For Quick Alerts
  ALLOW NOTIFICATIONS  
  For Daily Alerts

  ಕಿತ್ತಾಡಿಕೊಂಡು ಠಾಣೆ ಮೆಟ್ಟಿಲೇರಿದ್ದ ಪೂನಂ ಪಾಂಡೆ ದಂಪತಿ ಈಗ ಮತ್ತೆ ಒಂದು!

  |

  ನಟಿ, ಮಾಡೆಲ್ ಪೂನಂ ಪಾಂಡೆ ಮತ್ತು ಪತಿ ಮೂರು ದಿನದ ಹಿಂದಷ್ಟೆ ಕಿತ್ತಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು, ಆದರೆ ಈಗ ಮತ್ತೆ ಜತೆಯಾಗಿದ್ದಾರೆ.

  ಸೆಪ್ಟೆಂಬರ್ 22 ರಂದು ಪತಿ ಸ್ಯಾಂ ಬಾಂಬೆ ತಮ್ಮ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟಿ ಪೂನಂ ಪಾಂಡೆ ಗೋವಾ ಪೊಲೀಸರಿಗೆ ದೂರು ನೀಡಿದ್ದರು.

  ಆದರೆ ಈಗ ಈ ಹೊಸ ಜೋಡಿ ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡಿದ್ದಾರಂತೆ. ಇನ್ನುಮುಂದೆ ನಾವಿಬ್ಬರೂ ಜೊತೆಯಾಗಿ ಬಾಳುತ್ತೇವೆ ಎಂದಿದ್ದಾರೆ ಪೂನಂ ಪಾಂಡೆ ಮತ್ತು ಸ್ಯಾಂ ಬಾಂಬೆ.

  ಸೆಪ್ಟೆಂಬರ್ 11 ರಂದು ವಿವಾಹವಾಗಿದ್ದ ಪೂನಂ ಪಾಂಡೆ

  ಸೆಪ್ಟೆಂಬರ್ 11 ರಂದು ವಿವಾಹವಾಗಿದ್ದ ಪೂನಂ ಪಾಂಡೆ

  ನಟಿ ಪೂನಂ ಪಾಂಡೆ ಹಾಗೂ ಸ್ಯಾಮ್ ಬಾಂಬೆ ಸೆಪ್ಟೆಂಬರ್ 11 ರಂದು ವಿವಾಹವಾಗಿದ್ದಾರು. ವಿವಾಹದ ನಂತರ ಇಬ್ಬರೂ ಸಹ ಗೋವಾಕ್ಕೆ ಬಂದಿದ್ದರು. ಅಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಯೇ ಇಬ್ಬರ ನಡುವೆ ಜಗಳವಾಗಿತ್ತು.

  ಸ್ಯಾಮ್ ಬಾಂಬೆಯನ್ನು ಬಂಧಿಸಿದ್ದ ಗೋವಾ ಪೊಲೀಸರು

  ಸ್ಯಾಮ್ ಬಾಂಬೆಯನ್ನು ಬಂಧಿಸಿದ್ದ ಗೋವಾ ಪೊಲೀಸರು

  ಸೆಪ್ಟೆಂಬರ್ 22 ರಂದು ಗೋವಾದ ಕೊಕೋನ್ ಪೊಲೀಸ್ ಠಾಣೆಯಲ್ಲಿ ಪೂನಂ ಪಾಂಡೆ ದೂರು ನೀಡಿದ್ದರು. ತಮ್ಮ ಪತಿ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಲೈಂಗಿನ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

  ಸೆಪ್ಟೆಂಬರ್ 23 ರಂದು ಸ್ಯಾಮ್ ಬಾಂಬೆಗೆ ಜಾಮೀನು

  ಸೆಪ್ಟೆಂಬರ್ 23 ರಂದು ಸ್ಯಾಮ್ ಬಾಂಬೆಗೆ ಜಾಮೀನು

  ದೂರಿನನ್ವಯ ಪೊಲೀಸರು ಸ್ಯಾಮ್ ಬಾಂಬೆಯನ್ನು ಬಂಧಿಸಿದ್ದರು. ಸೆಪ್ಟೆಂಬರ್ 23 ರಂದು ಸ್ಯಾಮ್ ಬಾಂಬೆಗೆ ಜಾಮೀನು ಸಿಕ್ಕಿ ಹೊರಗೆ ಬಂದಿದ್ದರು. ಆ ನಂತರ ಈಗ ಇಬ್ಬರೂ ಸಹ ಮತ್ತೆ ಜೊತೆಯಾಗಿರುವುದಾಗಿ ಹೇಳಿದ್ದಾರೆ.

  ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada
  ಭಿನ್ನಾಭಿಪ್ರಾಯ ಬಗೆಹರಿಸಿಕೊಂಡಿದ್ದೇವೆ: ಪೂನಂ ಪಾಂಡೆ

  ಭಿನ್ನಾಭಿಪ್ರಾಯ ಬಗೆಹರಿಸಿಕೊಂಡಿದ್ದೇವೆ: ಪೂನಂ ಪಾಂಡೆ

  ನಾವಿಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ವಿಪರೀತ ಪ್ರೀತಿಸುತ್ತೇವೆ, ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡಿದ್ದೇವೆ, ನಾವಿಬ್ಬರೂ ನಮ್ಮ ಜೀವನವನ್ನು ಮತ್ತೊಮ್ಮೆ ಹೊಸದಾಗಿ ಪ್ರಾರಂಭಿಸಲಿದ್ದೇವೆ ಎಂದಿದ್ದಾರೆ ಪೂನಂ ಪಾಂಡೆ. ಸ್ಯಾಮ್ ಬಾಂಬೆ ಸಹ ಇದನ್ನೇ ಹೇಳಿದ್ದಾರೆ.

  English summary
  Poonam Pandey who given complaint against her husband now saying we will live together.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X