For Quick Alerts
  ALLOW NOTIFICATIONS  
  For Daily Alerts

  ರಿಶಿ ಕಪೂರ್ ಅಂತಿಮ ಸಂಸ್ಕಾರದಲ್ಲಿ ಮಾನವೀಯತೆ ಮೆರೆದರೂ ಟ್ರೋಲ್ ಆದ ಆಲಿಯಾ ಭಟ್

  |

  ನಿನ್ನೆ ನಿಧನರಾದ ನಟ ರಿಶಿ ಕಪೂರ್ ಅಂತಿಮ ವಿಧಿ ವಿಧಾನಗಳು ನಿನ್ನೆ ಆಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನೆರವೇರಿದೆ. ರಣಬೀರ್ ಗರ್ಲ್‌ಫ್ರೆಂಡ್ ಆಗಿರುವ ಆಲಿಯಾ ಭಟ್ ಸಹ ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾಗಿದ್ದರು.

  ಸಾವಿಗೂ ಮುನ್ನ ರಿಷಿ ಕಪೂರ್ ಆಸ್ಪತ್ರೆಯಲ್ಲಿ ಕೇಳಿದ ಹಾಡು ಇದೇ | Rishi Kapoor | Filmibeat Kannada

  ಅಂತಿಮ ವಿಧಿ ವಿಧಾನ ನಡೆಯುವಾಗ ಆಲಿಯಾ ಭಟ್ ತಮ್ಮ ಮೊಬೈಲ್ ಫೋನ್ ಹಿಡಿದು ನಿಂತಿದ್ದ ಚಿತ್ರ ಭಾರಿ ವೈರಲ್ ಆಗಿತ್ತು. ಆ ಚಿತ್ರದ ಬಗ್ಗೆ ಹಲವಾರು ನೆಗೆಟಿವ್ ಕಮೆಂಟ್‌ಗಳು ಬಂದಿದ್ದವು.

  ಆ ಫೊಟೊವನ್ನು ಬಳಸಿ ಆಲಿಯಾ ಭಟ್ ಮೇಲೆ ಮುಗಿಬಿದ್ದಿದ್ದರು ನೆಟ್ಟಿಗರು. ಅಂತಿಮ ವಿಧಿ-ವಿಧಾನ ನಡೆಯುವ ಸಮಯದಲ್ಲಿ ಆಲಿಯಾ ಭಟ್ ಮೊಬೈಲ್ ಬಳಸುತ್ತಿದ್ದುದು ರಿಶಿ ಕಪೂರ್ ಗೆ ಮಾಡಿದ ಅವಮಾನ, ಆಲಿಯಾ ಭಟ್‌ ಗೆ ಗಂಭೀರತೆ ಇಲ್ಲವೆಂದು ಟ್ರೋಲ್ ಮಾಡಿದ್ದರು. ಆದರೆ ನಿಜ ಸಂಗತಿ ಬೇರೆಯೇ ಇದೆ.

  ಆಲಿಯಾ ಭಟ್ ಮೊಬೈಲ್ ಬಳಸಿದ್ದು ನಿಜ

  ಆಲಿಯಾ ಭಟ್ ಮೊಬೈಲ್ ಬಳಸಿದ್ದು ನಿಜ

  ರಿಶಿ ಕಪೂರ್ ಅವರ ಅಂತಿಮ ವಿಧಿ ವಿಧಾನ ನಡೆಯುವ ವೇಳೆ ಆಲಿಯಾ ಭಟ್ ಮೊಬೈಲ್ ಬಳಸಿದ್ದು ನಿಜ ಆದರೆ ಅದು ಒಳ್ಳೆಯ ಕಾರಣಕ್ಕೆ. ಆಲಿಯಾ ಭಟ್ ಮೊಬೈಲ್ ಬಳಸಿದ್ದರಿಂದ ರಿಶಿ ಕಪೂರ್ ಅತ್ಯಾಪ್ತರೊಬ್ಬರು ಅವರ ಅಂತಿಮ ವಿಧಿ ವಿಧಾನ ನೋಡುವಂತಾಯಿತು.

  ಆಲಿಯಾ ಭಟ್ ಅನ್ನು ತೆಗಳುತ್ತಿರುವ ಟ್ರೋಲಿಗರು

  ಆಲಿಯಾ ಭಟ್ ಅನ್ನು ತೆಗಳುತ್ತಿರುವ ಟ್ರೋಲಿಗರು

  ಇನ್ನೊಂದು ವರ್ಗ, ಆಲಿಯಾ ಭಟ್ ಕಪೂರ್ ಕುಟುಂಬಕ್ಕೆ ಲಕ್ಕಿ ಅಲ್ಲ ಎಂದು ಸಹ ತೆಗಳುತ್ತಿದ್ದಾರೆ. ಆಲಿಯಾ ಭಟ್ ಜೊತೆ ರಣಬೀರ್ ಪ್ರೇಮ ಶುರುವಾದಾಗಿನಿಂದಲೂ ರಿಶಿ ಕಪೂರ್ ಆರೋಗ್ಯ ಸರಿಯಿಲ್ಲ. ಈಗ ಅವರೇ ಹೊರಟು ನಿಂತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

  ರಿಶಿ ಕಪೂರ್ ಮಗಳು ಬರಲಾಗಿರಲಿಲ್ಲ

  ರಿಶಿ ಕಪೂರ್ ಮಗಳು ಬರಲಾಗಿರಲಿಲ್ಲ

  ಹೌದು, ರಿಶಿ ಕಪೂರ್ ಮಗಳು ರಿಧಿಮಾ ಕಪೂರ್, ಲಾಕ್‌ಡೌನ್ ಕಾರಣದಿಂದಾಗಿ ಅಂತಿಮ ವಿಧಿ-ವಿಧಾನದಲ್ಲಿ ಭಾಗವಹಿಸಲಾಗಿರಲಿಲ್ಲ. ದೆಹಲಿಯಲ್ಲಿದ್ದ ಅವರು ಮುಂಬೈಗೆ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಅವರಿಗೆ ವಿಡಿಯೋ ಕಾಲ್ ಮಾಡಿ, ಅಲ್ಲಿಂದಲೇ ಅಪ್ಪನ ಅಂತಿಮ ವಿಧಿ-ವಿಧಾನ ನೋಡುವಂತೆ ಮಾಡಿದರು ಆಲಿಯಾ ಭಟ್.

  ಮನಕಲುಕುವ ಅಂತಿಮ ವಿಧಿ-ವಿಧಾನದ ಚಿತ್ರ

  ಮನಕಲುಕುವ ಅಂತಿಮ ವಿಧಿ-ವಿಧಾನದ ಚಿತ್ರ

  ಅಂತಿಮ ವಿಧಿ-ವಿಧಾನ ನಡೆವಾಗ ರಣಬೀರ್ ಕಪೂರ್, ನೀತು ಕಪೂರ್ ಸೇರಿದಂತೆ ಹಲವು ಆಪ್ತರು ಅಲ್ಲಿ ಹಾಜರಿದ್ದರು. ಅಳುತ್ತಿದ್ದ ನೀತು ಅವರ ಚಿತ್ರ ಮನಕಲುಕುವಂತಿತ್ತು, ಅಲ್ಲೇ ಪಕ್ಕದಲ್ಲಿ ನಿಂತಿದ್ದ ಆಲಿಯಾ ಭಟ್ ಅಳುತ್ತಲೇ ಮೊಬೈಲ್ ಅನ್ನು ಹಿಡಿದುಕೊಂಡಿದ್ದರು.

  ಆಲಿಯಾ ಭಟ್-ರಣಬೀರ್ ವಿವಾಹ ಸಾಧ್ಯತೆ

  ಆಲಿಯಾ ಭಟ್-ರಣಬೀರ್ ವಿವಾಹ ಸಾಧ್ಯತೆ

  ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಆಗುವ ಸಂಭವ ಇದೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕುಟುಂಬಗಳು ಈ ಬಗ್ಗೆ ಈಗಾಗಲೇ ಮಾತುಕತೆ ನಡೆಸಿವೆ ಎನ್ನಲಾಗಿತ್ತು. ಆದರೆ ಮಗನ ಮದುವೆ ನೋಡದೇ ರಿಶಿ ಕಪೂರ್ ಹೊರಟುಬಿಟ್ಟಿದ್ದಾರೆ.

  English summary
  Social Media people trolling Alia Bhatt for using mobile in Rishi Kapoor final ritual. Alia Bhatt used mobile for good reason.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X