For Quick Alerts
  ALLOW NOTIFICATIONS  
  For Daily Alerts

  ವಿಚಿತ್ರ ಬಟ್ಟೆ ಧರಿಸಿ ಟ್ರೋಲ್ ಆದ ಪ್ರಿಯಾಂಕಾ ಚೋಪ್ರಾ; ನೆಟ್ಟಿಗರಿಗೆ ನಟಿ ಹೇಳಿದ್ದೇನು?

  |

  ಬಾಲಿವುಡ್ ನಟಿ, ಫ್ಯಾಷನ್ ಐಕಾನ್ ಪ್ರಿಯಾಂಕಾ ಚೋಪ್ರಾ ಭಿನ್ನ ವಿಭಿನ್ನ ಬಟ್ಟೆಗಳನ್ನು ಧರಿಸಿ ಆಗಾಗ ಸುದ್ದಿಯಲ್ಲಿರುತ್ತಾರೆ. ಪತಿ ನಿಕ್ ಜೋನಸ್ ಜೊತೆ ಅಮೆರಿಕಾದಲ್ಲಿ ನೆಲೆಸಿರುವ ಪ್ರಿಯಾಂಕಾ ಸದ್ಯ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ತಮ್ಮ ಆತ್ಮಚರಿತ್ರೆ ಅನ್ ಫಿನಿಶಿಡ್ ಬಿಡುಗಡೆ ಆಗಿದ್ದು, ಉತ್ತಮ ಮರಾಟವಾಗಿದೆ.

  ನೆಟ್ಟಿಗರಿಗೆ ಪ್ರಿಯಾಂಕ ಚೋಪ್ರಾ ಏನ್ ಹೇಳಿದ್ದಾರೆ ಗೊತ್ತಾ? | Priyanka Chopra | Filmibeat Kannada

  ಇದೆಲ್ಲದರ ನಡುವೆ ಪ್ರಿಯಾಂಕಾ ಚೋಪ್ರಾ ವಿಚಿತ್ರ ಬಟ್ಟೆ ಧರಿಸಿರುವ ಫೋಟೋ ಈಗ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಮ್ಯಾಗಜಿನ್ ಗೆ ವಿಚಿತ್ರವಾಗಿ ಫೋಟೋಶೂಟ್ ಮಾಡಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ. ಪ್ರಿಯಾಂಕಾ ಫೋಟೋಗಳು ಟ್ರೋಲ್ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಮೇಮ್ ಗಳನ್ನು ಮಾಡಿ ಶೇರ್ ಮಾಡುತ್ತಿದ್ದಾರೆ.

  ಅಮೆರಿಕದಲ್ಲಿ ಪ್ರಿಯಾಂಕಾ ಮನೆ ಗೃಹಪ್ರವೇಶ; ಹಿಂದೂ ಸಂಪ್ರದಾಯ ಮರೆಯದ ನಟಿ

  ಚೆಂಡಿನ ಹಾಗೆ ಇರುವ ಬಟ್ಟೆ ಧರಿಸಿ ಪ್ರಿಯಾಂಕಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಹಸಿರು ಬಣ್ಣದ ಬಟ್ಟೆಯ ಮೇಲೆ ಕಪ್ಪು ಬಣ್ಣದ ಚುಕ್ಕಿಗಳಿವೆ. ಪ್ರಿಯಾಂಕಾ ಧರಿಸಿರುವ ಈ ಬಟ್ಟೆ ಈಗ ಟ್ರೋಲ್ ಪೇಜ್ ಗಳಲ್ಲಿ ರಾರಾಜಿಸುತ್ತಿವೆ. ಕ್ರಿಯೇಟಿವ್ ಆಗಿರುವ ಟ್ರೋಲ್ ಗಳನ್ನು ನೋಡಿ ಪ್ರಿಯಾಂಕಾ ಮೆಚ್ಚಿಕೊಂಡಿದ್ದಾರೆ.

  ಸಾಮಾನ್ಯವಾಗಿ ಸೆಲೆಬ್ರಿಟಿಗಳು ಟ್ರೋಲ್ ಗಳಿಂದ ದೂರ ಸರಿಯುತ್ತಾರೆ. ಆದರೆ ಪ್ರಿಯಾಂಕಾ ಕ್ರೀಯಾಶೀಲವಾಗಿರುವ ಟ್ರೋಗಳನ್ನು ನೋಡಿ ಖುಷಿ ಪಟ್ಟು, ಕೆಲವು ಟ್ರೋಲ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ. ಪ್ರಿಯಾಂಕಾ ಧರಿಸಿರುವ ಬಟ್ಟೆಯನ್ನು ಪಂಜಾಬಿ ಪೊಲೀಸರಿಗೆ ಹೋಲಿಸಲಾಗಿದೆ. ಇನ್ನು ಪ್ರಿಯಾಂಕಾ ಅವರನ್ನು ಎಲ್ಲಿ ಕೂರಿಸಲು ಸಾಧ್ಯವೋ ಎಲ್ಲಾ ಕೂರಿಸಿದ್ದಾರೆ.

  ಪಟಾಕಿಗಳ ನಡುವೆ, ಕ್ರಿಕೆಟ್ ಮೈದಾನದಲ್ಲಿ, ಪ್ರಿಯಾಂಕಾ ಚೋಪ್ರಾ ಅವರನ್ನು ಕ್ಯಾಚ್ ಹಿಡಿಯುತ್ತಿರುವ ವಿರಾಟ್ ಕೊಹ್ಲಿ ಹೀಗೆ ತರಹೇವಾರಿ ಟ್ರೋಲ್ ಗಳು ಹರಿದಾಡುತ್ತಿದ್ದು, ಈ ಎಲ್ಲಾ ಟ್ರೋಲ್ ಗಳನ್ನು ಪ್ರಿಯಾಂಕಾ ಶೇರ್ ಮಾಡಿದ್ದಾರೆ. ಪ್ರಿಯಾಂಕಾ ಶೇರ್ ಮಾಡಿರುವ ಪೋಸ್ಟ್ ಗಳಿಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ.

  ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಪ್ರಿಯಾಂಕಾ ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಪ್ರಿಯಾಂಕಾ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಎರಡು ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಪ್ರಿಯಾಂಕಾ ಬಾಲಿವುಡ್ ನಲ್ಲಿ ಕೊನೆಯದಾಗಿ ವೈಟ್ ಟೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  English summary
  Netizens troll on Priyanka chopra's ball dress. She react about trolls.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X