»   » ದಿಯಾ ಮಿರ್ಜಾ ಮದುವೆ ತಯಾರಿ ಸಂಭ್ರಮ ಚಿತ್ರ

ದಿಯಾ ಮಿರ್ಜಾ ಮದುವೆ ತಯಾರಿ ಸಂಭ್ರಮ ಚಿತ್ರ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ಬೆಡಗಿ ದಿಯಾ ಮಿರ್ಜಾ ಮದುವೆ ಸಂಭ್ರಮ ಆರಂಭವಾಗಿದೆ. ಶನಿವಾರ ಸಾಹಿಲ್ ಸಾಂಗಾ ಕೈ ಹಿಡಿಯಲಿರುವ ದಿಯಾ ಅವರ ಮೆಹಂದಿ ಕಾರ್ಯ ಗುರುವಾರ ಸಾಂಗವಾಗಿ ನಡೆಯಿತು. ಬಹುಕಾಲದ ಗೆಳೆಯ ಸಾಹಿಲ್ ಸಾಂಗಾ ಜೊತೆ ಮದುವೆಯಾಗುತ್ತಿರುವ ವಿಷಯದಿಂದ ಹಿಡಿದು ಮದುವೆ ತಯಾರಿಯ ಸಂತಸದ ಕ್ಷಣಗಳ ಬಗ್ಗೆ ದಿಯಾ ಅವರು ಟ್ವೀಟ್ ಮಾಡುತ್ತಿದ್ದಾರೆ.

ಅ.15ರಂದು ಮಹಾರಾಷ್ಟ್ರ ಚುನಾವಣೆಗಾಗಿ ನಡೆದ ಮತದಾನ ಮಾಡುವುದಕ್ಕೆ ಸಮಯ ಸಿಗದಿರುವುದಕ್ಕೆ ದಿಯಾ ಬೇಜಾರು ವ್ಯಕ್ತಪಡಿಸಿದ್ದರು. ಮದುವೆಯಿಂದಾಗಿ ಇದೇ ಮೊದಲ ಬಾರಿಗೆ ನಾನು ಮತದಾನ ಮಾಡಿಲ್ಲ ಎಂದು ದಿಯಾ ದುಃಖ ವ್ಯಕ್ತಪಡಿಸಿದ್ದರು.

ಸುಮಾರು ಐದು ವರ್ಷಗಳ ಕಾಲ ಡೇಟಿಂಗ್, ಮೀಟಿಂಗ್, ಔಟಿಂಗ್, ಚಾಟಿಂಗ್ ಅದು ಇದೂ ಎಂದು ಪ್ರೇಮ ಹಕ್ಕಿಗಳಾಗಿ ಸುತ್ತಾಡುತ್ತಿದ್ದ ದಿಯಾ ಹಾಗೂ ಸಾಹಿಲ್ ಕಳೆದ ಏಪ್ರಿಲ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡ್ದ್ದರು. ಈಗ ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿದ್ದಾರೆ.

ದಿಯಾ ಅವರು ಮೆಹಂದಿ ಕಾರ್ಯಕ್ರಮದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಹಳದಿ ಬಣ್ಣದ ಅನಾರ್ಕಲಿ ಸ್ಯೂಟ್ ನಲ್ಲಿರುವ ದಿಯಾ ಹಾಗೂ ರೆಡ್ ಕುರ್ತಾ ತೊಟ್ಟಿರುವ ಸಾಹಿಲ್ ಜೋಡಿ ನೋಡಿ ಅಭಿಮಾನಿಗಳು ತುಂಬು ಹೃದಯದ ಹಾರೈಕೆ ಸಲ್ಲಿಸಿದ್ದಾರೆ.

ಬಂಧು ಬಾಂಧವರನ್ನು ಸ್ವಾಗತಿಸುವುದೇ ಖುಷಿ

ಹಲವಾರು ವರ್ಷಗಳ ನಂತರ ನನ್ನ ಕುಟುಂಬದ ಅನೇಕ ಮಂದಿ ವಿಶ್ವದೆಲ್ಲೆಡೆಯಿಂದ ಮನೆಗೆ ಬರುತ್ತಿದ್ದಾರೆ ಎಲ್ಲರನ್ನು ಸ್ವಾಗತಿಸುವುದೇ ನನಗೆ ಸಂತಸದ ವಿಷಯವಾಗಿದೆ ಎಂದಿದ್ದಾರೆ. ಇಬ್ಬರು ಆರ್ಯ ಸಮಾಜದಲ್ಲಿ ಮದುವೆಯಾಗುತ್ತಿರುವುದು ಮತ್ತೊಂದು ವಿಶೇಷ.

ಆರ್ಯ ಸಮಾಜದಲ್ಲಿ ಏಕೆ ಮದುವೆ?

ಈ ಬಗ್ಗೆ ವಿವರಣೆ ನೀಡಿದ ದಿಯಾ ನನ್ನ ತಂದೆ ಜರ್ಮನ್, ಮಲ ತಂದೆ ಮುಸ್ಲಿಂ, ತಾಯಿ ಬೆಂಗಾಳಿ, ಭಾವಿ ಪತಿ ಸಾಹಿಲ್ ಪಂಜಾಬಿ, ಮೆಹಂದಿ, ಸಂಗೀತ್, ಮದುವೆ ಎಲ್ಲವೂ ಸಾಂಪ್ರದಾಯಿಕ ರೀತಿಯಲ್ಲಿ ನಡೆದರೂ ನಾವು ಎಲ್ಲಾ ಮತಧರ್ಮದ ವಿಧಿ ವಿಧಾನವನ್ನು ಬದಿಗೊತ್ತಿ ಮದುವೆ ದಿನ ಮಾತ್ರ ಆರ್ಯ ಸಮಾಜಕ್ಕೆ ಹೋಗುತ್ತೇವೆ ಎಂದಿದ್ದಾರೆ.

ಮತದಾನ ಮಾಡಿಲ್ಲ ಎಂದು ದಿಯಾ ದುಃಖ

ಇದೇ ಮೊದಲ ಬಾರಿಗೆ ನಾನು ಮತದಾನ ಮಾಡಿಲ್ಲ ಎಂದು ದಿಯಾ ದುಃಖ ವ್ಯಕ್ತಪಡಿಸಿದ್ದರು.

ಮೆಹಂದಿ ರಂಗಿನ ಜೊತೆ ದಿಯಾ ಸಾಹಿಲ್

ದಿಯಾ ಅವರು ಮೆಹಂದಿ ಕಾರ್ಯಕ್ರಮದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಹಳದಿ ಬಣ್ಣದ ಅನಾರ್ಕಲಿ ಸ್ಯೂಟ್ ನಲ್ಲಿರುವ ದಿಯಾ ಹಾಗೂ ರೆಡ್ ಕುರ್ತಾ ತೊಟ್ಟಿರುವ ಸಾಹಿಲ್ ಜೋಡಿ ನೋಡಿ

English summary
Beautiful and lovely Dia Mirza is getting married Tomorrow with her beau Sahil Sangha. The couple is getting married in Delhi. Dia Mirza and Sahil Sangha's mehendi ceremony took place on Thursday night. She Tweeted Mehendi picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada