»   » ಚಿತ್ರಗಳಲ್ಲಿ : ಬಾಲಿವುಡ್ ಬೆಡಗಿಯರ ಬೆಕ್ಕಿನ ಜಗಳ

ಚಿತ್ರಗಳಲ್ಲಿ : ಬಾಲಿವುಡ್ ಬೆಡಗಿಯರ ಬೆಕ್ಕಿನ ಜಗಳ

Posted By:
Subscribe to Filmibeat Kannada

ಬಾಲಿವುಡ್ ನ ಗ್ಲಾಮರ್ ಜಗತ್ತಿನಲ್ಲಿ ಸ್ಥಾನಕ್ಕಾಗಿ ಹೀರೋಗಾಗಿ ಒಳ್ಳೆ ಪಾತ್ರಕ್ಕಾಗಿ ಕೆಲವೊಮ್ಮೆ ಪ್ರಚಾರಕ್ಕಾಗಿ ನಾಯಕಿಯರ ಮಧ್ಯೆ ಕೋಳಿ ಜಗಳಗಳು ಆಗುವುದು ಮಾಮೂಲಿ. ಜನಪ್ರಿಯತೆ ಗಳಿಸಿರುವ ಇಬ್ಬರು ನಾಯಕಿಯರು ಎಂದಿಗೂ ಉತ್ತಮ ಗೆಳತಿಯರಾಗಿರಲು ಸಾಧ್ಯವೇ ಇಲ್ಲ ಎಂಬು ಅಲಿಖಿತ ನಿಯಮಕ್ಕೆ ತಕ್ಕಂತೆ ನಾಯಕಿಯರು ಕುಣಿಯುತ್ತಿರುತ್ತಾರೆ.

ಥಳಕು ಬಳುಕಿನ ಪ್ರಪಂಚದಲ್ಲಿ 'ನಾನು ನನ್ನದು' ಎಂಬುದು ಇದ್ದದ್ದೇ. ವೃತ್ತಿ ಮಾತ್ಸರ್ಯ ಯಾರನ್ನು ಬಿಟ್ಟಿಲ್ಲ. ಕೆಲವೊಮ್ಮೆ ವೈಯಕ್ತಿಕ ದ್ವೇಷವಾಗಿ ಬೆಳೆದು ಹಾದಿ ರಂಪ ಬೀದಿ ರಂಪ ವಾಗಿದ್ದು ಇದೆ. ಬಿಪಾಶ ಬಸು -ಕರೀನಾ ಕಪೂರ್ ಒಟ್ಟಿಗೆ ನಟಿಸಿದ್ದರೂ ಕಿತ್ತಾಟ ಮಾತ್ರ ಜೋರಾಗಿ ಮಾಡಿಕೊಂಡಿದ್ದರು.

ದೀಪಿಕಾ ಪಡುಕೋಣೆ ಹಾಗೂ ಕತ್ರೀನಾ ಕೈಫ್ ಜಗಳ ಎಲ್ಲರಿಗೂ ಗೊತ್ತೇ ಇದೆ. ಹಲವು ಬಾರಿ ನಾಯಕ ನಟನಿಗಾಗಿ ನಾಯಕಿಯರು ತೆರೆ ಮರೆಯಲ್ಲೂ ಜೋರು ಜಗಳವಾಡಿದ್ದು ಗಾಸಿಪ್ ಕಲಂ ಮೀರಿ ಬೆಳೆದು ನಗೆಪಾಟಲಾಗಿದೆ. ಈ ರೀತಿ ಕೋಳಿ ಜಗಳವಾಡುವ ಬಾಲಿವುಡ್ ಬೆಡಗಿಯರ ಸಂಗ್ರಹ ಇಲ್ಲಿದೆ.. ಹುಷಾರಾಗಿ ನೋಡಿ..

ಅನುಷ್ಕಾ- ದೀಪಿಕಾ

ಬೆಂಗಳೂರು ಮೂಲದ ಅನುಷ್ಕಾ ಶರ್ಮಾ ಹಾಗೂ ದೀಪಿಕಾ ಪಡುಕೋಣೆ ಅವರು ವಸ್ತ್ರ ವಿನ್ಯಾಸಕರ ವಿಷಯದಲ್ಲಿ ಕಿತ್ತಾಡಿದ್ದರು.

ಕತ್ರೀನಾ- ದೀಪಿಕಾ

ರಣ ಬೀರ್ ಕಪೂರ್ ನ ಹಿಂದೆ ಬಿದ್ದ ಇಬ್ಬರು ಬೆಡಗಿಯರು ವೃತ್ತಿ ವೈಷಮ್ಯದ ಜೊತೆಗೆ ರಣಬೀರ್ ಒಲವು ಗಳಿಸಲು ಕಿತ್ತಾಡಿದ್ದು, ರಜನಿಕಾಂತ್ ಮಹತ್ವದ ಚಿತ್ರ ಕೋಚಾಡಿಯನ್ ನಾಯಕಿ ಪಟ್ಟಕ್ಕಾಗಿ ಕಿತ್ತಾಡಿದ್ದು, ಸಂಬಂಧ ಹಳಸುವಂತೆ ಮಾಡಿತು

ಬಿಪಾಶಾ-ಅಮೀಷಾ ಪಟೇಲ್

ಒಂದೇ ಥರದ ಉಡುಗೆ ತೊಟ್ಟು ಸಮಾರಂಭವೊಂದರಲ್ಲಿ ಕಾಣಿಸಿಕೊಂಡ ಈ ಬೆಡಗಿಯರು ಪರಸ್ಪರ ಕಿತ್ತಾಡಿದ್ದು ಕಂಡು ಅವರ ವಸ್ತ್ರ ವಿನ್ಯಾಸಗಾರರು ನಕ್ಕರೋ ಅತ್ತರೋ ತಿಳಿಯಲಿಲ್ಲ

ಕರೀನಾ-ಬಿಪಾಶಾ

ಅಜನಬಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ ಮೇಲೆ ಕೆಲಕಾಲ ಇಬ್ಬರಿಗೂ ಜಗಳ ಆರಂಭವಾಯಿತು. ಇಬ್ಬರು ನನ್ನ ಸ್ಟೈಲಿಷ್(ವಸ್ತ್ರ ವಿನ್ಯಾಸಗಾರ) ನೀನು ಏಕೆ ಬಳಸಿದೆ ಎಂದು ಕಿತ್ತಾಡಿದ್ದೋ ಕಿತ್ತಾಡಿದ್ದು

ಕಂಗನಾ- ಪ್ರಿಯಾಂಕಾ

ಕಂಗನಾ -ಪ್ರಿಯಾಂಕಾ ಇಬ್ಬರು ಫ್ಯಾಷನ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ ಮೇಲೆ ಜಗಳ ಆರಂಭವಾಯಿತು. ಎಲ್ಲರೂ ಕಂಗನಾ ಹೊಗಳುವುದನ್ನು ಕಂಡು ಅಸೂಯೆಗೊಂಡು ಫ್ಯಾಷನ್ ಚಿತ್ರಕ್ಕೆ ನಾನೇ ನಾಯಕಿ ಎಂದು ಪ್ರಿಯಾಂಕಾ ಹೇಳಿದ್ದು ಕಂಗನಾಗೆ ಕೋಪ ತರಿಸಿತ್ತು.

ಸೋನಾಕ್ಷಿ ಸಿನ್ಹಾ- ಕತ್ರೀನಾ ಕೈಫ್

ಕತ್ರೀನಾ ಕೈಫ್ ನಟಿಸಬೇಕಿದ್ದ ಹಲವು ಜಾಹೀರಾತುಗಳು ಸೋನಾಕ್ಷಿ ಸಿನ್ಹಾ ಪಾಲಾಗಿದ್ದು ಕೈಫ್ ಗೆ ಸಿಟ್ಟು ತರಿಸಿತ್ತು. ಸೋನಾಕ್ಷಿ ಈ ಬಗ್ಗೆ ಎಸ್ ಎಂಎಸ್ ಮಾಡಿ ಕೈಫ್ ಜೊತೆ ಸಂಧಾನಕ್ಕೂ ಯತ್ನಿಸಿದ್ದರು.ಆದರೆ, ಕೈಫ್ ಯಾವುದಕ್ಕೂ ಉತ್ತ್ತರಿಸಲೇ ಇಲ್ಲ

ಪ್ರಿಯಾಂಕಾ-ಕರೀನಾ

ಐತರಾಜ್ ಚಿತ್ರದ ನಂತರ ಇಬ್ಬರ ನಡುವೆ ಶೀತಲ ಸಮರ ಆರಂಭವಾಗಿದ್ದು ನಂತರ ತಣ್ಣಗಾಗಿತು ಎನ್ನುತ್ತಾರೆ. ಇಬ್ಬರು ಈಗ ಒಳ್ಳೆ ಫ್ರೆಂಡ್ಸ್ ಅಂತೆ

ಐಶ್ವರ್ಯಾ ರೈ -ರಾಣಿ ಮುಖರ್ಜಿ

ಚಲ್ತೆ ಚಲ್ತೆ ಚಿತ್ರದ ನಂತರ ಐಶ್ವರ್ಯಾ ರೈ ಹಾಗೂ ರಾಣಿ ಮುಖರ್ಜಿ ನಡುವೆ ಕೆಲ ಕಾಲ ಶೀತಲ ಸಮರ ನಡೆದಿತ್ತು.

ಅಮೀಷಾ- ಕರೀನಾ

ಕಹೋ ನಾ ಪ್ಯಾರ್ ಹೇ ಚಿತ್ರದಲ್ಲಿ ಕರೀನಾ ಕಪೂರ್ ಬದಲಿಗೆ ಅಮೀಷಾ ಪಟೇಲ್ ನಾಯಕಿಯಾಗಿದ್ದು ಕರೀನಾಗೆ ಸಹಿಸಲು ಆಗದೆ ಇಬ್ಬರು ಮುನುಸಿಕೊಂಡಿದ್ದರು

ಐಶ್ವರ್ಯಾ -ಸೋನಮ್ ಕಪೂರ್

ಅನಿಲ್ ಕಪೂರ್ ಮಗಳು ಸೋನಮ್ ಕಪೂರ್ ಅವರು ಕ್ಯಾನೆ ಚಿತ್ರೋತ್ಸವಕ್ಕೆ ಹೋಗಿದ್ದಾಗ ತನಗಿಂತ ಹಿರಿಯ ನಟಿ ಐಶ್ವರ್ಯಾ ರೈ ಅವರನ್ನು 'ಆಂಟಿ' ಎಂದು ಕರೆದಿದ್ದಳಂತೆ ಇದು ಇಬ್ಬರ ನಡುವೆ ಜಗಳಕ್ಕೆ ನಾಂದಿ ಹಾಡಿತ್ತು.

English summary
There is a popular saying that two actresses can never be good friends, and our Bollywood heroines have proved that many a times. They have also shown that the glamour world of entertainmen but most of the ret is full of jealousy and rivalry. Well, it does not mean that there are no female friends in B-Town, but most of the relation could not pass the test of the time.
Please Wait while comments are loading...