For Quick Alerts
  ALLOW NOTIFICATIONS  
  For Daily Alerts

  ಒಡಿಯಾ ಸಿನಿಮಾ ರಂಗದಲ್ಲಿ ಮತ್ತೊಂದು ಸಾವು, ನಾಲ್ಕು ದಿನದಲ್ಲಿ ಎರಡನೇಯದ್ದು!

  |

  ಬೆಂಗಾಳಿ ಟಿವಿ ಜಗತ್ತಿನಲ್ಲಿ ಸರಣಿ ಸಾವಿನ ಬಳಿಕ ಈಗ ಒರಿಸ್ಸಾದಲ್ಲೂ ಅದೇ ಮುಂದುವರೆದಿದೆ ಎನಿಸುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಒಡಿಯಾ ಭಾಷೆಯ ಟಿವಿ ನಟಿಯೊಬ್ಬರು ಸಾವನ್ನಪ್ಪಿದ್ದರು. ಈಗ ಅದೇ ಒಡಿಯಾ ಸಿನಿಮಾ ಹಾಗೂ ನಾಟಕ ರಂಗಕ್ಕೆ ಸೇರಿದ ಹಿರಿಯ ನಟ ಸಾವನ್ನಪ್ಪಿದ್ದಾರೆ.

  ಒಡಿಯಾ ಸಿನಿಮಾ ಹಾಗೂ ನಾಟಕಗಳಲ್ಲಿ ನಟಿಸಿರುವ ಹಿರಿಯ ಹಾಗೂ ಜನಪ್ರಿಯ ನಟರಾಗಿರುವ ರೈಮೋಹನ್ ಪರೈದಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

  ಒರಿಸ್ಸಾದ ಭುವೇಶ್ವರ್‌ನಲ್ಲಿ ವಾಸವಿದ್ದ ರೈಮೋಹನ್ ಪರೈದಾಗೆ 58 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಕೇವಲ ನಾಲ್ಕು ದಿನಗಳ ಹಿಂದೆ ಇದೇ ಭುವನೇಶ್ವರದಲ್ಲಿ ಒಡಿಯಾದ ಟಿವಿ ನಟಿ ರಶ್ಮಿರೇಖಾ ಓಜಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಟಿಯ ಬಾಯ್‌ಫ್ರೆಂಡೆ ನಟಿಯ ಸಾವಿಗೆ ಕಾರಣ ಎಂದು ಆಕೆಯ ಪೋಷಕರು ಆರೋಪಿಸಿದ್ದರು.

  ರೈಮೋಹನ್ ಪರೈದಾ ಒಡಿಯಾ ಸಿನಿಮಾಗಳ ಜನಪ್ರಿಯ ನಟರಾಗಿದ್ದು ಸುಮಾರು 100 ಕ್ಕೂ ಹೆಚ್ಚು ಒಡಿಯಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ 15 ಬೆಂಗಾಲಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ರೈಮೋಹನ್ ಪರೈದಾ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಹಲವಾರು ಒಡಿಯಾ ನಾಟಕಗಳಲ್ಲಿಯೂ ನಟಿಸಿದ್ದಾರೆ.

  ರೈಮೋಹನ್ ಪರೈದಾಗೆ ಒಡಿಯಾ ಸಿನಿಮಾ ರಂಗದಲ್ಲಿ ಹಲವಾರು ಗೆಳೆಯರಿದ್ದರು, ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಒಡಿಯಾ ಹಾಗೂ ಬೆಂಗಾಲಿ ಭಾಷೆಯ ನಟ-ನಟಿಯರು ರೈಮೋಹನ್ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.

  Odiya Movie Industry Senior Actor Raimohan Parida Passed Away

  ಬೆಂಗಾಲಿ ಟಿವಿ ಹಾಗೂ ಮಾಡೆಲ್ ಜಗತ್ತಿನ ನಾಲ್ಕು ಮಂದಿ ಯುವತಿಯರು ಕಳೆದ ತಿಂಗಳು ಕೇವಲ ಎರಡು ವಾರದ ಅಂತರದಲ್ಲಿ ಸಾವನ್ನಪ್ಪಿದ್ದರು. ಮೇ ತಿಂಗಳಲ್ಲಿ ಮೊದಲಿಗೆ ಬೆಂಗಾಲಿ ಟಿವಿ ಲೋಕದಲ್ಲಿ ಚಿರಪರಿಚಿತ ನಟಿಯಾಗಿದ್ದ ಪಲ್ಲವಿ ಡೇ ಸಾವನ್ನಪ್ಪಿದರು. ಅದಾದ ಕೆಲವು ದಿನಗಳ ಬಳಿಕ ಜನಪ್ರಿಯ ಮಾಡೆಲ್ ಬಿದಿಶಾ ಡಿ ಮಜುಂಧಾರ್ ಸಾವನ್ನಪ್ಪಿದರು. ಮೇ 28 ರಂದು ಬಂಗಾಳದ ಮತ್ತೊಬ್ಬ ಪ್ರಖ್ಯಾತ ಮಾಡೆಲ್ ಮಂಜುಶಾ ನಿಯೋಗಿ ಸಾವನ್ನಪ್ಪಿದ್ದಾರೆ.

  ಕೋಲ್ಕತ್ತದ ಪುತೌಲಿ ಏರಿಯಾದಲ್ಲಿನ ಅವರ ನಿವಾಸದಲ್ಲಿ ಮಂಜುಶಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಿದಿಶಾ ಡಿ ಮಜುಂಧಾರ್ ಸಾವನ್ನಪ್ಪಿದ ಎರಡೇ ದಿನದ ಅಂತರದಲ್ಲಿ ಮಂಜುಶಾ ನಿಯೋಗಿ ಸಾವನ್ನಪ್ಪಿದರು. ಅದಾದ ಬಳಿಕ ಬೆಂಗಾಳಿ ಮಾಡೆಲ್ ಸರಸ್ವತಿ ದಾಸ್ ಕೊಲ್ಕತ್ತದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದರು. ಕೊಲ್ಕತ್ತದ ಬೇಡಿಯಾದಂಗ ಎಂಬಲ್ಲಿ ವಾಸವಿದ್ದ ಸರಸ್ವತಿ ದಾಸ್ ಮೇ 29 ರಂದು ತಮ್ಮದೇ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು. ನಟಿಯರ ಈ ಸರಣಿ ಸಾವು ಬೆಂಗಾಲಿ ಟಿವಿ ಹಾಗೂ ಸಿನಿಮಾ ಉದ್ಯಮದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈಗ ಒಡಿಯಾ ಸಿನಿಮಾ ಹಾಗೂ ಟಿವಿ ರಂಗದಲ್ಲಿಯೂ ಇದೇ ಮಾದರಿ ಸರಣಿ ಸಾವುಗಳಾಗುವ ಲಕ್ಷಣ ಗೋಚರಿಸುತ್ತಿದೆ.

  COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ SAHAIHELPLINE@GMAIL.COM

  English summary
  Odiya movie industry senior actor Raimohan Parida passed away. He found hanging in his home which is in Bhuvaneshwar.
  Saturday, June 25, 2022, 23:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X