twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಸಾವಿನ ಪ್ರಕರಣ: ವಸ್ತುಸ್ಥಿತಿ ವರದಿ ಕೋರಿ ಪಿಐಎಲ್

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಪೂತ್ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ವಸ್ತುಸ್ಥಿತಿ ವರದಿ ಸಲ್ಲಿಸಲು ಸಿಬಿಐಗೆ ನಿರ್ದೇಶಿಸಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.

    ಸುಶಾಂತ್ ಸಿಂಗ್ ನಿಧನ ಹೊಂದಿ ತಿಂಗಳುಗಳೇ ಕಳೆದಿವೆ. ಇದುವರೆಗೂ ಸುಶಾಂತ್ ಸಾವಿನ ಹಿಂದಿನ ರಹಸ್ಯವೇನು ಎನ್ನುವುದು ಬಹಿರಂಗವಾಗಿಲ್ಲ. ಸಿಬಿಐ ತನಿಖೆ ವಿಳಂಬಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ದಾಖಲಿಸಲಾಗಿದೆ. ವಕೀಲ ಪುನೀತ್ ದಂಡಾ ಅವರು ಅರ್ಜಿ ಸಲ್ಲಿಸಿದ್ದು, ಆಗಸ್ಟ್ 19ರಂದು ಸಿಬಿಐ ವಿಚಾರಣೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು.

    ಡ್ರಗ್ಸ್ ಪ್ರಕರಣ: ರಿಯಾ ಚಕ್ರವರ್ತಿ ಸಹೋದರನಿಗೆ ಜಾಮೀನು ಮಂಜೂರುಡ್ರಗ್ಸ್ ಪ್ರಕರಣ: ರಿಯಾ ಚಕ್ರವರ್ತಿ ಸಹೋದರನಿಗೆ ಜಾಮೀನು ಮಂಜೂರು

    ನಾಲ್ಕು ತಿಂಗಳು ಕಳೆದರೂ, ಸಿಬಿಐ ತನಿಖೆಯನ್ನು ಪೂರ್ಣಗೊಳಿಸಿಲ್ಲ. ಈ ಪ್ರಕರಣದಲ್ಲಿ ಸಿಬಿಐ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ತನಿಖೆ ವಿಳಂಬವಾಗುತ್ತಿದೆ' ಎಂದು ದೂರಿದ್ದಾರೆ. ಎರಡು ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿ, ಅಂತಿಮ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯದಲ್ಲಿ ಸಲ್ಲಿಸಲು ಸಿಬಿಐಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

    PIL filed at Supreme Court Asked CBI to submit status report in sushant singh death case

    Recommended Video

    ನಿಮ್ಮ ಸಪೋರ್ಟ್ ಇದ್ರೇನೆ ನಮಗೆ ಒಂದು ಧೈರ್ಯ | Manasa | Pursothrama |Filmibeat Kannada

    ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ಸಿಂಗ್ ಸಾವು ಇಡೀ ಬಾಲಿವುಡ್ ವುಡ್ ಅನ್ನು ಬೆಚ್ಚಿಬೀಳಿಸಿತ್ತು. ಸುಶಾಂತ್ ಸಾವಿನ ತನಿಖೆ ವೇಳೆಯೇ ಡ್ರಗ್ಸ್ ಮಾಫಿಯ ಸಹ ಬಯಲಿಗೆ ಬಂದಿದೆ. ಈ ಸಂಬಂಧ ಬಾಲಿವುಡ್ ನ ಅನೇಕ ಕಲಾವಿದರು ಎನ್ ಸಿ ಬಿ ವಿಚಾರಣೆ ಎದುರಿಸಿದ್ದಾರೆ.

    English summary
    PIL filed at Supreme Court Asked CBI to submit status report in sushant singh rajput death case.
    Tuesday, December 8, 2020, 8:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X