For Quick Alerts
  ALLOW NOTIFICATIONS  
  For Daily Alerts

  ಕೇಸರಿ ಬಿಕಿನಿ ವಿವಾದ: ಕೇಂದ್ರ ಸಚಿವೆ ಸ್ಮೃತಿ ಇರಾನಿಯ ತುಂಡುಡುಗೆ ವಿಡಿಯೋ ವೈರಲ್!

  |

  ಶಾರುಖ್ ಖಾನ್ ನಟಿಸಿರುವ 'ಪಠಾಣ್' ಸಿನಿಮಾವನ್ನು ಗುರಿ ಮಾಡಿಕೊಂಡು ಕೆಲವು ವಿವಾದಗಳನ್ನು ಹರಿಬಿಡಲಾಗಿದ್ದು, ಸಿನಿಮಾವನ್ನು ಬ್ಯಾನ್ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

  'ಪಠಾಣ್' ಸಿನಿಮಾದ 'ಬೇಷರಮ್' ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ಡ್ಯಾನ್ಸ್ ಮಾಡಿರುವುದಕ್ಕೆ ಹಿಂದುಪರ ಸಂಘಟನೆ ಸದಸ್ಯರು, ಬಿಜೆಪಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  Fact Check: ಶಾರುಖ್ ಖಾನ್ ಸಿನಿಮಾ 'ಪಠಾಣ್' ಬಾಯ್‌ಕಾಟ್ ಮಾಡುವಂತೆ ಕರೆ ನೀಡಿದ್ರಾ ಯೋಗಿ ಆದಿತ್ಯನಾಥ್? Fact Check: ಶಾರುಖ್ ಖಾನ್ ಸಿನಿಮಾ 'ಪಠಾಣ್' ಬಾಯ್‌ಕಾಟ್ ಮಾಡುವಂತೆ ಕರೆ ನೀಡಿದ್ರಾ ಯೋಗಿ ಆದಿತ್ಯನಾಥ್?

  ಆದರೆ ಸಿನಿಮಾದ ಪರವಾಗಿಯೂ ಹಲವರು ನಿಂತಿದ್ದು, ಕ್ಷುಲ್ಲಕ ಕಾರಣಕ್ಕೆ 'ಪಠಾಣ್' ಸಿನಿಮಾವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ. 'ಬೇಷರಮ್' ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣಕ್ಕೆ ಅಪಮಾನ ಮಾಡಿದ್ದಾರೆ ಎಂಬ ವಾದವನ್ನು ವಿರೋಧಿಸಿ, ಈ ಹಿಂದೆ ಅಕ್ಷಯ್ ಕುಮಾರ್, ಕಂಗನಾ ರನೌತ್ ಅವರುಗಳು ಕೇಸರಿ ಬಣ್ಣ 'ಅಪಮಾನ' ಎಸಗಿದ್ದಾರೆ 'ಎನ್ನಬಹುದಾದ' ಚಿತ್ರಗಳನ್ನು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

  'ಪಠಾಣ್' ಸಿನಿಮಾವನ್ನು ವಿರೋಧಿಸುತ್ತಿರುವ ಬಿಜೆಪಿ ಸದಸ್ಯರಿಗೆ ಉತ್ತರ ನೀಡಲೆಂದೇ ಅದೇ ಕೇಸರಿ ಬಣ್ಣದ ತುಂಡುಡುಗೆ ತೊಟ್ಟು ರ್ಯಾಂಪ್ ಮಾಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿಯ ಚಿತ್ರವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

  ಸ್ಮೃತಿ ಇರಾನಿ, ಕೇಂದ್ರದ ಪ್ರಮುಖ ಬಿಜೆಪಿ ನಾಯಕಿ ಹಾಗೂ ಹಾಲಿ ಸಚಿವೆಯೂ ಆಗಿರುವ ಸ್ಮೃತಿ ಇರಾನಿ, ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ನಟಿಯಾಗಿ, ಮಾಡೆಲ್ ಆಗಿ ಹೆಸರು ಮಾಡಿದ್ದರು. 1998 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಮೃತಿ ಇರಾನಿ, ಕೇಸರಿ ಬಣ್ಣದ ತುಂಡುಡುಗೆ ತೊಟ್ಟು ರ್ಯಾಂಪ್ ಮೇಲೆ ಮಾದಕವಾಗಿ ಹೆಜ್ಜೆ ಹಾಕಿದ್ದರು.

  ಈ ವಿಡಿಯೋವನ್ನು ಇದೀಗ 'ಪಠಾಣ್' ವಿವಾದಕ್ಕೆ ಲಿಂಕ್ ಮಾಡಲಾಗುತ್ತಿತ್ತು, ಸಚಿವೆ ಸ್ಮೃತಿ ಇರಾನಿ ಸಹ ಕೇಸರಿ ಬಣ್ಣದ ತುಂಡುಡುಗೆ ತೊಟ್ಟು ಹಿಂದು ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಅವರನ್ನೂ ಬ್ಯಾನ್ ಮಾಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

  ಅದು ಮಾತ್ರವೇ ಅಲ್ಲದೆ, ಅಕ್ಷಯ್ ಕುಮಾರ್ ನಟನೆಯ 'ಭೂಲ್ ಭುಲಯ್ಯ' ಸಿನಿಮಾದ 'ಹರೆ ರಾಮ್' ಹಾಡಿನಲ್ಲಿ ಯುವತಿಯರಿಗೆ ಸೆಕ್ಸಿ ಮಾದರಿಯಲ್ಲಿ ಓಂ ಅಕ್ಷರಗಳಿರುವ ತುಂಡು ಬಟ್ಟೆಗಳನ್ನು, ರುದ್ರಾಕ್ಷಿ ಮಾಲೆಗಳನ್ನು ಹಾಕಿಸಿ ಮಾದಕವಾಗಿ ನೃತ್ಯ ಮಾಡಿಸಿರುವ ವಿಡಿಯೋವನ್ನು ಹಂಚಿಕೊಂಡು, ಇದು ಹಿಂದು ಧರ್ಮಕ್ಕೆ ಅಪಮಾನ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

  ಈ ನಡುವೆ ಮಧ್ಯ ಪ್ರದೇಶದ ವಿಧಾನಸಭೆ ಸ್ಪೀಕರ್ ಒಬ್ಬರು ಸಹ 'ಪಠಾಣ್' ಸಿನಿಮಾ 'ಬೇಷರಮ್' ಹಾಡಿನ ಬಗ್ಗೆ ಅಪಸ್ವರ ಎತ್ತಿದ್ದು, 'ಶಾರುಖ್ ಖಾನ್ ಮಗಳು ಸಹ 24-25 ವಯಸ್ಸಿನವಳಿರಬಹುದು. ಶಾರುಖ್ ಖಾನ್ ತನ್ನ ಮಗಳೊಟ್ಟಿಗೆ ಕೂತು ಆ ಹಾಡು ನೋಡಲಿ'' ಎಂದಿದ್ದಾರೆ.

  ಮಧ್ಯ ಪ್ರದೇಶದ ಮುಸ್ಲಿಂ ಸಂಘಟನೆಯೊಂದು ಸಹ 'ಪಠಾಣ್' ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 'ಪಠಾಣ್' ಸಮುದಾಯಕ್ಕೆ ಸಿನಿಮಾದಲ್ಲಿ ಅಪಮಾನ ಮಾಡಲಾಗಿದೆ. ಮಾತ್ರವಲ್ಲ ಇಡೀ ಇಸ್ಲಾಂಗೆ ಅಪಮಾನ ಮಾಡಲಾಗಿದೆ. ಅತ್ಯಂತ ಅಶ್ಲೀಲವಾಗಿ ಹಾಡನ್ನು ಚಿತ್ರೀಕರಿಸಲಾಗಿದೆ. ಸಿನಿಮಾವನ್ನು ಬಿಡುಗಡೆ ಮಾಡುವ ಮುನ್ನ ನಮಗೆ ತೋರಿಸಬೇಕು, ಹಾಗೂ ನಾವು ಸೂಚಿಸಿದ ಬದಲಾವಣೆಗಳನ್ನು ಮಾಡಬೇಕು'' ಎಂದಿದ್ದಾರೆ.

  ನಟ ಶಾರುಖ್ ಖಾನ್ ಇತ್ತೀಚೆಗೆ ತಮ್ಮ 'ಪಠಾಣ್' ಸಿನಿಮಾದ ಬಗ್ಗೆ ಮಾತನಾಡಿದ್ದು, 'ಇದೊಂದು ದೇಶಭಕ್ತಿ ಸಾರುವ ಸಿನಿಮಾ ಎಂದಿದ್ದಾರೆ.

  'ಪಠಾಣ್' ಸಿನಿಮಾವು ಸ್ಪೈ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಭಾರತದ ಗೂಢಚಾರಿಯ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದಾರೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಸಹ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಸಿದ್ಧಾರ್ಥ್ ಆನಂದ್, ನಿರ್ಮಾಣ ಮಾಡಿರುವುದು ಆದಿತ್ಯ ಚೋಪ್ರಾ. ಸಿನಿಮಾವು ಜನವರಿಯಲ್ಲಿ ಬಿಡುಗಡೆ ಆಗಲಿದೆ.

  English summary
  Pathaan movie controversy: Central minister Smriti Irani's old video wearing Saffron mini dress getting viral on social media.
  Monday, December 19, 2022, 20:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X