For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧ ಕೊಲೆ ಪ್ರಕರಣ!

  |

  ಬಾಲಿವುಡ್ ನಟ ಅಮೀರ್ ಖಾನ್ ಕೊಲೆ ಆರೋಪದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಅದೂ ಪಾಕಿಸ್ತಾನದಲ್ಲಿ. ಆದರೆ ಅದೃಷ್ಟವಷಾತ್ ಅವರು ನಿರಪರಾಧಿ ಎಂಬುದು ಸಾಬೀತಾಗಿದೆ. ಹೀಗಾಗಿ 17 ವರ್ಷಗಳ ಬಳಿಕ ಕೊನೆಗೂ ಅವರು ನಿರ್ದೋಷಿಯಾಗಿ ಹೊರಬರುತ್ತಿದ್ದಾರೆ.

  ಬೆಂಗಳೂರಲ್ಲಿ ಚಿತ್ರೀಕರಣ ಆಗಿರುವ ಸಿನಿಮಾಗಳು ಸೂಪರ್ ಹಿಟ್..?

  ಇದೇನಿದು, ನಟ ಅಮೀರ್ ಖಾನ್ ಕೊಲೆ ಮಾಡಿದ್ದಾರಾ? ಅವರು ಪಾಕಿಸ್ತಾನಕ್ಕೆ ಹೋಗಿದ್ದು ಯಾವಾಗ? ಅಲ್ಲಿ ಹೀಗೆ ಕೃತ್ಯ ಎಸಗಿದ್ದು ಹೇಗೆ? ಎಂಬ ಪ್ರಶ್ನೆ ಮತ್ತು ಆಶ್ಚರ್ಯ ಮೂಡಬಹುದು. ಸ್ವತಃ ಅಮೀರ್ ಖಾನ್ ಅವರೇ ಈ ಸುದ್ದಿ ಕಂಡು ಅಚ್ಚರಿಪಟ್ಟುಕೊಂಡಿರಬಹುದು. ಅಂದಹಾಗೆ, ಈ ಪ್ರಕರಣದಲ್ಲಿ ಸಿಕ್ಕಿಕೊಂಡವರು ಅಮೀರ್ ಖಾನ್. ಆದರೆ ಅದು ಬಾಲಿವುಡ್ ನಟ ಅಮೀರ್ ಖಾನ್ ಅಲ್ಲ. ಪಾಕಿಸ್ತಾನದ ಮೊಹಾಜಿರ್ ಖಯಾಮಿ ಮೂವ್‌ಮೆಂಟ್ ರಾಜಕೀಯ ಪಕ್ಷದ ಅಮೀರ್ ಖಾನ್. ಮುಂದೆ ಓದಿ...

  ಟ್ರೋಲ್ ಆದ ಚಾನೆಲ್ ಪೋಸ್ಟ್

  ಟ್ರೋಲ್ ಆದ ಚಾನೆಲ್ ಪೋಸ್ಟ್

  ಪಾಕಿಸ್ತಾನದ ಟಿವಿ ಚಾನೆಲ್ ಒಂದು ಬಾಲಿವುಡ್ ನಟ ಅಮೀರ್ ಖಾನ್ ಫೋಟೊವನ್ನು, ಕೊಲೆ ಆರೋಪಿ ಅಮೀರ್ ಖಾನ್ ಅವರ ಫೋಟೊದ ಬದಲು ತಪ್ಪಾಗಿ ಬಳಸಿ ಯಡವಟ್ಟು ಮಾಡಿಕೊಂಡಿದೆ. ಈ ತಪ್ಪು ನಡೆದಿರುವುದು ಎಚ್ಚೆತ್ತು ತನ್ನ ಪೋಸ್ಟ್‌ಅನ್ನು ಡಿಲೀಟ್ ಮಾಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಟ್ರೋಲ್‌ಗೆ ಒಳಗಾಗಿದೆ.

  ಇವ ಯಾವ ಆಂಗಲ್ಲಿಂದ ಅಮೀರ್ ಖಾನ್ ಥರ ಕಾಣ್ತಾನೆ?: ಬಾದ್‌ಶಾನನ್ನು ಅಣಕಿಸಿದ್ದ ಜೂಹಿ ಚಾವ್ಲಾಇವ ಯಾವ ಆಂಗಲ್ಲಿಂದ ಅಮೀರ್ ಖಾನ್ ಥರ ಕಾಣ್ತಾನೆ?: ಬಾದ್‌ಶಾನನ್ನು ಅಣಕಿಸಿದ್ದ ಜೂಹಿ ಚಾವ್ಲಾ

  ಪತ್ರಕರ್ತೆ ನೈಲಾ ಇನಾಯತ್ ಪೋಸ್ಟ್

  ಪತ್ರಕರ್ತೆ ನೈಲಾ ಇನಾಯತ್ ಪೋಸ್ಟ್

  ಪತ್ರಕರ್ತೆ ನೈಲಾ ಇನಾಯತ್, ಬಾಲಿವುಡ್ ನಟ ಅಮೀರ್ ಖಾನ್ ಫೋಟೊವನ್ನು ಒಳಗೊಂಡ, ಹತ್ಯೆಯ ಆರೋಪಿ ಅಮೀರ್ ಖಾನ್ ಕುರಿತಾದ ಸುದ್ದಿಯ ಸ್ಕ್ರೀನ್ ಶಾಟ್‌ಅನ್ನು ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಅಮೀರ್ ಖಾನ್ ಸಿನಿಮಾಗಳು ಪಾಕಿಸ್ತಾನದಲ್ಲಿಯೂ ಜನಪ್ರಿಯ. ಹೀಗಿರುವಾಗ ಡಬಲ್ ಮರ್ಡರ್ ಪ್ರಕರಣದಲ್ಲಿ ಅವರ ಫೋಟೊ ಹಾಕಿದ್ದು ಹೇಗೆ?

  ಪಾಕ್‌ನಲ್ಲಿ ಇದ್ದಿದ್ದೇ ಗೊತ್ತಿರಲಿಲ್ಲ...

  ಪಾಕ್‌ನಲ್ಲಿ ಇದ್ದಿದ್ದೇ ಗೊತ್ತಿರಲಿಲ್ಲ...

  '17 ವರ್ಷಗಳ ಬಳಿಕ ಎಂಕ್ಯೂಎಂ ಅಮೀರ್ ಖಾನ್ ಕೊಲೆ ಪ್ರಕರಣವೊಂದರಲ್ಲಿ ದೋಷಮುಕ್ತರಾಗಿದ್ದಾರೆ. ಭಾರತೀಯ ನಟ ಅಮೀರ್ ಖಾನ್ ಕಳೆದ 17 ವರ್ಷಗಳಿಂದ ಪಾಕಿಸ್ತಾನದಲ್ಲಿದ್ದರು ಎನ್ನುವುದೇ ಗೊತ್ತಿರಲಿಲ್ಲ' ಎಂಬುದಾಗಿ ನೈಲಾ ಇನಾಯತ್ ಹೇಳಿದ್ದಾರೆ.

  ಕೊರನಾ ವೈರಸ್ ವಿರುದ್ಧದ ಹೋರಾಟ: ದೇಣಿಗೆ ನೀಡಿದ ನಟ ಅಮೀರ್ ಖಾನ್ಕೊರನಾ ವೈರಸ್ ವಿರುದ್ಧದ ಹೋರಾಟ: ದೇಣಿಗೆ ನೀಡಿದ ನಟ ಅಮೀರ್ ಖಾನ್

  ಏನಿದು ಪ್ರಕರಣ?

  ಏನಿದು ಪ್ರಕರಣ?

  ಪಾಕಿಸ್ತಾನದ ಮೊಹಾಜಿರ್ ಖಯಾಮಿ ಮೂವ್‌ಮೆಂಟ್‌ ರಾಜಕೀಯ ಪಕ್ಷದ ಮುಖಂಡ ಅಮೀರ್ ಖಾನ್ ವಿರುದ್ಧ 2003ರಲ್ಲಿ ಡಬಲ್ ಮರ್ಡರ್ ಪ್ರಕರಣ ದಾಖಲಾಗಿತ್ತು. 17 ವರ್ಷಗಳ ವಿಚಾರಣೆಯ ಬಳಿಕ ಅವರನ್ನು ನಿರಪರಾಧಿ ಎಂದು ಪಾಕಿಸ್ತಾನದ ನ್ಯಾಯಾಲಯವೊಂದು ತೀರ್ಪು ನೀಡಿತ್ತು. ಆದರೆ ಟಿವಿ ಚಾನೆಲ್ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ನಟ ಅಮೀರ್ ಖಾನ್ ಫೋಟೊ ಬಳಸಿ ಸುದ್ದಿ ಹಂಚಿಕೊಂಡಿತ್ತು.

  ಮಂಡೇಲಾ ಪ್ರಕರಣದ ನೆನಪು

  ಮಂಡೇಲಾ ಪ್ರಕರಣದ ನೆನಪು

  'ಇದು ನೆಲ್ಸನ್ ಮಂಡೇಲಾ ಪ್ರಕರಣದ ಮಾದರಿಯದ್ದು. ನೆಲ್ಸನ್ ಮಂಡೇಲಾ ಎಂದುಕೊಂಡು ತಮಿಳುನಾಡಿನ ಜನರು ಮೋರ್ಗನ್ ಫ್ರೀಮ್ಯಾನ್ ಅವರ ದೊಡ್ಡ ಪೋಸ್ಟರ್ ಹಾಕಿದ್ದರು' ಎಂದು ಒಬ್ಬರು ನೆನಪಿಸಿಕೊಂಡಿದ್ದಾರೆ. 'ಅಮೀರ್ ಖಾನ್ ಭಾರತದಲ್ಲಿ ಅಸುರಕ್ಷಿತ ಎಂದು ಭಾವಿಸಿದ ಬಳಿಕ ಅವರ ದೇಹ ಮಾತ್ರ ಇಲ್ಲಿದೆ' ಎಂದು ಕೆಲವರು ಅಮೀರ್ ಖಾನ್ ಹೇಳಿಕೆಯನ್ನು ನೆನಪಿಸಿಕೊಂಡಿದ್ದಾರೆ.

  50 ಜನರ ನಡುವೆ ಸೆಕ್ಸ್ ಸೀನ್ ಮಾಡುವುದು ಹೇಗೆ?: ಮುಜುಗರದ ದೃಶ್ಯ ನೆನಪಿಸಿಕೊಂಡ ಪೂಜಾ ಬೇಡಿ50 ಜನರ ನಡುವೆ ಸೆಕ್ಸ್ ಸೀನ್ ಮಾಡುವುದು ಹೇಗೆ?: ಮುಜುಗರದ ದೃಶ್ಯ ನೆನಪಿಸಿಕೊಂಡ ಪೂಜಾ ಬೇಡಿ

  English summary
  Pakistan news channel mistakenly used bollywood actor Aamir Khan's photo in news item for a murder accused Amir Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X