Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪಠಾಣ್' ಬುಕಿಂಗ್: ಬೆಂಗಳೂರು, ಮುಂಬೈ, ದೆಹಲಿಗಳಲ್ಲಿ ಎಷ್ಟಿದೆ ಟಿಕೆಟ್ ದರ? ಹೆಚ್ಚು ದುಬಾರಿ ಎಲ್ಲಿ?
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಕೆಲವೇ ದಿನಗಳಲ್ಲಿ ಭಾರತ ಸೇರದಂತೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಹಿಟ್ ಸಿನಿಮಾ ಇಲ್ಲದೆ ಖಿನ್ನತೆಯಲ್ಲಿರುವ ಬಾಲಿವುಡ್‌ಗೆ ಈ ಸಿನಿಮಾ ಮರು ಜೀವ ನೀಡಲಿದೆ ಎನ್ನಲಾಗುತ್ತಿದೆ.
'ಪಠಾಣ್' ಸಿನಿಮಾವು ಜನವರಿ 25 ರಂದು ಬಿಡುಗಡೆ ಆಗಲಿದ್ದು ಸಿನಿಮಾದ ಟಿಕೆಟ್ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದೆ. ಆಸ್ಟ್ರೇಲಿಯಾ, ಯುಎಇ, ನ್ಯೂಜಿಲೆಂಡ್ ಸೇರಿದಂತೆ ವಿದೇಶದಲ್ಲಿ ಭಾರಿ ಧನಾತ್ಮಕ ಪ್ರತಿಕ್ರಿಯೆಗಳ ಬಳಿಕ ಭಾರತದಲ್ಲಿಯೂ 'ಪಠಾಣ್' ಸಿನಿಮಾದ ಪ್ರೀ ಬುಕಿಂಗ್ ಚೆನ್ನಾಗಿ ಆಗುತ್ತಿದೆ.
ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ, ಕೊಚ್ಚಿ, ಚೆನ್ನೈ ಸೇರಿದಂತೆ ದೇಶದ ಇನ್ನೂ ಹಲವು ಪ್ರಮುಖ ನಗರಗಳಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಮೊದಲ ದಿನದ ಶೋನ ಟಿಕೆಟ್ ದರ ಭಾರಿ ದುಬಾರಿಯಾಗಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಯಾವ ನಗರದಲ್ಲಿ 'ಪಠಾಣ್' ಸಿನಿಮಾದ ಟಿಕೆಟ್ ದರ ಎಷ್ಟಿದೆ? ಎಲ್ಲಿ ಟಿಕೆಟ್ ಬೆಲೆ ಹೆಚ್ಚಿದೆ ಇಲ್ಲಿದೆ ಮಾಹಿತಿ.

ಜನವರಿ 25ಕ್ಕೆ ಸಿನಿಮಾ ಬಿಡುಗಡೆ
ಶಾರುಖ್ ಖಾನ್, ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿರುವ ಸಿನಿಮಾ ಒಂದು ಬಿಡುಗಡೆ ಆಗಿ ಐದು ವರ್ಷವಾಗಿದೆ. ಇದು ಒಂದು ರೀತಿಯ ಕಮ್ ಬ್ಯಾಕ್ ಸಿನಿಮಾ ಶಾರುಖ್ ಖಾನ್‌ಗೆ ಹಾಗಾಗಿ 'ಪಠಾಣ್' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಅಭಿಮಾನಿಗಳು ಸಹ ಶಾರುಖ್ ಖಾನ್ ಅವರನ್ನು ಬೆಳ್ಳಿ ತೆರೆ ಮೇಲೆ ನೋಡಲು ಕಾತರರಾಗಿದ್ದಾರೆ. ಹಾಗಾಗಿ ಮುಂಬೈ, ದೆಹಲಿ, ಉತ್ತರದ ಹಲವು ನಗರಗಳಲ್ಲಿ 'ಪಠಾಣ್' ಸಿನಿಮಾಕ್ಕೆ ಒಳ್ಳೆಯ ಬುಕಿಂಗ್ ಆಗಿದೆ. ಬೆಂಗಳೂರಿನಲ್ಲಿ ಸಹ ಒಳ್ಳೆ ಬುಕಿಂಗ್ ಆಗಿದೆ.

ಮುಂಬೈನಲ್ಲಿ ಟಿಕೆಟ್ ಬೆಲೆ ಎಷ್ಟು?
ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾದ ಟಿಕೆಟ್ ಬೆಲೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಮುಂಬೈನಲ್ಲಿ 'ಪಠಾಣ್' ಸಿನಿಮಾದ 2ಡಿ ಆವೃತ್ತಿಯೇ ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ 2000 ರುಪಾಯಿ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಇನ್ನು ಕೆಲವು ಚಿತ್ರಮಂದಿರಗಳಲ್ಲಿ 1500 ಕ್ಕೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. 4ಡಿಎಕ್ಸ್, ಐಮ್ಯಾಕ್ಸ್ 2ಡಿ ಸ್ಕ್ರೀನ್‌ಗಳ ಟಿಕೆಟ್ ಬೆಲೆಯು ಸರಾಸರಿ 1500 ರು ಇದೆ.

ದೆಹಲಿಯಲ್ಲಿ ಎಷ್ಟಿದೆ ಬೆಲೆ?
'ಪಠಾಣ್' ಸಿನಿಮಾ ಟಿಕೆಟ್‌ಗೆ ಅತಿ ಹೆಚ್ಚು ಬೆಲೆ ಇರುವುದು ದೆಹಲಿಯಲ್ಲಿ. ದೆಹಲಿಯ ಸೆಲೆಕ್ಟ್ ಸಿಟಿ ವಾಕ್ ಪಿವಿಆರ್‌ನಲ್ಲಿ 'ಪಠಾಣ್' ಸಿನಿಮಾದ ಒಂದು ಟಿಕೆಟ್‌ಗೆ 2200 ರು ತೆರಬೇಕಾಗಿದೆ ಅಭಿಮಾನಿಗಳು. ಹಾಗಿದ್ದರು ಸಹ ಈ ಮಲ್ಟಿಪ್ಲೆಕ್ಸ್‌ನ ನಾಲ್ಕು ಶೋಗಳೂ ಫುಲ್ ಆಗಿವೆ. ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ 1500 ರು ಟಿಕೆಟ್‌ಗಳು ಲಭ್ಯವಿದೆ. ಇತರೆ ಕೆಲವು ಸಾಮಾನ್ಯ ಚಿತ್ರಮಂದಿರಗಳಲ್ಲಿ 300 ರು.ಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿಯೂ ಬೆಲೆ ಕಡಿಮೆಯಿಲ್ಲ
ಬೆಂಗಳೂರಿನಲ್ಲಿಯೂ 'ಪಠಾಣ್' ಸಿನಿಮಾ ಹವಾ ಜೋರಾಗಿದೆ. ಜನವರಿ 25 ಕ್ಕೆ ಬಿಡುಗಡೆ ಆಗಲಿರುವ ಸಿನಿಮಾಕ್ಕೆ ಈಗಿನಿಂದಲೇ ಅಭಿಮಾನಿಗಳು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಕೆಲವು ಚಿತ್ರಮಂದಿರಗಳಲ್ಲಿ 150, ಕೆಲವರಲ್ಲಿ 250 ಹೀಗೆ ಸಾಮಾನ್ಯ ಟಿಕೆಟ್ ದರವೇ ಸಿನಿಮಾಕ್ಕಿದೆ. ಆದರೆ ಕೆಲವು ಐಶಾರಾಮಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆಯನ್ನು ದೊಡ್ಡ ಮೊತ್ತಕ್ಕೆ ಏರಿಸಲಾಗಿದೆ. ರೆಕ್ಸ್ ಡೈರೆಕ್ಟರ್ಸ್ ಕಟ್, ಪಿವಿಆರ್ ನ ಒಂದು ಶೋಗೆ 2000 ಟಿಕೆಟ್ ಬೆಲೆ ನಿಗದಿ ಪಡಿಸಲಾಗಿದೆ. ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋಗಳು ಈಗಾಗಲೇ ಹೌಸ್ ಫುಲ್ ಆಗಿವೆ.