»   » ಶ್ರೀದೇವಿ ಪುತ್ರಿಯ ಸಿನಿಮಾದಲ್ಲಿ ಹೊಸ ನಿಯಮ ಜಾರಿಯಾಗಿದೆ

ಶ್ರೀದೇವಿ ಪುತ್ರಿಯ ಸಿನಿಮಾದಲ್ಲಿ ಹೊಸ ನಿಯಮ ಜಾರಿಯಾಗಿದೆ

Posted By:
Subscribe to Filmibeat Kannada

ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ 'ದಡಕ್' ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಶ್ರೇದೇವಿ ಅವರ ಅಕಾಲಿಕ ಮರಣದ ನಂತರ ಬ್ರೇಕ್ ನೀಡಿದ್ದ ಚಿತ್ರತಂಡ ಮತ್ತೆ ಶೂಟಿಂಗ್ ಆರಂಭಿಸಿದೆ.

ಈ ಮಧ್ಯೆ 'ದಡಕ್' ಚಿತ್ರದ ಸೆಟ್ ನಲ್ಲಿ ಹೊಸ ನಿಯಮ ಜಾರಿ ಮಾಡಲಾಗಿದೆ. ಇತ್ತೀಚಿಗಷ್ಟೆ ದಡಕ್ ಚಿತ್ರದ ಶೂಟಿಂಗ್ ವಿಡಿಯೋ ಲೀಕ್ ಆಗಿತ್ತು. ಜೈಪುರದಲ್ಲಿ ನಡದಿದ್ದ ಚಿತ್ರೀಕರಣದ ಕೆಲವು ದೃಶ್ಯಗಳು ಆನ್ ಲೈನ್ ನಲ್ಲಿ ಲೀಕ್ ಆಗಿದ್ದವು. ಆದ್ದರಿಂದ ಎಚ್ಚೆತ್ತುಕೊಂಡಿರುವ ನಿರ್ಮಾಪಕ ಕರಣ್ ಜೋಹರ್ ಇನ್ಮುಂದೆ ಶೂಟಿಂಗ್ ಸೆಟ್ ಗೆ ಮೊಬೈಲ್ ತರುವಂತಿಲ್ಲ ಎಂದು ಸೂಚಿಸಿದ್ದಾರೆ.

ನೋವಿನಲ್ಲಿರುವ ಜಾಹ್ನವಿಗೆ ಸಂತಸ ತಂದ ಕಪೂರ್ ಸಹೋದರಿಯರು

no-phone-policy-in-janhvi-kapoor-movie

ದಡಕ್ ರೀಮೇಕ್ ಸಿನಿಮಾ ಆಗಿರುವುದರಿಂದ ಕಥೆ ಎಲ್ಲರಿಗೂ ಗೊತ್ತಿದೆ. ಹೀಗಾಗಿ, ಚಿತ್ರದ ಬಗ್ಗೆ ಕುತೂಹಲ ಕಾಪಾಡಿಕೊಳ್ಳವುದು ಚಿತ್ರತಂಡಕ್ಕೆ ಅವಶ್ಯಕತೆಯಾಗಿದೆ. ಬಹುತೇ ಚಿತ್ರೀಕರಣ ಹೊರಾಂಗಣದಲ್ಲಿ ನಡೆಯುತ್ತಿದ್ದು, ದೃಶ್ಯಗಳು ಲೀಕ್ ಆಗದಂತೆ ಜಾಗೃತಿ ವಹಿಸುತ್ತಿದ್ದಾರೆ. ಹೀಗಿದ್ದರೂ ಕೆಲ ದೃಶ್ಯಗಳು ಸೋರಿಕೆಯಾಗಿರುವುದು ನಿಜಕ್ಕೂ ಬೇಸರ ತರಿಸಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಶಶಾಂಕ್.

ಏಪ್ರಿಲ್ ತಿಂಗಳಲ್ಲಿ ಶ್ರೀದೇವಿ ಹೊಸ ಸಿನಿಮಾ ಸೆಟ್ಟೇರಬೇಕಿತ್ತು.!

'ದಡಕ್' ಚಿತ್ರ, ಮರಾಠಿಯ 'ಸೈರಾಟ್' ಚಿತ್ರದ ರೀಮೇಕ್. ಈ ಚಿತ್ರ ಮರಾಠಿ, ಕನ್ನಡದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರವನ್ನ ಹಿಂದಿಯಲ್ಲಿ ರೀಮೇಡ್ ಮಾಡಲಾಗುತ್ತಿದ್ದು, ಶ್ರೀದೇವಿ ಪುತ್ರ ಜಾಹ್ನವಿ ಕಪೂರ್ ಮತ್ತು ಇಶಾನ್ ಕತ್ತೂರ್ ಈ ಚಿತ್ರದ ಮೂಲಕ ಬಿಗ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ. ಜುಲೈ 06 ರಂದು ದಡಕ್ ಸಿನಿಮಾ ತೆರೆಕಾಣಲಿದೆ.

English summary
Dhadak producer Karan Johar has reportedly issued a no-phone policy on set after some scenes from the film were leaked online.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada