ಸಾಂಪ್ರದಾಯಿಕ ಲೆಹಂಗಾ ಧರಿಸಿದ್ದಾರೆ. ಭಾರತೀಯ ಸಂಸ್ಕೃತಿಯ, ಪರಂಪರೆಯನ್ನು ಪ್ರತಿನಿಧಿಸುವ ಹಲವು ಆಭರಣಗಳನ್ನು ಧರಿಸಿದ್ದಾರೆ ಆದರೆ ಕುಂಕುಮವನ್ನು ಇಟ್ಟುಕೊಂಡಿಲ್ಲ. ಇದು ನೆಟ್ಟಿಗರನ್ನು ಕೆರಳಿಸಿದೆ.

Netizen Demand Ban On Kareena Kapoors Malbar Gold Advertisement

ಮಲಬಾರ್ ಸಂಸ್ಥೆಯ ಮೇಲೆ ಮಾತ್ರವೇ ಅಲ್ಲದೆ, ಕೆಲವು ನೆಟ್ಟಿಗರು ಕರೀನಾ ವಿರುದ್ಧವೂ ಅಶ್ಲೀಲ ಪದ ಪ್ರಯೋಗ ಮಾಡಿದ್ದಾರೆ. ಅನ್ಯಧರ್ಮೀಯನನ್ನು ವಿವಾಹವಾಗಿ ತಮ್ಮ ಮೂಲ ಧರ್ಮ ಮರೆತಿದ್ದಾರೆ ಎಂಬಿತರೆ ಟೀಕೆಗಳನ್ನು ಕರೀನಾ ವಿರುದ್ಧ ನೆಟ್ಟಿಗರು ಮಾಡಿದ್ದಾರೆ. ಹಿಂದು ಹಬ್ಬದ ಕುರಿತಾದ ಜಾಹೀರಾತಿಗೆ ಅನ್ಯಧರ್ಮೀಯನನ್ನು ವಿವಾಹವಾಗಿರುವ ನಟಿಯನ್ನು ಏಕೆ ತೆಗೆದುಕೊಂಡಿರಿ ಎಂದು ಸಹ ಕೆಲವರು ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆಯೂ ಆಭರಣ ಕಂಪೆನಿಗಳು ತಮ್ಮ ಜಾಹೀರಾತಿನಿಂದಾಗಿ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿತ್ತು. ಜನಪ್ರಿಯ ಆಭರಣ ಬ್ರ್ಯಾಂಡ್ ಒಂದರ ಜಾಹೀರಾತು 'ಲವ್ ಜಿಹಾದ್‌'ಗೆ ಪ್ರೇರಣೆ ನೀಡುತ್ತಿದೆ ಎಂಬ ಆರೋಪವನ್ನು ಎದುರಿಸಿತ್ತು, ಕೊನೆಗೆ ಜಾಹೀರಾತನ್ನು ಹಿಂಪಡೆಯಬೇಕಾಯಿತು. ಮತ್ತೊಂದು ಆಭರಣ ಬ್ರ್ಯಾಂಡ್ ಸಲಿಂಗಕಾಮಕ್ಕೆ ಪ್ರೋತ್ಸಾವ ನೀಡುವ ಜಾಹೀರಾತು ಮಾಡಿದೆ ಎಂದು ಆಕ್ರೋಶಕ್ಕೆ ಒಳಗಾಗಿತ್ತು. ಆ ಜಾಹೀರಾತನ್ನು ಸಹ ಹಿಂಪಡೆಯಲಾಯಿತು.

More from Filmibeat

English summary
Netizen demand ban on Kareena Kapoor's malbar Gold advertisement. Netizen criticize Kareena for not wearing bindi in the ad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X