For Quick Alerts
  ALLOW NOTIFICATIONS  
  For Daily Alerts

  'ಪ್ಯಾಂಡೊರಾ ಪೇಪರ್ಸ್' ಗುಮ್ಮ: ಸೆಲೆಬ್ರಿಟಿಗಳಿಗೆ ಶುರುವಾಯ್ತು ನಡುಕ

  |

  ಪ್ಯಾಂಡೊರಾ ಪೇಪರ್ಸ್ ಕೆಲವು ದಿನಗಳ ಹಿಂದಿನಿಂದ ಬಹುವಾಗಿ ಸದ್ದು ಮಾಡುತ್ತಿದೆ. ತೆರಿಗೆ ವಂಚಿಸಲು ವಿದೇಶದಲ್ಲಿ ಹಣ ಹೂಡಿರುವ ಭಾರತೀಯ ಸೆಲೆಬ್ರಿಟಿಗಳ ಪಟ್ಟಿ ಪ್ಯಾಂಡೊರಾ ಪೇಪರ್ಸ್‌ನಲ್ಲಿದ್ದು, ತೆರಿಗೆಕಳ್ಳ ಸೆಲೆಬ್ರಿಟಿಗಳಿಗೆ ಆತಂಕ ಶುರುವಾಗಿದೆ.

  ಭಾರತದ ಹಲವು ಉದ್ಯಮಿಗಳು, ಸಿನಿಮಾ ನಟರು, ಕ್ರಿಕೆಟರ್‌ಗಳು ತೆರಿಗೆ ಉಳಿಸಲು ವಿದೇಶಗಳಲ್ಲಿ ಬೇನಾಮಿ ಹೆಸರಲ್ಲಿ ಟ್ರಸ್ಟ್ ತೆರೆದು ಹೂಡಿಕೆ ಮಾಡಿರುವುದು ಪ್ಯಾಂಡೊರಾ ಪೇಪರ್ಸ್‌ನಿಂದ ಬೆಳಕಿಗೆ ಬಂದಿದೆ.

  ಪಟ್ಟಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ನಟ ಜಾಕಿ ಶ್ರಾಫ್, ಉದ್ಯಮಿ ಅನಿಲ್ ಅಂಬಾನಿ, ಬಯೋಕಾನ್ ಸಿಇಒ ಕಿರಣ್ ಮಜೂಮ್‌ದಾರ್ ಶಾ, ನೀರಾ ರಾಡಿಯಾ, ಸತಿಶ್ ಶರ್ಮಾ, ಮಾಜಿ ಮಿಲಿಟರಿ ಅಧಿಕಾರಿ ಇನ್ನೂ ಕೆಲವು ಜನಪ್ರಿಯ ವ್ಯಕ್ತಿಗಳಿದ್ದಾರೆ.

  ವಿದೇಶಗಳಲ್ಲಿ ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿ. ತೆರಿಗೆ ಉಳಿಸಲು ಬೇನಾಮಿ ಹೆಸರಿನಲ್ಲಿ ವಿದೇಶಿ ಟ್ರಸ್ಟ್‌ನಲ್ಲಿ ಹಣ ತೊಡಗಿಸುವಿಕೆ. ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಮುಚ್ಚಿಟ್ಟು ವಿದೇಶದಲ್ಲಿ ಆಸ್ತಿ ಖರೀದಿ ಇಂಥಹಾ ಹಲವು ಆರ್ಥಿಕ ಅಪರಾಧಗಳನ್ನು ಮಾಡಿರುವ ಭಾರತೀಯ ದೊಡ್ಡ ಪಟ್ಟಿಯೇ ಪ್ಯಾಂಡೊರಾ ಪೇಪರ್ಸ್‌ನಲ್ಲಿದೆ.

  ಹಲವು ಸೆಲೆಬ್ರಿಟಿಗಳ ಹೆಸರು ಇದೆ

  ಹಲವು ಸೆಲೆಬ್ರಿಟಿಗಳ ಹೆಸರು ಇದೆ

  ವ್ಯಾಪಾರದಲ್ಲಿ ತೀವ್ರ ನಷ್ಟ ಅನುಭವಿಸಿದ ಅನಿಲ್ ಅಂಬಾನಿಗೆ ಈಗಲೂ ವಿದೇಶಗಳಲ್ಲಿ ನೂರಾರು ಕೋಟಿಯ ಆಸ್ತಿಗಳಿವೆ ಎನ್ನುತ್ತಿದೆ ಪ್ಯಾಂಡೊರಾ ಪೇಪರ್ಸ್. ನಟ ಜಾಕಿ ಶ್ರಾಫ್ ಬೇನಾಮಿ ಹೆಸರಲ್ಲಿ ವಿದೇಶದಲ್ಲಿ ಹೂಡಿಕೆ ಮಾಡಿರುವುದು ಪ್ಯಾಂಡೊರಾ ಪೇಪರ್ಸ್‌ ಇಂದ ಬಹಿರಂಗವಾಗಿದೆ. ಆರ್ಥಿಕ ಅಪರಾಧಿ ನೀರವ್ ಮೋದಿಯ ಸಹೋದರಿ ಪೂರ್ವಿ ಮೋದಿ ವಿದೇಶದಲ್ಲಿ ಟ್ರಸ್ಟ್ ಸ್ಥಾಪಿಸಿ ಕೋಟ್ಯಂತರ ಹಣ ಹೂಡಿಕೆ ಮಾಡಿಕೊಂಡಿದ್ದಾರೆ ಎಂಬುದು ಪತ್ರಕರ್ತರ ಈ ಬೃಹತ್ ತನಿಖೆಯಿಂದ ಗೊತ್ತಾಗಿದೆ. ಒಟ್ಟು 300 ಕ್ಕೂ ಹೆಚ್ಚು ಭಾರತೀಯರ ಹೆಸರು ಪ್ಯಾಂಡೊರಾ ಪೇಪರ್ಸ್‌ನಲ್ಲಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸೆಲೆಬ್ರಿಟಿಗಳ ಹೆಸರು ಹೊರಗೆ ಬರುವ ಸಾಧ್ಯತೆ ಇದೆ.

  ವಿವಿಧ ಇಲಾಖೆಗಳಿಂದ ತನಿಖೆ

  ವಿವಿಧ ಇಲಾಖೆಗಳಿಂದ ತನಿಖೆ

  ಪ್ಯಾಂಡೊರಾ ಪೇಪರ್ಸ್‌ ಅನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಹಣಕಾಸು ಇಲಾಖೆಯು ಪ್ಯಾಂಡೊರಾ ಪೇಪರ್ಸ್ ವರದಿ ಕುರಿತಾಗಿ ಕೇಂದ್ರ ಸರ್ಕಾರದ ಹಲವು ಇಲಾಖೆಗಳು ತನಿಖೆ ನಡೆಸಲಿವೆ ಎಂದು ಹೇಳಿದೆ. ಇದರ ಬೆನ್ನಲ್ಲೆ ಪ್ಯಾಂಡೊರಾ ಪೇಪರ್ಸ್‌ನಲ್ಲಿ ಹೆಸರು ನಮೂದಾಗಿರುವ ಸೆಲೆಬ್ರಿಟಿಗಳು ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು ತಾವು ಪಾರದರ್ಶಕವಾಗಿದ್ದು, ಯಾವುದೇ ಆರ್ಥಿಕ ಅಪರಾಧ ಎಸಗಿಲ್ಲ ಎಂದಿದ್ದಾರೆ. ಸಚಿನ್ ತೆಂಡೂಲ್ಕರ್‌ರ ಹಣಕಾಸು ಮ್ಯಾನೇಜರ್, ಪೂರ್ವಿ ಮೋದಿಯ ವಕೀಲ, ಅನಿಲ್ ಅಂಬಾನಿಯ ಮ್ಯಾನೇಜರ್‌ ಅವರುಗಳು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

  ಏನಿದು ಪ್ಯಾಂಡೊರಾ ಪೇಪರ್ಸ್?

  ಏನಿದು ಪ್ಯಾಂಡೊರಾ ಪೇಪರ್ಸ್?

  ಪ್ಯಾಂಡೊರಾ ಪೇಪರ್ಸ್ ಈವರೆಗಿನ ಅತಿ ದೊಡ್ಡ ತನಿಖಾ ವರದಿಗಾರಿಕೆ. ಸುಮಾರು 150 ಸುದ್ದಿ ಸಂಸ್ಥೆಗಳು ಒಟ್ಟುಗೂಡಿ, 600 ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಹಗಲಿರುಳು ಶ್ರಮವಹಿಸಿ ಈ ತನಿಖಾ ವರದಿಯನ್ನು ತಯಾರಿಸಿದ್ದು ತೆರಿಗೆ ಕಳ್ಳರನ್ನು, ಆರ್ಥಿಕ ಅಪರಾಧಿಗಳ ಬಣ್ಣ ಬಯಲು ಮಾಡಿದ್ದಾರೆ. 1.10 ಕೋಟಿ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಿ ವಿಶ್ವದಾದ್ಯಂತ ಇರುವ ಆರ್ಥಿಕ ಅಪರಾಧಿಗಳನ್ನು ಬಹಿರಂಗಪಡಿಸುವ ಕಾರ್ಯವನ್ನು ಮಾಡಲಾಗಿದೆ. ಈ ದೊಡ್ಡ ತಂಡ ಬಿಡುಗಡೆ ಮಾಡಿರುವ ವರದಿಯನ್ನೇ 'ಪ್ಯಾಂಡೊರಾ ಪೇಪರ್ಸ್' ಎನ್ನಲಾಗುತ್ತದೆ.

  300 ಕ್ಕೂ ಹೆಚ್ಚು ಮಂದಿಯ ಹೆಸರಿದೆ

  300 ಕ್ಕೂ ಹೆಚ್ಚು ಮಂದಿಯ ಹೆಸರಿದೆ

  ಐಸಿಐಜೆ ಈ ವರದಿಯನ್ನು ಪ್ರಕಟಿಸಿದ್ದು, ಭಾರತದ ಸುಮಾರು 300 ಕ್ಕೂ ಹೆಚ್ಚು ಮಂದಿಯ ಹೆಸರುಗಳು ಪ್ಯಾಂಡೊರಾ ಪೇಪರ್ಸ್‌ನಲ್ಲಿವೆ. ಪಾಕಿಸ್ತಾನದ 700 ಕ್ಕೂ ಹೆಚ್ಚು ಮಂದಿಯ ಹೆಸರು ಇದೆ. ಅದರಲ್ಲಿ ಪ್ರಧಾನಿ ಇಮ್ರಾನ್ ಖಾನ್‌ ಆಪ್ತರ, ಕ್ಯಾಬಿನೇಟ್ ಮಂತ್ರಿಗಳ ಹೆಸರುಗಳು ಸಹ ಇದೆ. ಹೀಗೆ ಹಲವು ದೇಶಗಳಲ್ಲಿನ ಆರ್ಥಿಕ ಅಪರಾಧಿಗಳ ಪಟ್ಟಿಯನ್ನು ಪ್ಯಾಂಡೊರಾ ಪೇಪರ್ಸ್ ಹೊರಗೆ ಹಾಕಿದೆ. ಕಳೆದ 24 ವರ್ಷದಿಂದಲೂ ಕಾರ್ಯನಿರ್ವಹಿಸುತ್ತಿರುವ ಸ್ವತಂತ್ರ್ಯ ತನಿಖಾ ವರದಿಗಾರ ಸಂಸ್ಥೆ ಐಸಿಐಜೆ ಈ ಹಿಂದೆಯೂ ಪನಾಮ ಪೇಪರ್ಸ್ ಮತ್ತು ಪ್ಯಾರಡೈಸ್ ಪೇಪರ್ಸ್‌ ಎಂಬ ಎರಡು ವರದಿಯನ್ನು ಹೊರಗೆ ಹಾಕಿತ್ತು. ಅದರಲ್ಲಿ ಪನಾಮ ಪೇಪರ್ಸ್ ಬಹುವಾಗಿ ಸುದ್ದಿ ಮಾಡಿತ್ತು. ಆದರೆ ಈಗ ಬಿಡುಗಡೆ ಮಾಡಿರುವ ಪ್ಯಾಂಡೊರಾ ಪೇಪರ್ಸ್ 2016 ರ ಪನಾಮ ಪೇಪರ್ಸ್‌ಗಿಂತಲೂ ಬಹಳ ದೊಡ್ಡದು. 2.94 ಟೆರಾಬೈಟ್ ಮಾಹಿತಿಯನ್ನು ಪ್ಯಾಂಡೊರಾ ಬಾಕ್ಸ್ ಹೊಂದಿದೆ. (ಒಂದು ಟೆರಾಬೈಟ್ಸ್ 1000 ಜಿಬಿಗೆ ಸಮ).

  English summary
  Pandora Papers leak: Many Indian celebrities like Sachin Tendulkar, Jackie Shroff, Anil Ambani, Purvi Modi and many others will face inquiry from different agencies.
  Tuesday, October 5, 2021, 17:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X