»   » ಇಬ್ಬರು ಹೆಣ್ಮಕ್ಕಳ ಪಾಲಿಗೆ ಅಮ್ಮ ಶ್ರೀದೇವಿ ತುಂಬಾ ಕಟ್ಟುನಿಟ್ಟು, ಬಹಳ ಸ್ಟ್ರಿಕ್ಟು.!

ಇಬ್ಬರು ಹೆಣ್ಮಕ್ಕಳ ಪಾಲಿಗೆ ಅಮ್ಮ ಶ್ರೀದೇವಿ ತುಂಬಾ ಕಟ್ಟುನಿಟ್ಟು, ಬಹಳ ಸ್ಟ್ರಿಕ್ಟು.!

Posted By:
Subscribe to Filmibeat Kannada

''ಸ್ಟಾರ್' ಮಕ್ಕಳಿಗೆ ಏನ್ ಕಮ್ಮಿ ಹೇಳಿ... ವಿದ್ಯೆ ನೈವೇದ್ಯ ಆದರೂ ಐಷಾರಾಮ ಜೀವನಕ್ಕೆ ಏನೂ ಕೊರತೆ ಇಲ್ಲ. ಹೇಳಿ ಕೇಳಿ ತಾರೆಯರ ಮಕ್ಕಳಾದ್ರಿಂದ, ರಾತ್ರಿ ಪೂರ್ತಿ ಪಾರ್ಟಿ.. ಹಗಲು ಪೂರ ನಿದ್ದೆ ಮಾಡುವ ಜಾಯಮಾನ ಅವರದ್ದು'' ಎಂದು ನಮ್ಮ-ನಿಮ್ಮಂತೆ ಸಾಮಾನ್ಯ ಜನರು ಭಾವಿಸಬಹುದು. ಇದು ಕೆಲವರ ವಿಚಾರದಲ್ಲಿ ಸತ್ಯ ಆಗಿರಲೂಬಹುದು. ಆದ್ರೆ, ಶ್ರೀದೇವಿ ಮಕ್ಕಳ ವಿಚಾರದಲ್ಲಿ ಮಾತ್ರ ಇದು ತದ್ವಿರುದ್ಧ.!

ಹೌದು, ಬಾಲಿವುಡ್ ನಟಿ ಶ್ರೀದೇವಿ ಮಕ್ಕಳ ಪಾಲಿಗೆ ಲೇಟ್ ನೈಟ್ ಪಾರ್ಟಿ ಗಗನಕುಸುಮ.! ಯಾಕಂದ್ರೆ, ತಮ್ಮ ಇಬ್ಬರು ಹೆಣ್ಮಕ್ಕಳ ಪಾಲಿಗೆ ಶ್ರೀದೇವಿ ಕಟ್ಟುನಿಟ್ಟಿನ ತಾಯಿ.

No Late Night Parties For Jhanvi and Khushi: Sridevi Sets STRICT Rules

ತಮ್ಮ ಮಕ್ಕಳಾದ ಜಾಹ್ನವಿ ಹಾಗೂ ಖುಷಿಗೆ ನಟಿ ಶ್ರೀದೇವಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದಾರೆ. ಹೊತ್ತು ಮುಳುಗುವ ಮುನ್ನ, ಖುಷಿ ಹಾಗೂ ಜಾಹ್ನವಿ ಮನೆ ಸೇರಿಕೊಳ್ಳಬೇಕಂತೆ. ಇಲ್ಲಾಂದ್ರೆ, ಪರಿಣಾಮ ನೆಟ್ಟಗೆ ಇರಲ್ವಂತೆ.

ಮಕ್ಕಳು ಎಲ್ಲೇ ಹೊರಗೆ ಹೋದರೂ, ಅವರಿಗೆ ಆಗಾಗ ಫೋನ್ ಮಾಡಿ ಕಷ್ಟ-ಸುಖ ವಿಚಾರಿಸಿಕೊಳ್ಳುತ್ತಿರುತ್ತಾರಂತೆ ಶ್ರೀದೇವಿ. ಯಾಕೆ ಅಂದ್ರೆ ಮಕ್ಕಳು ಮನೆ ಸೇರುವವರೆಗೂ ಅವರಿಗೆ ಚಿಂತೆ ತಪ್ಪಿದ್ದಲ್ಲ.

ಇದು ಶ್ರೀದೇವಿ ಪುತ್ರಿಯ ಸಿನಿಮಾ ಕಥೆಯಲ್ಲ, ಮದುವೆ ಸುದ್ದಿ.!

ಲೇಟ್ ನೈಟ್ ಪಾರ್ಟಿಗಳಲ್ಲಿ ಭಾಗಿಯಾಗಲು ಮಕ್ಕಳಿಗೆ ಶ್ರೀದೇವಿ ಅನುಮತಿ ನೀಡುವುದಿಲ್ಲವಂತೆ. ಶಿಸ್ತಿನಿಂದ ಮಕ್ಕಳನ್ನು ಬೆಳೆಸಿರುವ ಶ್ರೀದೇವಿ ಬಗ್ಗೆ ಜಾಹ್ನವಿ ಹಾಗೂ ಖುಷಿಗೆ ಯಾವುದೇ ಬೇಸರವಾಗಲಿ, ಕಂಪ್ಲೇಂಟ್ ಆಗಲಿ ಇಲ್ಲ. ''ನಾನು ಹೇಳಿದ ಹಾಗೆ ಇಬ್ಬರೂ ಚಾಚು ತಪ್ಪದೇ ನಡೆದುಕೊಳ್ಳುತ್ತಾರೆ'' ಎಂದು ಸಂದರ್ಶನವೊಂದರಲ್ಲಿ ಶ್ರೀದೇವಿ ಹೇಳಿದ್ದಾರೆ.

ಮಕ್ಕಳ ಇಷ್ಟ-ಕಷ್ಟಗಳನ್ನು ಚೆನ್ನಾಗಿ ಅರಿತಿರುವ ಶ್ರೀದೇವಿ, ಜಾಹ್ನವಿ ಹಾಗೂ ಖುಷಿಗೆ ಯಾವುದರಲ್ಲೂ ಕಮ್ಮಿ ಮಾಡಿಲ್ಲ. ಸಮಯ ಸಿಕ್ಕಾಗ ಮಕ್ಕಳೊಂದಿಗೆ ಕಾಲ ಕಳೆಯುವ ಶ್ರೀದೇವಿ, ''ಸ್ಟ್ರಿಕ್ಟ್' ಅಮ್ಮ ಆದರೂ ತುಂಬಾ ಕೇರಿಂಗ್'' ಎನ್ನುತ್ತಾರೆ ಪುತ್ರಿಯರು.

English summary
If you think Sridevi's daughters Jhanvi Kapoor and Khushi Kapoor are all out by themselves partying all night and sleeping all day, then you're completely wrong. Mother Sridevi has set strict rules for them.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada