For Quick Alerts
  ALLOW NOTIFICATIONS  
  For Daily Alerts

  ಮನೆಯಲ್ಲಿ ಕೊಹ್ಲಿಗೆ ಹೇರ್ ಕಟ್ ಮಾಡಿದ ಅನುಷ್ಕಾ ಶರ್ಮಾ: ವಿಡಿಯೋಗೆ ನೆಟ್ಟಿಗರ ತರಾಟೆ

  |

  ಲಾಕ್‌ಡೌನ್ ಕಾರಣದಿಂದ ಸಿನಿಮಾ, ಕ್ರೀಡೆಗಳು ಸೇರಿದಂತೆ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಿವೆ. ಹೀಗಾಗಿ ತಾರೆಯರು ಮನೆಯಲ್ಲಿಯೇ ಕುಳಿತು ಮೋಜು ಮಾಡುತ್ತಿದ್ದಾರೆ. ವರ್ಕೌಟ್ ಮಾಡುವುದು, ಮನೆಗೆಲಸ ಮಾಡುವುದು, ಮನೆಯೊಳಗೇ ಆಡುವುದು ಮುಂತಾದ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ. ಅಷ್ಟೇ ಅಲ್ಲ ಅದರ ವಿಡಿಯೋಗಳನ್ನೂ ಮಾಡಿ ಹಂಚಿಕೊಳ್ಳುತ್ತಿದ್ದಾರೆ.

  ವಿರಾಟ್ ಕೊಹ್ಲಿ ಗೆ ಹೇರ್ ಕಟ್ ಮಾಡಿದ ಅನುಷ್ಕಾ | Filmibeat Kannada

  ಸ್ಟಾರ್‌ಗಳ ವಿಡಿಯೋಗಳಿಗೆ ವಿಭಿನ್ನ ರೀತಿಯ ಕಾಮೆಂಟ್‌ಗಳು ಬರುತ್ತಿವೆ. ಕೆಲವು ಅಭಿಮಾನಿಗಳು ಈ ವಿಡಿಯೋಗಳನ್ನು ಮೆಚ್ಚಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಇಂತಹ ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಮೋಜು ಮಸ್ತಿಗಳು ಬೇಕೇ? ಸಿನಿಮಾ, ಕ್ರೀಡೆ, ಜಾಹೀರಾತುಗಳಲ್ಲಿ ಕೋಟಿಗಟ್ಟಲೆ ದುಡಿಯುತ್ತೀರಿ. ಜನರು ಕಷ್ಟದಲ್ಲಿ ಸಾಯುತ್ತಿರುವಾಗ ನೀವು ಸಂಭ್ರಮಿಸುತ್ತಿದ್ದೀರಾ ಎಂದು ಕಿಡಿ ಕಾರುತ್ತಿದ್ದಾರೆ. ಈ ಸಾಲಿಗೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಸೇರ್ಪಡೆಯಾಗಿದ್ದಾರೆ.

  ಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದ ವಿರಾಟ್ ಪತ್ನಿ: ಕ್ರಿಕೆಟ್ ಆಟಗಾರ್ತಿಯಾದ ನಟಿ ಅನುಷ್ಕಾಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದ ವಿರಾಟ್ ಪತ್ನಿ: ಕ್ರಿಕೆಟ್ ಆಟಗಾರ್ತಿಯಾದ ನಟಿ ಅನುಷ್ಕಾ

  ಹೇರ್ ಕಟ್ ಮಾಡಿದ ಅನುಷ್ಕಾ

  ಹೇರ್ ಕಟ್ ಮಾಡಿದ ಅನುಷ್ಕಾ

  ಲಾಕ್‌ಡೌನ್ ಕಾರಣದಿಂದ ಕ್ವಾರೆಂಟೀನ್‌ನಲ್ಲಿರುವ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸಮಯ ಕಳೆಯಲು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮನೆಯಲ್ಲಿರುವ ಕೊಹ್ಲಿ ಹೊರಗೆ ಹೋಗಲು ಸಾಧ್ಯವಾಗದ ಕಾರಣ ಅನುಷ್ಕಾ ಶರ್ಮಾ ಅವರೇ ಕೊಹ್ಲಿಗೆ ಹೇರ್‌ ಕಟ್ ಮಾಡಿದ್ದಾರೆ. ಅದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

  ಅನುಷ್ಕಾ ಸೃಷ್ಟಿಸಿದ ಹೊಸ ಲುಕ್

  ಕತ್ತರಿ ಹಿಡಿದ ಅನುಷ್ಕಾ, ಕೊಹ್ಲಿ ತಲೆಗೂದಲನ್ನು ಕತ್ತರಿಸಿದ್ದಾರೆ. 'ಇದು ಕ್ವಾರಂಟೀನ್ ನಿಮಗೆ ಮಾಡಿರುವುದು' ಎಂದು ಅನುಷ್ಕಾ ತಮ್ಮ ವಿಡಿಯೋಗೆ ಕ್ಯಾಪ್ಷನ್ ಹಾಕಿದ್ದಾರೆ. 'ಕಿಚನ್ ಕತ್ತರಿಯಿಂದ ಹೇರ್ ಕಟ್ ಮಾಡುತ್ತೀಯ' ಎಂದು ಕೊಹ್ಲಿ ಹೇಳಿದ್ದಾರೆ. 'ಇದು ನಾನು ಸೃಷ್ಟಿಸಿದ ಹೊಸ ಲುಕ್' ಎಂದು ಅನುಷ್ಕಾ ಖುಷಿಪಟ್ಟಿದ್ದಾರೆ.

  'ಟೀಂ ಇಂಡಿಯಾ ಆಯ್ಕೆ ಸಮಿತಿ ಅನುಷ್ಕಾಗೆ ಟೀ ಸಪ್ಲೈ ಮಾಡುತ್ತಿದ್ದರು' ಆರೋಪಕ್ಕೆ ಅನುಷ್ಕಾ ಖಡಕ್ ಪ್ರತಿಕ್ರಿಯೆ'ಟೀಂ ಇಂಡಿಯಾ ಆಯ್ಕೆ ಸಮಿತಿ ಅನುಷ್ಕಾಗೆ ಟೀ ಸಪ್ಲೈ ಮಾಡುತ್ತಿದ್ದರು' ಆರೋಪಕ್ಕೆ ಅನುಷ್ಕಾ ಖಡಕ್ ಪ್ರತಿಕ್ರಿಯೆ

  ಸುಂದರವಾದ ಹೇರ್‌ ಕಟ್

  ಸುಂದರವಾದ ಹೇರ್‌ ಕಟ್

  ಅನುಷ್ಕಾ ಸೃಷ್ಟಿಸಿದ ಹೊಸ ಹೇರ್ ಸ್ಟೈಲ್‌ಅನ್ನು ಕೊಹ್ಲಿ ಮೆಚ್ಚಿಕೊಂಡಿದ್ದಾರೆ. 'ಗೆಳೆಯರೇ ಸ್ವಲ್ಪ ನೋಡಿ. ಇದು ಬಹಳ ಚೆನ್ನಾಗಿದೆ. ನನ್ನ ಹೆಂಡತಿ ಮಾಡಿದ ಸುಂದರವಾದ ಹೇರ್ ಕಟ್' ಎಂದು ಕೊಹ್ಲಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

  ಮೊದಲು ಸಹಾಯ ಮಾಡಿ

  ಮೊದಲು ಸಹಾಯ ಮಾಡಿ

  'ಮೊದಲು ದೇಶಕ್ಕೆ ಸಹಾಯ ಮಾಡಿ' ಎಂದು ಅನೇಕರು ಈ ವಿಡಿಯೋ ಹಾಕಿದ ಅನುಷ್ಕಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಮಕ್ಕಳು ದೇಣಿಗೆ ನೀಡುತ್ತಿದ್ದಾರೆ, ಲೆಜೆಂಡ್‌ಗಳು ಮನೆಯಲ್ಲಿ ಆಟವಾಡುತ್ತಿದ್ದಾರೆ' ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.

  ದೇಶಕ್ಕಾಗಿ ಈಗ ಕೆಲಸ ಮಾಡಿ

  ದೇಶಕ್ಕಾಗಿ ಈಗ ಕೆಲಸ ಮಾಡಿ

  ನಿಮ್ಮಿಂದ ನಾವು ಈ ಸಂದರ್ಭದಲ್ಲಿ ನಿರೀಕ್ಷಿಸುತ್ತಿರುವುದು ಒಂದಷ್ಟು ನೆರವನ್ನು. ನಿಮ್ಮಲ್ಲಿ ಸಿರಿವಂತಿಕೆ ಹೆಚ್ಚಾಗಿಯೇ ಇದೆ. ದೇಶಕ್ಕಾಗಿ ಆಡುವುದು, ನಟಿಸುವುದು ಮುಂತಾದ ಮಾತುಗಳನ್ನು ನಾವು ನಿರೀಕ್ಷಿಸುವುದು ಈಗ. ಜನರು ಹೊರಗೆ ಬರಲಾಗದೆ, ದುಡಿಮೆ ಇಲ್ಲದೆ ಪರದಾಡುವಾಗ ಅವರಿಗೆ ನೆರವಾಗಲು ನಿಲ್ಲಬೇಕಾದವರು ನೀವು. ಮನೆಯಲ್ಲಿ ಕುಳಿತು ನೀವು ಸುರಕ್ಷಿತರಾಗಿರಿ ಎಂದರೆ ಬದುಕು ನಡೆಯುವುದಿಲ್ಲ. ನಿಮ್ಮ ದೇಣಿಗೆ ನೂರಾರು ಜನರಿಗೆ ನೆರವಾಗುತ್ತದೆ. ದಯವಿಟ್ಟು ಇಂತಹ ವಿಡಿಯೋಗಳನ್ನು ಹಾಕುವ ಬದಲು ಸಹಾಯ ಮಾಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

  English summary
  Anushka Sharma has shared a video cutting hair of Virat Kohli at home. Netizens slammed both to not donating anything in this needy time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X