For Quick Alerts
  ALLOW NOTIFICATIONS  
  For Daily Alerts

  ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ನೋರಾ ಫತೇಹಿ ದೂರು, ಇದು ಮಾಮೂಲಿ ಜಡೇ ಜಗಳವಲ್ಲ!

  |

  ನಟಿಯರ ನಡುವೆ ವೃತ್ತಿ ಮಾತ್ಸರ್ಯ ಸಾಮಾನ್ಯ. ಆದರೆ ಈ ವೃತ್ತಿ ಮತ್ಸರ ನ್ಯಾಯಾಲಯದ ಮೆಟ್ಟಿಲೇರಿರಲಿಲ್ಲ. ಆದರೆ ಈಗ ನಟಿ ನೋರಾ ಫತೇಹಿ, ಜಾಕ್ವೆಲಿನ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದಕ್ಕೆ ಕೇವಲ ವೃತ್ತಿ ಮತ್ಸರ ಮಾತ್ರವೇ ಕಾರಣವಲ್ಲ.

  ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ನೋರಾ ಫತೇಹಿ ಇಬ್ಬರೂ 200 ಕೋಟಿ ವಂಚನೆ ಪ್ರಕರಣದ ಭಾಗವಾಗಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಆರೋಪಿಯಾಗಿದ್ದರೆ, ನೋರಾ ಫತೇಹಿ ಸಾಕ್ಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ನೋರಾ ಫತೇಹಿ, ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವುದು ಕುತೂಹಲ ಮೂಡಿಸಿದೆ.

  ಜಾಕ್ವೆಲಿನ್ ಫರ್ನಾಂಡೀಸ್ ಕೇಳಿದ್ದು ಅದೊಂದೆ: ವಂಚಕ ಸುಖೇಶ್ ಪತ್ರಜಾಕ್ವೆಲಿನ್ ಫರ್ನಾಂಡೀಸ್ ಕೇಳಿದ್ದು ಅದೊಂದೆ: ವಂಚಕ ಸುಖೇಶ್ ಪತ್ರ

  ನಟಿ ನೋರಾ ಪತೇಹಿ, ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಹದಿನೈದು ಮಾಧ್ಯಮ ಸಂಸ್ಥೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನನ್ನನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ವೃತ್ತಿಯಲ್ಲಿ ಕೆಳಗೆ ತಳ್ಳಲು ಜಾಕ್ವೆಲಿನ್ ನನ್ನ ವಿರುದ್ಧ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಅದನ್ನು ಮಾಧ್ಯಮ ಸಂಸ್ಥೆಗಳು ಪ್ರಚಾರ ಮಾಡುತ್ತಿವೆ. ಜಾಕ್ವೆಲಿನ್ ಹಾಗೂ ಮಾಧ್ಯಮಗಳು ಪರಸ್ಪರ ಒಬ್ಬರಿಗೊಬ್ಬರು ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

  ವೃತ್ತಿಯಲ್ಲಿ ನಾನು ಏರುತ್ತಿರುವ ವೇಗವನ್ನು ಜಾಕ್ವೆಲಿನ್‌ ಫರ್ನಾಂಡೀಸ್‌ ಕೈಲಿ ಸಹಿಸಿಕೊಳ್ಳಲಾಗುತ್ತಿಲ್ಲ. ನನ್ನೊಟ್ಟಿಗೆ ನ್ಯಾಯಯುತವಾಗಿ ಸ್ಪರ್ಧೆ ಮಾಡಲು ಸಾಧ್ಯವಾಗದೆ ನನ್ನ ವಿರುದ್ಧ ತಪ್ಪು ಮಾಹಿತಿಗಳನ್ನು ಹರಿಯಬಿಡುತ್ತಿದ್ದಾರೆ. ನನ್ನ ಖ್ಯಾತೆಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ ನೋರಾ ಫತೇಹಿ.

  ಮಹಾ ವಂಚಕ ಸುಕೇಶ್ ಚಂದ್ರಶೇಖರ್‌ನ 200 ಕೋಟಿ ರುಪಾಯಿ ಸುಲಿಗೆ ಪ್ರಕರಣದಲ್ಲಿ ತನಿಖಾ ಸಂಸ್ಥೆ ಇಡಿಯು ನೋರಾ ಫತೇಹಿ ಹಾಗೂ ಜಾಕ್ವೆಲಿನ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಜಾಕ್ವೆಲಿನ್ ಹಾಗೂ ನೋರಾ ಫತೇಹಿ ಸಹ ಸುಕೇಶ್‌ ಚಂದ್ರಶೇಖರ್ ಅವರಿಂದ ಉಡುಗೊರೆಗಳನ್ನು ಪಡೆದಿದ್ದರು. ಜಾಕ್ವೆಲಿನ್ ಫರ್ನಾಂಡೀಸ್ ಅಂತೂ ಸುಕೇಶ್‌ ಜೊತೆ ತೀರ ಆತ್ಮೀಯವಾಗಿದ್ದರು.

  ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಇಡಿ ಸಂಸ್ಥೆಯು ಆರೋಪಿಯನ್ನಾಗಿಸಿದೆ. ಸುಕೇಶ್‌ನಿಂದ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ಪಡೆದಿದ್ದ ನೋರಾ ಫತೇಹಿಯನ್ನು ಈ ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಇಡಿ ಪರಿಗಣಿಸಿದೆ. ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ.

  ಜಾಕ್ವೆಲಿನ್ ಹಾಗೂ ಸುಕೇಶ್‌ರ ಪ್ರಕರಣ ಹೊರಬಿದ್ದ ಬಳಿಕ ಜಾಕ್ವೆಲಿನ್‌ಗೆ ಸಿನಿಮಾ ಅವಕಾಶಗಳು ಗಣನೀಯವಾಗಿ ಕಡಿಮೆಯಾಗಿದೆ. ಆದರೆ ನೋರಾ ಫತೇಹಿಗೆ ಅವಕಾಶಗಳು ಹೆಚ್ಚಾಗುತ್ತಲೇ ಇವೆ.

  English summary
  Actress Nora Fatehi filed defamation case against actress Jacquline Fernandez and 15 other media companies.
  Monday, December 12, 2022, 19:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X