»   » ಆಸ್ಕರ್ ಗೆ ಆಯ್ಕೆಯಾದ 'ನ್ಯೂಟನ್' ಚಿತ್ರದಲ್ಲಿ ಅಂತಹದ್ದೇನಿದೆ?

ಆಸ್ಕರ್ ಗೆ ಆಯ್ಕೆಯಾದ 'ನ್ಯೂಟನ್' ಚಿತ್ರದಲ್ಲಿ ಅಂತಹದ್ದೇನಿದೆ?

Posted By:
Subscribe to Filmibeat Kannada

2018ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ರಾಜ್ ಕುಮಾರ್ ರಾವ್ ನಟನೆ 'ನ್ಯೂಟನ್' ಚಿತ್ರ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ. ಈ ಬಾರಿಯ ಆಸ್ಕರ್ ಗೆ ಹಿಂದಿ ಸಿನಿಮಾ 'ನ್ಯೂಟನ್' ಆಯ್ಕೆ ಎಂದು ಘೋಷಿಸುತ್ತಿದ್ದಂತೆ ಚಿತ್ರಪ್ರೇಮಿಗಳಲ್ಲಿ ಒಂದೇ ಕುತೂಹಲ.

ಈ 'ನ್ಯೂಟನ್ ಸಿನಿಮಾ ಯಾವುದು? ಯಾರು ನಾಯಕ? ಕಥೆ ಏನು? ಆಸ್ಕರ್ ಗೆ ಆಯ್ಕೆಯಾಗುವಂತಹದ್ದೇನಿದೆ ಈ ಚಿತ್ರದಲ್ಲಿ ಎಂದು ತಲೆಕೆಡಿಸಿಕೊಂಡು ಯೋಚನೆ ಮಾಡ್ತಿದ್ದಾರೆ.

ರಾಜ್ ಕುಮಾರ್ ರಾವ್ ಅಭಿನಯದ ಚಿತ್ರ ಆಸ್ಕರ್ ಸ್ಪರ್ಧೆಗೆ ಎಂಟ್ರಿ

'ನ್ಯೂಟನ್' ಚಿತ್ರದ ಬಗ್ಗೆ ಮತ್ತು ಅದರ ವಿಶೇಷತೆಗಳ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ಓದಿ....

ನ್ಯೂಟನ್ ಗೆ ಡಬಲ್ ಖುಷಿ

ಒಂದು ಕಡೆ ಸಿನಿಮಾ ತೆರೆಕಂಡಿದ್ದರೇ, ಮತ್ತೊಂದೆಡೆ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗಿರುವುದು 'ನ್ಯೂಟನ್' ಚಿತ್ರಕ್ಕೆ ಡಬಲ್ ಖುಷಿ ತಂದಿದೆ. ಇನ್ನು ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡ ದೊರೆತಿದೆ.

'ನ್ಯೂಟನ್' ಕಥಾಹಂದರ

‘ನ್ಯೂಟನ್' ಚಿತ್ರದಲ್ಲಿ ಪ್ರಜಾಪ್ರಭುತ್ವದ ಮಿತಿಗಳನ್ನು ಹಾಸ್ಯಮಯವಾಗಿ ಚಿತ್ರಿಸಲಾಗಿದೆ. ವೃತ್ತಿಯಲ್ಲಿ ಕ್ಲರ್ಕ್ ಆಗಿರುವ ನಾಯಕ, ನಕ್ಸಲ್ ಪೀಡಿತ ಗ್ರಾಮಕ್ಕೆ ಚುನಾವಣೆ ಹಿನ್ನೆಲೆ ಕರ್ತವ್ಯ ನಿರ್ವಹಿಸಲು ನೇಮಕವಾಗುತ್ತಾರೆ. ನಕ್ಸಲರ ಬೆದರಿಕೆಯಿಂದಾಗಿ, ಜೀವಭಯದಿಂದ ಮತದಾನದಲ್ಲಿ ಪಾಲ್ಗೊಳ್ಳದ ಗ್ರಾಮಸ್ಥರು, ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಲಾಗದೆ ಅನುಭವಿಸುವ ತುಮುಲವನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ.

ರಾಜಕುಮಾರ್ ರಾವ್ ನಾಯಕ

ರಾಜಕುಮಾರ್ ರಾವ್ ನಾಯಕನಾಗಿ ಅಭಿನಯಿಸಿದ್ದು, ವೈಯಕ್ತಿಕವಾಗಿ ರಾಜ್ ಕುಮಾರ್ ರಾವ್ ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದೆ. ಪಂಕಜ್ ತ್ರಿಪಾಠಿ, ರಘುವೀರ್ ಯಾದವ್, ಅಂಜಲಿ ಪಾಟೀಲ್ ಹಾಗೂ ಸಂಜಯ್ ಮಿಶ್ರಾ ಚಿತ್ರದ ಮುಖ್ಯ ತಾರಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

ಅಮಿತ್ ಮಾಸುರಕರ್ ನಿರ್ದೇಶನ

ಅಂದ್ಹಾಗೆ, ನ್ಯೂಟನ್ ಚಿತ್ರಕ್ಕೆ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಅಮಿತ್ ಮಾಸುರಕರ್. ಇದು ಇವರು ನಿರ್ದೇಶನದ ಎರಡನೇ ಸಿನಿಮಾ. ಇದಕ್ಕು ಮುಂಚೆ 'ಸೊಲೊಮನ್ ಕೀಡಾ' ಚಿತ್ರವನ್ನ ನಿರ್ದೇಶಿಸಿದ್ದು, ಹಲವು ಚಿತ್ರಗಳಿಗೆ ಬರಹಗಾರನಾಗಿ ಕೆಲಸ ಮಾಡಿದ್ದಾರೆ.

ಆಸ್ಕರ್ ಗೆ ಆಯ್ಕೆ ಆಗಿರುವ ವಿದೇಶಿ?

ಭಾರತದ 'ನ್ಯೂಟನ್' ಜೊತೆ ಕಾಂಬೋಡಿಯಾದ ‘ಫರ್ಸ್ಟ್ ದೆ ಕಿಲ್ಲಡ್ ಮೈ ಫಾದರ್‘, ಪಾಕಿಸ್ತಾನದ ‘ಸಾವನ್', ಸ್ವೀಡನ್‌ನ ‘ದಿ ಸ್ಕ್ವೇರ್', ಜರ್ಮನಿಯ ‘ಇನ್ ದಿ ಫೇಡ್' ಹಾಗೂ ಚಿಲಿಯ ‘ಎ ಫೆಂಟಾಸ್ಟಿಕ್ ವುಮನ್' ಚಲನಚಿತ್ರಗಳು ಆಸ್ಕರ್‌ ವಿದೇಶಿ ಭಾಷಾ ವಿಭಾಗದಲ್ಲಿ ಸ್ಪರ್ಧೆಯಲ್ಲಿವೆ.

English summary
Newton has been selected as Indian’s official entry to the Oscars, star Rajkummar Rao has tweeted. Newton was released in theatres on Friday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada