For Quick Alerts
  ALLOW NOTIFICATIONS  
  For Daily Alerts

  ಮದುವೆ ವಾರ್ಷಿಕೋತ್ಸವ; ಶಾರುಖ್-ಗೌರಿ ಚಿತ್ರಗಳು

  |

  ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಗೌರಿ ಖಾನ್ ಮದುವೆಯಾಗಿ ಇಂದಿಗೆ 21 ವರ್ಷಗಳು ಕಳೆದಿವೆ. ಅಚ್ಚರಿಯೆಂದರೆ, ತಮ್ಮ 21ನೇ ವಯಸ್ಸಿನಲ್ಲಿ ಗೌರಿ ಖಾನ್ ಅವರನ್ನು ಶಾರುಖ್ ಖಾನ್ ಮದುವೆಯಾಗಿದ್ದಾರೆ. ಈಗ ಮದುವೆಯಾಗಿ 21 ವರ್ಷಗಳು ಉರುಳಿವೆ. ಅವರಿಬ್ಬರ ಮದುವೆ ವೇಳೆ ಶಾರುಖ್ ಸೂಪರ್ ಸ್ಟಾರ್ ಹಾಗಿರಲಿ, ಇನ್ನೂ ಬಾಲಿವುಡ್ ನಲ್ಲಿ ತಮ್ಮ ಸ್ಥಾನವನ್ನೇ ಗಟ್ಟಿಯಾಗಿ ಪಡೆದುಕೊಂಡಿರಲಿಲ್ಲ.

  1991 ರ ಸುಮಾರಿಗ ಆಗ ತಾನೆ ಬಾಲಿವುಡ್ ಗೆ ಅಂಬೆಗಾಲಿಟ್ಟು ಬಂದಿದ್ದ ಶಾರುಖ್ ಅವರಿಗೆ ಯಾವುದೇ ಗಾಡ್ ಫಾದರ್ ಇರಲಿಲ್ಲ. ಸ್ವಪ್ರಯತ್ನ ಹಾಗೂ ಸ್ವಪ್ರತಿಭೆಯಿಂದ ಹಂತಹಂತವಾಗಿ ಬೆಳೆದ ಶಾರುಖ್, ಈಗ ಎಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಮೊದಲು ಶಾರುಖ್ ಹಾಗೂ ಗೌರಿ ಮದುವೆಗೆ ವಿರೋಧಿಸಿದ್ದ ಗೌರಿ ಪೋಷಕರು ನಂತರ ಒಪ್ಪಿ ಅವರಿಬ್ಬರ ಮದುವೆಗೆ ಸಮ್ಮತಿಸಿ ಹರಿಸಿದ್ದಾರೆ. ಈಗ ಶಾರುಖ್-ಗೌರಿ ದಂಪತಿಯದು ಎರಡು ಮುದ್ದಾದ ಮಕ್ಕಳ ಸುಖಿ ಕುಟುಂಬ.

  ಬಾಲಿವುಡ್ ಜೊತೆ ಗೌರಿ ಹೃದಯಕ್ಕೂ ಶಾರುಖ್ ಲಗ್ಗೆ

  ಬಾಲಿವುಡ್ ಜೊತೆ ಗೌರಿ ಹೃದಯಕ್ಕೂ ಶಾರುಖ್ ಲಗ್ಗೆ

  ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಶಾರುಖ್ ಅವರಿಗೆ ಯಾವುದೇ ಗಾಡ್ ಫಾದರ್ ನೆರವು ಇರಲಿಲ್ಲ. ಆದರೆ ಛಲ ಹಾಗೂ ಆತ್ಮವಿಶ್ವಾಸ ಅವರ ಜೊತೆಯಲ್ಲಿತ್ತು. ಅದಕ್ಕಿಂತ ಹೆಚ್ಚಾಗಿ ಗೌರಿ ಸಾಂಗತ್ಯ ದೊರೆಯಿತು. 25 ಅಕ್ಟೋಬರ್ 1991 ರಲ್ಲಿ ಗೌರಿ ಜೊತೆ ವಿವಾಹ.

  ದಿವಾನಾ ಜೊತೆ ಸಂಸಾರದಲ್ಲೂ ಶಾರುಖ್ ಸರಿಗಮ

  ದಿವಾನಾ ಜೊತೆ ಸಂಸಾರದಲ್ಲೂ ಶಾರುಖ್ ಸರಿಗಮ

  1992 ರಲ್ಲಿ ದಿವಾನಾ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಹೀರೋ ಆಗಿ ಮಿಂಚಿದರು ಶಾರುಖ್. ಚಿತ್ರ ಸೂಪರ್ ಹಿಟ್ ದಾಖಲಿಸದ್ದಲ್ಲದೇ ಶಾರುಖ್ ಬಾಲಿವುಡ್ ನಲ್ಲಿ ಭದ್ರವಾಗಿ ನೆಲೆಯೂರಲು ಕಾರಣವಾಯಿತು. ಜೊತೆಯಲ್ಲಿ ಗೌರಿ ಖಾನ್ ಜೊತೆ ಸಂಸಾರದಲ್ಲೂ ಶಾರುಖ್ ಸಖತ್ ಸರಿಗಮ.

  ಬಾಲಿವುಡ್ ನಲ್ಲಿ ಬಾಜಿಗರ್, ಮುಂಬೈನಲ್ಲಿ ಘರ್

  ಬಾಲಿವುಡ್ ನಲ್ಲಿ ಬಾಜಿಗರ್, ಮುಂಬೈನಲ್ಲಿ ಘರ್

  1993ರಲ್ಲಿ ಬಂದ 'ಡರ್' ಸಿನಿಮಾ ಮೂಲಕ ಶಾರುಖ್ ಅಭಿಮಾನಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ. ಇದೇ ವರ್ಷ ಬಾಜಿಗರ್ ಚಿತ್ರದಲ್ಲಿ ಅಭಿನಯಿಸಿದ ಶಾರುಖ್, ಈ ಚಿತ್ರದ ಮೂಲಕ ಯಶಸ್ವಿ ಬಾಲಿವುಡ್ ನಾಯಕ ಪಟ್ಟದಲ್ಲಿ ಕುಳಿತರು. ಗೌರಿ ಖಾನ್ ಜೊತೆ ಸಂಸಾರದಲ್ಲೂ ಸಮರಸ ಕಾಯ್ದುಕೊಂಡರು. ಮುಂಬೈ ವಾಸಿಯಾದರು ಶಾರುಖ್.

  ಪ್ರವಾಸದಲ್ಲಿ ಕಿಂಗ್ ಖಾನ್ ಜೊತೆ ಗೌರಿ ಖಾನ್

  ಪ್ರವಾಸದಲ್ಲಿ ಕಿಂಗ್ ಖಾನ್ ಜೊತೆ ಗೌರಿ ಖಾನ್

  ಬಾಲಿವುಡ್ ಕಿಂಗ್ ಖಾನ್ ಪತ್ನಿ ಗೌರಿ ಖಾನ್ ಆಗಾಗ ಪ್ರವಾಸ ಹೋಗುತ್ತಿದ್ದರು. ಅಲ್ಲಿ ತೆಗೆದ ಫೋಟೋಗಳು ಇಂದಿಗೂ ಅಲ್ಲಲ್ಲಿ ಹರಿದಾಡುತ್ತಿವೆ. 1194ರಲ್ಲಿ ಬಂದ ಅಂಜಾಮ್ ಚಿತ್ರ ಅಷ್ಟೇನೂ ಯಶಸ್ವಿಯಾಗದಿದ್ದರೂ ಶಾರುಖ್ ವೃತ್ತಿಜೀವನದಲ್ಲಿ ಅದು ಕಪ್ಪುಚುಕ್ಕಿಯಾಗಲಿಲ್ಲ.

  ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೇ

  ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೇ

  1995 ರಲ್ಲಿ ಬಂದ ಈ ರೊಮ್ಯಾಂಟಿಕ್ ಚಿತ್ರ 'ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೇ' ಮುಂಬೈನ ಶಿವಾಜಿ ಚಿತ್ರಮಂದಿರದಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ. ಕಾಜೋಲ್ ಜೊತೆ ಶಾರುಖ್ ನಟಿಸಿದ ಈ ಚಿತ್ರ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ದಾಖಲೆ ನಿರ್ಮಿಸಿ ದಂತಕಥೆ ಎನಿಸಯವ ದಾರಿಯಲ್ಲಿದೆ. ನಂತರ ಶಾರುಖ್ ಬಾಲಿವುಡ್ ಸೂಪರ್ ಸ್ಟಾರ್ ಆಗಿದ್ದು ಈಗ ಇತಿಹಾಸ.

  ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ಕುಟುಂಬದ ಕುರಿತು ಮಾತನಾಡಿರುವ ಗೌರಿ ಖಾನ್ "ಖಂಡಿತವಾಗಿಯೂ ಶಾರುಖ್ ನನಗೆ ಸ್ಪೂರ್ತಿ. ಅವರು ಕೆಲಸದಲ್ಲಿ ತುಂಬಾ ಮಗ್ನರಾಗಿರುವುದಲ್ಲದೇ ಭಾರೀ ಮಹತ್ವಾಕಾಂಕ್ಷಿ ಕೂಡ. ನನ್ನನ್ನೂ ಕೆಲಸ ಮಾಡುವಂತೆ ಪ್ರೇರೇಪಿಸುತ್ತಿದ್ದರು. ನಾನು ಇಂಟಿರಿಯರ್ ಡಿಸೈನ್ ಮಾಡಲು ನನಗೆ ಸ್ಪೂರ್ತಿ ನೀಡಿದ್ದು ಹಾಗೂ ಆತ್ಮವಿಶ್ವಾಸ ತುಂಬಿದ್ದು ಶಾರುಖ್.

  ನಾನು ಮಾಡುತ್ತಿರುವ ಡಿಸೈನಿಂಗ್ ಕೆಲಸವನ್ನು ನನಗಿಂತ ಹೆಚ್ಚಾಗಿ ಅವರು ಪ್ರೀತಿಸುತ್ತಾರೆ. ಹೆಚ್ಚು ಹೆಚ್ಚು ಕೆಲಸ ಮಾಡಲು ನನ್ನನ್ನೂ ಪ್ರೇರೇಪಿಸುತ್ತಾರೆ. ನಾನಿಂದು ಈ ಕೆಲಸದಲ್ಲಿ ಏನು ಸಾಧಿಸಿದ್ದರೂ ಅದು ಶಾರುಖ್ ಸ್ಪೂರ್ತಿಯಂದಷ್ಟೇ. ಅಷ್ಟೇ ಅಲ್ಲ, ಪ್ರತಿಯೊಬ್ಬರೂ ಕೆಲಸ ಮಾಡಬೇಕು ಹಾಗೂ ತಾವು ಮಾಡುವ ಕೆಲಸವನ್ನು ಪ್ರೀತಿಸಬೇಕು ಎಂಬುದು ಶಾರುಖ್ ನಿಲುವು" ಎಂದಿದ್ದಾರೆ.

  ಇಂದು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಹಾಗೂ ಪತ್ನಿ ಗೌರಿ ಜೋಡಿ ತಮ್ಮ 21ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಇಡೀ ಜಗತ್ತೇ ಶುಭ ಹಾರೈಸುತ್ತಿದೆ. ಈ ಜೋಡಿಗೆ ನಮ್ಮ ಒನ್ ಇಂಡಿಯಾ ಕನ್ನಡದ ಶುಭ ಹಾರೈಕೆಗಳು... (ಒನ್ ಇಂಡಿಯಾ ಕನ್ನಡ)

  English summary
  Shahrukh Khan and Gauri Khan got married on 25th October 1991. Today is their 21st wedding anniversary. Check out pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X