twitter
    For Quick Alerts
    ALLOW NOTIFICATIONS  
    For Daily Alerts

    ಲತಾ ಮಂಗೇಶ್ಕರ್ ಹುಟ್ಟುಹಬ್ಬಕ್ಕೆ ಕೇಂದ್ರದಿಂದ ವಿಶೇಷ ಗೌರವ: ಅಯೋಧ್ಯೆಯ ಚೌಕಕ್ಕೆ ಗಾನ ಕೋಗಿಲೆ ಹೆಸರು

    |

    ಇಂದು(ಸಪ್ಟೆಂಬರ್ 28) ಗಾನ ಕೋಗಿಲೆ ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಪುರಸ್ಕೃತರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಹುಟ್ಟುಹಬ್ಬ. ಏಳು ದಶಕಗಳ ಕಾಲ ತಮ್ಮ ಗಾಯನದ ಮೂಲಕ ಕೇಳುಗರ ಮನ ತಣಿಸಿದ್ದ ಗಾಯಕಿ ಲತಾ ಮಂಗೇಶ್ಕರ್ ಅವರ ನೆನಪು ಭಾರತೀಯ ಚಿತ್ರರಂಗದಲ್ಲಿ ಸದಾ ಹಸಿರು. ತಮ್ಮ ಅದ್ಭುತ ಕಂಠದಿಂದಲೇ ಸಂಗೀತ ಲೋಕವನ್ನು ಆಳಿದ್ದ ಅವರು ನೈಟಿಂಗೇಲ್‌ ಆಫ್‌ ನಾರ್ಥ್‌ ಇಂಡಿಯಾ, ಕ್ವೀನ್‌ ಆಫ್‌ ಮೆಲೋಡಿ ಎಂಬ ಬಿರುದಿಗೆ ಪಾತ್ರರಾಗಿದ್ದರು.

    ಇಂದು (ಸಪ್ಟೆಂಬರ್ 28) ಲತಾ ಮಂಗೇಶ್ಕರ್ ಅವರ ಜನ್ಮದಿನವಾಗಿದ್ದು, ಇಡೀ ಭಾರತೀಯ ಚಿತ್ರರಂಗವೇ ಇಂದು ಅವರನ್ನು ನೆನಪು ಮಾಡಿಕೊಳ್ಳುತ್ತಿದೆ. ತಮ್ಮ ಅದ್ಭುತ ಗಾಯನದ ಮೂಲಕ ಭಾರತವನ್ನೇ ಪ್ರತಿನಿಧಿಸಿದ್ದ ಲತಾ ಮಂಗೇಶ್ಕರ್ ಅವರ ಜನ್ಮದಿನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೆನಪಿಸಿಕೊಂಡಿದ್ದು, ಅವರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಕೊಂಡಾಡಿದ್ದಾರೆ. ಲತಾ ಮಂಗೇಶ್ಕರ್ ಅವರ ಜನ್ಮದಿನಕ್ಕೆ ಪ್ರಧಾನಿ ಮೋದಿ ವಿಶೇಷ ಘೋಷಣೆಯೊಂದನ್ನು ಮಾಡಿದ್ದು ಈ ಮೂಲಕ ಗಾನ ಕೋಗಿಲೆಗೆ ಗೌರವ ಸೂಚಿಸಿದ್ದಾರೆ. ಅಯೋಧ್ಯೆಯಲ್ಲಿರುವ ಚೌಕಕ್ಕೆ ಲತಾ ಮಂಗೇಶ್ಕರ್ ಅವರ ಹೆಸರು ಇಡಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದು, ಇದು ಶ್ರೇಷ್ಠ ಭಾರತೀಯ ವ್ಯಕ್ತಿಯೊಬ್ಬರಿಗೆ ನೀಡುವ ಸೂಕ್ತವಾದ ಗೌರವ ಎಂದು ಮೋದಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    'ಭಾರತ ರತ್ನ' ಸಂಗೀತ ಲೋಕ ದಂತ ಕಥೆ ಭೂಪೇನ್ ಹಝಾರಿಕಾಗೆ ಗೂಗಲ್ ಡೂಡಲ್ ಗೌರವ!'ಭಾರತ ರತ್ನ' ಸಂಗೀತ ಲೋಕ ದಂತ ಕಥೆ ಭೂಪೇನ್ ಹಝಾರಿಕಾಗೆ ಗೂಗಲ್ ಡೂಡಲ್ ಗೌರವ!

    ಲತಾ ಮಂಗೇಶ್ಕರ್ ಅವರು ಶಾಸ್ತ್ರೀಯ ಸಂಗೀತಕಾರ ಹಾಗೂ ರಂಗಭೂಮಿ ಕಲಾವಿದರಾಗಿರುವ ದೀನಾನಾಥ್‌ ಮಂಗೇಶ್ಕರ್‌ ಹಾಗೂ ಸೇವಂತಿ ದಂಪತಿಯ ಹಿರಿಯ ಪುತ್ರಿಯಾಗಿ ಮಧ್ಯ ಪ್ರದೇಶದ ಇಂದೋರಿನಲ್ಲಿ 1929 ಸಪ್ಟೆಂಬರ್ 28 ರಂದು ಜನಿಸಿದರು. ಕಲಾ ಕುಟುಂಬದಲ್ಲೇ ಜನಿಸಿದ ಲತಾ ಮಂಗೇಶ್ಕರ್ ತಮ್ಮ 5ನೇ ವಯಸ್ಸಿನಲ್ಲಿ ತಂದೆಯ ಬಳಿಯೆ ಸಂಗೀತಾ ಅಭ್ಯಾಸ ಆರಂಭಿಸಿದರು. ದೀನಾನಾಥ್‌ ಬಲವಂತ್ ಸಂಗೀತಾ ಮಂಡಳಿ ನಡೆಸುತ್ತಿದ್ದರು. ಇಲ್ಲಿ ಸಂಗೀತಾ ಅಭ್ಯಾಸ ಆರಂಭಿಸಿದ ಅವರು 1942ರಲ್ಲಿ ತಮ್ಮ ಸಂಗೀತ ಯಾನವನ್ನು ಆರಂಭಿಸಿದರು.

    PM Narendra Modi Names A Chowk In Ayodhya After Legendary Singer Lata Mangeshkar

    ಲತಾ ಮಂಗೇಶ್ಕರ್ ತಮ್ಮ ಜೀವಿತಾವಧಿಯಲ್ಲಿ ಭಾರತ ಹಾಗೂ ವಿದೇಶಿ ಭಾಷೆಗಳು ಸೇರಿದಂತೆ ಒಟ್ಟು 36ಕ್ಕೂ ಹೆಚ್ಚು ಭಾಷೆಗಳಲ್ಲಿ 1,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಈ ಗಾನ ಕೋಗಿಲೆಯ ಕಂಠಕ್ಕೆ ಮನಸೋಲದವರೆ ಇಲ್ಲ. ಕನ್ನಡ ಚಿತ್ರಗಳಲ್ಲೂ ಹಾಡಿರುವ ಲತಾ ಮಂಗೇಶ್ಕರ್ 1967ರಲ್ಲಿ ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಬೆಳ್ಳನೆ ಬೆಳಗಾಯಿತು ಹಾಡನ್ನು ಹಾಡಿದ್ದಾರೆ.

    ಚೀನಾ-ಭಾರತ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗಾಗಿ ಲತಾ ಮಂಗೇಶ್ಕರ್ ಅವರು ಹಾಡಿರುವ ಮೇರೆ ವತನ್ ಕೆ ಲೋಗೋ ಹಾಡು ಪ್ರತಿಯೊಬ್ಬ ಭಾರತೀಯನ ಕಣ್ಣಲ್ಲೂ ನೀರು ತರಿಸಿತ್ತು. ಅಂದಿನ ಪ್ರಧಾನ ಮಂತ್ರಿ ಜವಹರಲಾಲ್‌ ಅವರು ಲತಾ ಮಂಗೇಶ್ಕರ್ ಹಾಡು ಕೇಳಿ ಕಣ್ಣೀರು ಹಾಕಿ ಭಾವುಕರಾಗಿದ್ದರು. ಅಂತಹ ಅದ್ಭುತ ಶಕ್ತಿ ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿತ್ತು.

    ಲತಾ ಮಂಗೇಶ್ಕರ್​ ಅವರ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ನೀಡಿ ಭಾರತ ಸರ್ಕಾರ ಗೌರವಿಸಿತ್ತು. ನ್ಯೂಯಾರ್ಕ್ ವಿಶ್ವವಿದ್ಯಾಲಯವೂ ಸೇರಿದಂತೆ ಒಟ್ಟು 6 ವಿಶ್ವ ವಿದ್ಯಾಲಯಗಳು ಲತಾ ಮಂಗೇಶ್ಕರ್ ಅವರಿಗೆ ಗೌರವ ಡಾಕ್ಟರೇಟ್‌ ನೀಡಿದ್ದು, ಫ್ರಾನ್ಸ್ ಸರ್ಕಾರ ನೀಡುವ ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್ ಪ್ರಶಸ್ತಿಯನ್ನು ಸಹ ತಮ್ಮ ಮುಡಿಗೇರಿಸಿಕೊಂಡಿದ್ದರು. ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲತಾ ಮಂಗೇಶ್ಕರ್ ಅವರನ್ನು ಅರಸಿ ಬಂದಿದ್ದವು. ಏಳು ದಶಕಗಳ ಕಾಲ ಸಂಗೀತ ಕ್ಷೇತ್ರಕ್ಕೆ ತಮ್ಮ ಸೇವೆ ಸಲ್ಲಿಸಿರುವ ಲತಾ ಮಂಗೇಶ್ಕರ್​ ಅವರು ಭಾರತೀಯ ಸಂಗೀತ ಲೋಕದ ದಂತಕತೆಯಾಗಿದ್ದಾರೆ.

    2022ರ ಜನವರಿಗೆ ತಿಂಗಳಿನ ಮೊದಲ ವಾರದಲ್ಲಿ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಲತಾ ಮಂಗೇಶ್ಕರ್​ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು ಒಂದು ತಿಂಗಳ ಕಾಲ ಐಸಿಯುನಲ್ಲಿ ಹೋರಾಟ ನಡೆಸಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ 2022 ಫೆಬ್ರವರಿ 6ರಂದು ಸ್ವರ್ಗಸ್ಥರಾದರು.

    English summary
    PM Narendra Modi names a chowk in Ayodhya after legendary singer Lata Mangeshkar on her birth anniversary,
    Wednesday, September 28, 2022, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X