For Quick Alerts
  ALLOW NOTIFICATIONS  
  For Daily Alerts

  ಏಪ್ರಿಲ್ 11 ಕ್ಕೆ 'ಪಿ ಎಂ ನರೇಂದ್ರ ಮೋದಿ' ಸಿನಿಮಾ ರಿಲೀಸ್

  |

  ಕುತೂಹಲ ಮೂಡಿಸಿರುವ 'ಪಿ ಎಂ ನರೇಂದ್ರ ಮೋದಿ' ಬಯೋಪಿಕ್ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಮೋದಿ ಭಕ್ತರು ಕಾತುರದಿಂದ ಕಾಯುತ್ತಿರುವ ಬಯೋಪಿಕ್ ಇದೇ ಏಪ್ರಿಲ್ 11 ಕ್ಕೆ ತೆರೆಗೆ ಬರುತ್ತಿದೆ.

  'ಪಿ ಎಂ ನರೇಂದ್ರ ಮೋದಿ' ಸಿನಿಮಾ ಏಪ್ರಿಲ್ 5 ಕ್ಕೆ ತೆರೆಗೆ ಬರಲು ಸಿದ್ದವಾಗಿತ್ತು. ಆದ್ರೆ ಸುಪ್ರಿಂ ಕೋರ್ಟ್ ತಡೆ ನೀಡಿದ ಕಾರಣ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು. ಆದ್ರೀಗ ಏಪ್ರಿಲ್ 11 ಕ್ಕೆ ರಿಲೀಸ್ ಆಗುತ್ತಿದೆ ಎಂದು ಚಿತ್ರತಂಡ ಅಧಿಕೃತವಾಗಿ ಹೇಳಿದೆ.

  ಕರ್ನಾಟಕದಲ್ಲೂ 'ಮೋದಿ' ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕರ್ನಾಟಕದಲ್ಲೂ 'ಮೋದಿ' ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್

  ಲೋಕಸಭೆ ಚುನಾವಣೆ ನಡೆಯುತ್ತಿರುವುದರಿಂದ ಈ ಸಂದರ್ಭದಲ್ಲಿ ಮೋದಿ ಸಿನಿಮಾ ರಿಲೀಸ್ ಮಾಡಲು ಅವಕಾಶ ನೀಡಬಾರದು ಎಂದು ಈ ಹಿಂದೆ ವಕೀಲರೊಬ್ಬರು ದೆಹಲಿ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದರು. ವಿಚಾರಣೆ ಮಾಡಿದ್ದ ಕೋರ್ಟ್ ಈ ಅರ್ಜಿಯನ್ನ ತಿರಸ್ಕರಿಸಿ, ಸಿನಿಮಾ ರಿಲೀಸ್ ಮಾಡಬಹುದು ಎಂಬ ಸೂಚನೆ ನೀಡಿತ್ತು. ಆದ್ರೆ ಸುಪ್ರಿಂ ಕೋರ್ಟ್ ಸಿನಿಮಾ ರಿಲೀಸ್ ಗೆ ತಡೆ ನೀಡಿತ್ತು.

  'ಪಿ ಎಂ ಮೋದಿ' ಸಿನಿಮಾದಲ್ಲಿ ಮೋದಿ ಪಾತ್ರದಲ್ಲಿ ನಟ ವಿವೇಕ್ ಓಬೆರಾಯ್ ಕಾಣಿಸಿಕೊಂಡಿದ್ದಾರೆ. ಓಮಂಗ್ ಕುಮಾರ್ ನಿರ್ದೇಶದಲ್ಲಿ ಚಿತ್ರ ಮೂಡಿ ಬಂದಿದೆ.

  English summary
  The biopic on Prime Minister Narendra Modi will hit theatres on April 11. film's producer Sandip Singh conform release date.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X