For Quick Alerts
  ALLOW NOTIFICATIONS  
  For Daily Alerts

  ನಟಿ, ಸಂಸದೆ ನುಸ್ರುತ್ ಗರ್ಭಿಣಿ ವದಂತಿ ಖಚಿತ ಪಡಿಸಿದ ಫೋಟೋ; ಬೇಬಿ ಬಂಪ್ ವೈರಲ್

  |

  ನಟಿ, ಟಿಎಂಸಿ ಸಂಸದೆ ನುಸ್ರುತ್ ಜಹಾನ್ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಕಿತ್ತಾಟದ ಬಳಿಕ ಪತಿ ನಿಖಿಲ್ ಜೈನ್ ನಿಂದ ಶಾಶ್ವತವಾಗಿ ದೂರ ಆಗಿರುವುದಾಗಿ ನುಸ್ರುತ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದರು. ಆದರು ಇಬ್ಬರ ವಿವಾದ ಅಲ್ಲಿಗೆ ನಿಂತಿಲ್ಲ. ನುಸ್ರುತ್ ಗರ್ಭಿಣಿಯಾಗಿದ್ದು, ಆ ಮಗುವಿಗೆ ತಂದೆ ನಾನಲ್ಲ ಎಂದು ನಿಖಿಲ್ ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು.

  ಅಂದಹಾಗೆ ನುಸ್ರುತ್ ಗರ್ಭಿಣಿ ಆಗಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಅಲ್ಲದೆ ಗರ್ಭಿಣಿಯಾದ ಬಳಿಕ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹಾಗಾಗಿ ನುಸ್ರುತ್ ನಿಜಕ್ಕೂ ಗರ್ಭಿಣಿ ಆಗಿದ್ದಾರಾ ಅಥವಾ ವದಂತಿನಾ ಎನ್ನುವ ಅನುಮಾನವಿತ್ತು. ಆದರೀಗ ಬಹಿರಂಗವಾಗಿರುವ ಫೋಟೋ ನುಸ್ರುತ್ ಗರ್ಭಿಣಿ ಎನ್ನುವುದನ್ನು ಖಚಿತ ಪಡಿಸಿದೆ. ಮುಂದೆ ಓದಿ..

  ನಟಿ, ಸಂಸದೆ ನುಸ್ರುತ್- ನಿಖಿಲ್ ಕಿತ್ತಾಟದಲ್ಲಿ ಟ್ರೆಂಡಿಂಗ್ ನಲ್ಲಿರುವ ಯಶ್ ಯಾರು? ನಟಿ, ಸಂಸದೆ ನುಸ್ರುತ್- ನಿಖಿಲ್ ಕಿತ್ತಾಟದಲ್ಲಿ ಟ್ರೆಂಡಿಂಗ್ ನಲ್ಲಿರುವ ಯಶ್ ಯಾರು?

  ನುಸ್ರುತ್ ಬೇಬಿ ಬಂಪ್ ಫೋಟೋ

  ನುಸ್ರುತ್ ಬೇಬಿ ಬಂಪ್ ಫೋಟೋ

  ಗರ್ಭಿಣಿ ನುಸ್ರುತ್ ಸ್ನೇಹಿತರ ಜೊತೆ ಇರುವ ಫೋಟೋ ಲೀಕ್ ಆಗಿದ್ದು ಬೇಬಿ ಬಂಪ್ ಕಾಣುತ್ತಿದೆ. ಬಳಿ ಬಟ್ಟೆ ಧರಿಸಿರುವ ನುಸ್ರುತ್ ಫೋಟೋ ಈಗ ವೈರಲ್ ಆಗಿದೆ. ಜೀ ವಾಹಿನಿಗೆ ಸಿಕ್ಕಿರುವ ಎಕ್ಸ್ ಕ್ಲ್ಯೂಸಿವ್ ಫೋಟೋ ಇದಾಗಿದ್ದು, ನುಸ್ರುತ್ ಗರ್ಭಿಣಿ ಎನ್ನುವುದನ್ನು ಖಚಿತ ಪಡಿಸಿದೆ.

  ತಂದೆ ನಾನಲ್ಲ ಎಂದ ನಿಖಿಲ್ ಜೈನ್

  ತಂದೆ ನಾನಲ್ಲ ಎಂದ ನಿಖಿಲ್ ಜೈನ್

  ನುಸ್ರುತ್ 6 ತಿಂಗಳ ಗರ್ಭಿಣಿ ಎಂದು ಹೇಳಲಾಗುತ್ತಿದೆ. ಆದರೆ ಮಾಜಿ ಪತಿ ನಿಖಿಲ್ ಆ ಮಗುವಿಗೆ ತಾನು ತಂದೆಯಲ್ಲ ಎಂದು ಹೇಳಿದ್ದಾರೆ. ಅನೇಕ ತಿಂಗಳ ಹಿಂದೆಯೇ ತಾನು ನುಸ್ರುತ್ ಯಿಂದ ದೂರ ಆಗಿದ್ದೀನಿ. ಹಾಗಿರುವಾಗ ನಾನು ಹೇಗೆ ಆ ಮಗುವಿನ ತಂದೆಯಾಗಲು ಸಾಧ್ಯವೆಂದು ಹೇಳಿದ್ದಾರೆ.

  ಮಗುವಿನ ಬಗ್ಗೆ ಪ್ರತಿಕ್ರಿಯೆ ನೀಡದ ನುಸ್ರುತ್

  ಮಗುವಿನ ಬಗ್ಗೆ ಪ್ರತಿಕ್ರಿಯೆ ನೀಡದ ನುಸ್ರುತ್

  ನುಸ್ರುತ್ ಮತ್ತು ನಿಖಿಲ್ ಕಿತ್ತಾಟದ ನಡುವೆ ಬೆಂಗಾಲಿ ಖ್ಯಾತ ನಟ ಮತ್ತು ರಾಜಕಾರಣಿ ಯಶ್ ದಾಸ್ ಗುಪ್ತ ಹೆಸರು ಸಹ ಕೇಳಿಬರುತ್ತಿದೆ. ಯಶ್ ಜೊತೆಗಿನ ನುಸ್ರುತ್ ಆಪ್ತತೆಯೇ ನಿಖಿಲ್ ಯಿಂದ ದೂರ ಆಗಲು ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನೂ ಮಗುವಿನ ಬಗ್ಗೆಯೂ ನುಸ್ರುತ್ ಯಾವುದೇ ಹೇಳಿಕೆ ನೀಡಿಲ್ಲ.

  ರಿಯಲ್ ಹೀರೋ ನೋಡಲು ಹೈದರಾಬಾದ್ ನಿಂದ ಪಾದ ಯಾತ್ರೆ ಮಾಡಿ ಬಂದ ಫ್ಯಾನ್ | Filmibeat Kannada
  2019ರಲ್ಲಿ ನಿಖಿಲ್ ಜೈನ್ ಜೊತೆ ನುಸ್ರುತ್ ಮದುವೆ

  2019ರಲ್ಲಿ ನಿಖಿಲ್ ಜೈನ್ ಜೊತೆ ನುಸ್ರುತ್ ಮದುವೆ

  ನುಸ್ರುತ್ 2019ರಲ್ಲಿ ನಿಖಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಟರ್ಕಿಯಲ್ಲಿ ಮದುವೆಯಾಗಿದ್ದ ನುಸ್ರುತ್ ಭಾರತದ ಕಾನೂನು ಪ್ರಕಾರ ಇದು ಮದುವೆಯೇ ಅಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಮಾಜಿ ಪತಿ ನಿಖಿಲ್ ವಿರುದ್ಧ ಸಾಲು ಸಾಲು ಅರೋಪಗಳನ್ನು ಮಾಡಿದ್ದಾರೆ. ತನ್ನ ಗಮನಕ್ಕೆ ತರದೆ ನಿಖಿಲ್ ಹಣ ಬಳಸಿಕೊಂಡಿದ್ದಾರೆ, ಒಡವೆಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾರೆ ಎಂದು ನುಸ್ರುತ್ ಆರೋಪ ಮಾಡಿದ್ದಾರೆ.

  English summary
  Nusrat Jahan's pregnancy rumors confirmed, her baby Bump photo viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X