For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ಬಗೆಹರಿದ ರಿಚಾ ಚಡ್ಡಾ ಮತ್ತು ಪಾಯಲ್ ಘೋಷ್ ವಿವಾದ

  |

  ನಟಿ ಪಾಯಲ್ ಘೋಷ್ ವಿರುದ್ಧ ನಟಿ ರಿಚಾ ಚಡ್ಡಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಕೇಸ್ ಕೊನೆಗೂ ಇತ್ಯರ್ಥವಾಗಿದೆ. ರಿಚಾ ಚಡ್ಡಾ ಅವರಿಗೆ ನ್ಯಾಯಾಧೀಶರ ಮುಂದೆ ಪಾಯಲ್ ಘೋಷ್ ಬೇಷರತ್ ಕ್ಷಮೆಯಾಚಿಸಿದ್ದಾರೆ.

  ಹೀಗಾಗಿ, ನಟಿ ರಿಚಾ ಚಡ್ಡಾ ಮತ್ತು ಪಾಯಲ್ ಘೋಷ್ ನಡುವಿನ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿದ್ದೇವೆ ಎಂದು ವಕೀಲರು ಬಾಂಬೆ ಹೈ ಕೋರ್ಟ್‌ಗೆ ತಿಳಿಸಿದ್ದಾರೆ.

  ಲೈಂಗಿಕ ಕಿರುಕುಳ ಆರೋಪ: ತನ್ನ ಹೆಸರನ್ನು ಎಳೆದು ತಂದ ಪಾಯಲ್ ವಿರುದ್ಧ ರಿಚಾ ಗರಂ

  ''ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮೀಟು ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್, ಆಧಾರರಹಿತವಾಗಿ ನನ್ನ ಹೆಸರು ಎಳೆದು ತಂದಿದ್ದಾರೆ, ನನ್ನ ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿದ್ದಾರೆ, ಅದು ಸುಳ್ಳು ಮತ್ತು ಅವಹೇಳನಕಾರಿ'' ಎಂದು ರಿಚಾ ಚಡ್ಡಾ 1.1 ಕೋಟಿ ಮಾನನಷ್ಟ ಪರಿಹಾರ ಕೊಡಿಸಬೇಕೆಂದು ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದರು.

  ಈ ಪ್ರಕರಣ ವಿಚಾರಣೆ ನಡೆಸಿದ್ದ ಬಾಂಬೆ ಹೈ ಕೋರ್ಟ್ ಎರಡು ದಿನಗಳಲ್ಲಿ ಇತ್ಯರ್ಥ ಮಾಡಿಕೊಳ್ಳಿ ಎಂದು ಸೂಚಿಸಿತ್ತು. ಬುಧವಾರ ಕೋರ್ಟ್‌ಗೆ ಹಾಜರಾದ ಘೋಷ್ ಪರ ವಕೀಲ್ ನಿತೀಣ್ ಸತ್ಪೂಟ್ ''ರಿಚಾ ವಿರುದ್ಧ ಹೇಳಿಕೆಯನ್ನು ಪಾಯಲ್ ಹಿಂಪಡೆದುಕೊಂಡಿದ್ದಾರೆ. ಬೇಷರತ್ ಕ್ಷಮೆಯಾಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

  ರಿಚಾ ಪರ ವಕೀಲ ವೀರೇಂದ್ರ ತುಲ್ಜಾಪರ್ಕರ್ ಸಹ ಅದನ್ನು ಒಪ್ಪಿಕೊಂಡರು. ಇಬ್ಬರು ವಕೀಲರು ನೀಡಿದ ಹೇಳಿಕೆ ಬಳಿಕ ನ್ಯಾಯಾಧೀಶ ಎ ಕೆ ಮೆನನ್ ಸಹ ಪ್ರಕರಣ ಬಗೆಹರಿದಿದೆ ಎಂದು ಘೋಷಿಸಿದರು.

  English summary
  Bollywood actress Payal Ghosh Apologized to Richa Chadha without any condition in defamation case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X