Don't Miss!
- News
ಕೂರ್ಮಗಿರಿ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
- Technology
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಾಕ್ವೆಲಿನ್ ನಂತರ ವಂಚಕನ ಬಲೆಗೆ ಬಾಲಿವುಡ್ ಬೆಡಗಿ ನೋರಾ ಫತೇಹಿ!
200 ಕೋಟಿ ವಂಚನೆ ಪ್ರಕರಣದಲ್ಲಿ ವಿಕ್ರಾಂತ್ ರೋಣ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೆಸರು ತಳುಕು ಹಾಕಿಕೊಂಡಿದೆ. ಹಾಗಾಗಿ ಜಾರಿ ನಿರ್ದೇಶನಾಲಯ(ಇಡಿ) ಮುಂದೆ ನಟಿ ಹಾಜರಾಗಿದ್ದಾರೆ. ಈ ವೇಳೆ ನಟಿಗೆ ಹಲವು ಗಂಟೆಗಳ ಕಾಲ ಪ್ರಶ್ನೆ ಮಾಡಲಾಗಿದೆ. ವಂಚಕ ಸುಕೇಶ್ ಜೊತೆಗೆ ಸಂಪರ್ಕದಲ್ಲಿ ಇದ್ದರು ಎನ್ನುವ ಸಲುವಾಗಿ ಈಗ ವಿಚಾರಣೆ ಎದುರಿಸುತ್ತಿದ್ದಾರೆ.
ಆದರೆ ಜಾಕ್ವೆಲಿನ್ ಮಾತ್ರವಲ್ಲ. ಈಗ ಮತ್ತೊಬ್ಬ ಬಾಲಿವುಡ್ ನಟಿ ಹೆಸರು ಈ ಪ್ರಕರಣದಲ್ಲಿ ಸಿಲುಕಿರುವುದು ಬೆಳಕಿಗೆ ಬಂದಿದೆ. ಸುಕೇಶ್ ಕೇವಲ ಜಾಕ್ವೆಲಿನ್‌ಗೆ ಮಾತ್ರ ಗಿಫ್ಟ್ ಕೊಡಿಸಿಲ್ಲ. ಐಟಂ ಹಾಡುಗಳಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ನೋರಾ ಫತೇಹಿಗೂ ದುಬಾರಿ ಗಿಫ್ಟ್ ಕೊಟ್ಟಿದ್ದಾನಂತೆ ಸುಕೇಶ್.
ಸದ್ಯ ಪ್ರಕರಣದಲ್ಲಿ ನೋರಾ ಹೆಸರು ಸಿಲುಕಿ ಕೊಂಡಿದೆ. ಆದನಿಂದ ಗಿಫ್ಟ್ ಪಡೆದಿರುವುದೇ ನೋರಾ ಫತೇಹಿಗೆ ಕಂಟಕವಾಗಿದೆ.

ವಂಚನೆ ಪ್ರಕರಣದಲ್ಲಿ 'ದಿಲ್ ಬರ್' ಹಾಡಿನ ಬೆಡಗಿ!
ಬಾಲಿವುಡ್‌ನಲ್ಲಿ ಕೆಲವು ವರ್ಷಗಳಿಂದ ಐಟಂ ಹಾಡುಗಳು ಅಂದರೆ ನೋರಾ ಫತೇಹಿ, ನೋರಾ ಫತೇಹಿ ಅಂದರೆ ಐಟಂ ಹಾಡುಗಳು ಎನ್ನುವಂತಾಗಿದೆ. ಯಾಕೆಂದರೆ ನೋರಾ ಫತೇಹಿ ಉತ್ತಮ ಡ್ಯಾನ್ಸರ್ ಮತ್ತು ಚೆಂದುಳ್ಳಿ ಚೆಲುವೆ. ಹಾಗಾಗಿ ಬಹುತೇಕ ಚಿತ್ರಗಳ ವಿಶೇಷ ಹಾಡುಗಳಲ್ಲಿ ನೋರಾ ನೃತ್ಯಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಆ ಚಿತ್ರದಲ್ಲಿ ನೋರಾ ಫತೇಹಿ ಹಾಡು ಇದೆ ಎಂದರೆ ಅದು ವಿಶೇಷವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಜಾನ್ ಅಬ್ರಾಹಮ್ ನಟನೆಯ 'ಸತ್ಯ ಮೇವ ಜಯತೆ' ಚಿತ್ರದ 'ದಿಲ್‌ಬರ್' ಹಾಡಿನ ಮೂಲಕ ನೋರಾ ಹೆಚ್ಚು ಸದ್ದು ಮಾಡಿದ್ದಳು. ಟಿವಿ ಕಾರ್ಯಕ್ರಮದಲ್ಲಿ ನಿರೂಪಕಿ ಆಗಿ ಕಾಣಿಸಿಕೊಳ್ಳುತ್ತಾ ಇದ್ದ ಕೆನಡಿಯನ್ ಮೂಲಕ ಈ ಬೆಡಗಿ ಈಗ ಬಾಲಿವುಡ್‌ನಲ್ಲಿ ಬೇಡಿಕೆ ಇರುವ ನಟಿ. ಆದರೆ ಈಗ ವಂಚನೆ ಪ್ರಕರಣದಲ್ಲಿ ಈಕೆಯ ಹೆಸರು ಕೇಳಿ ಬರ್ತಿದೆ.

ಸುಕೇಶ್‌ನಿಂದ ನಟಿಗೆ BMW ಕಾರು ಉಡುಗೊರೆ!
ನಟಿ ನೋರಾ ಫತೇಹಿ ವಂಚಕ ಸುಕೇಶ್ ಸಂಪರ್ಕದಲ್ಲಿ ಇದ್ದರು ಎನ್ನುವುದು ತಿಳಿದು ಬಂದಿದೆ. ಅಷ್ಟೇ ಅಲ್ಲ ಸುಕೇಶ್‌ನಿಂದ ನೋರಾ ಫತೇಹಿ ಹಲವು ದುಬಾರಿ ಗಿಫ್ಟ್‌ಗಳನ್ನ ಪಡೆದಿದ್ದಾರೆ ಎನ್ನಲಾಗಿದೆ. ಅದರಲ್ಲಿ ದುಬಾರಿ ಬೆಲೆಯ ಕಾರು ಕೂಡ ಉಡುಗೊರೆಯಾಗಿ ಪಡೆದಿದ್ದಾಳಂತೆ ನೋರಾ. ಇಡಿ ಮುಂದೆ ವಿಚಾರಣೆಗೆ ಹಾಜರಾದ ನೋರಾ ಫತೇಹಿ ಸುಕೇಶ್ ಜೊತೆಗಿನ ನಂಟಿನ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಸುಕೇಶ್ ಮಾತ್ರವಲ್ಲ ಸುಕೇಶ್ ಪತ್ನಿ ಇಂದಲೂ ತನಗೆ ಉಡುಗೊರೆ ಬಂದಿರುವುದಾಗಿ ನೋರಾ ಹೇಳಿ ಕೊಂಡಿದ್ದಾರೆ.

ಸುಕೇಶ್- ನೋರಾ ಫತೇಹಿ ಮೆಸೇಜ್ ಸೀಕ್ರೆಟ್ ಬಯಲು!
ನಟಿ ನೋರಾ ಫತೇಹಿ ಮತ್ತು ಸುಕೇಶ್ ಸಂಪರ್ಕದಲ್ಲಿ ಇದ್ದರು. ಇದನ್ನು ನೋರಾ ಇಡಿ ಮುಂದೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಅವರು ನಡೆಸಿದ ಸಂಭಾಷಣೆ ಕೂಡ ರಿವೀಲ್ ಆಗಿದೆ. ಮೊಬೈಲ್ ಸಂದೇಶದಲ್ಲೇ ಕಾರಿನ ಕುರಿತು ಮಾತನಾಡಲಾಗಿದೆ. ಸುಕೇಶ್ ನೋರಾಗೆ ಯಾವ ಕಾರು ಇಷ್ಟ ಎಂದು ಮೆಏಜ್ ಮಾಡಿದ್ದಾನೆ. ನೋರಾ ರೇಂಜ್ ರೋವರ್ ಕಾರಿನ ಬಗ್ಗೆ ಸಂಭಾಷಣೆ ನಡೆಸಿದ್ದಾರೆ. ನೋರಾಗೆ ಗಿಫ್ಟ್ ಕೊಡಲು ಕಾರಣ ಏನು ಎನ್ನುವುದನ್ನು ಕೂಡ ಮೆಸೇಜ್‌ನಲ್ಲಿ ಸುಕೇಶ್ ಬರೆದಿದ್ದಾನೆ " ಈ ಉಡುಗೊರೆ ನೀಡಲು ಕಾರಣ ಏನು ಎನ್ನುವುದನ್ನು ಸ್ಪಷ್ಟ ಪಡಿಸುತ್ತೇನೆ. ನಮಗೆ ಯಾರಾದರು ವ್ಯಕ್ತಿ ಇಷ್ಟ ಆದರೆ ಅವರಿಗೆ ಉಡುಗೊರೆಗಳನ್ನು ಕೊಡುತ್ತೇವೆ. ಇದು ಹಾಗೆಯೆ" ಎಂದು ಸಂದೇಶ ಕಳುಹಿಸಿದ್ದಾನೆ.

ಪಾರ್ಟಿಯಲ್ಲಿ ನೋರಾಗೆ ಸಿಕ್ಕಿತ್ತು ದುಬಾರಿ ಬ್ಯಾಗ್!
ಇನ್ನು ನೋರಾ ಫತೇಹಿಗೆ ಕೇವಲ ಸುಕೇಶ್ ಮಾತ್ರ ಉಡುಗೊರೆ ನೀಡಿಲ್ಲ. ಆತನ ಪತ್ನಿ ಲೀನಾ ಮರಿಯಾ ಪೌಲ್ ಕೂಡ ನೋರಾಗೆ ದುಬಾರಿ ಬೆಲೆಯ ಗೂಚಿ ಬ್ಯಾಗನ್ನು ಉಡುಗೊರೆಯಾಗಿ ಕೊಟ್ಟಿದ್ದಾರಂತೆ. 2020ರ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ನಡೆದ ಕಾರ್ಯಕ್ರಮಕ್ಕೆ ಲೀನಾ ಮರಿಯಾ ನೋರಾ ಫತೇಹಿ ಅವರನ್ನು ಆಹ್ವಾನಿಸಿದ್ದರಂತೆ. ಆಗ ಪ್ರೀತಿ ವಿಶ್ವಾದ ನೆಪದಲ್ಲಿ ಈ ದುದಾರಿ ಗಿಫ್ಟ್ ನೀಡಿದ್ದಾರಂತೆ. ಈ ವಿಚಾರವನ್ನು ನೋರಾ ಅಧಿಕಾರಿಗಳ ಮುಂದೆ ಹೇಳಿ ಕೊಂಡಿದ್ದಾರೆ.