»   » ಪೂನಂ, ರಾಖಿ ದೇಹದ ಮೇಲೆ ಮೀನಿನ ಸಂಚಾರ

ಪೂನಂ, ರಾಖಿ ದೇಹದ ಮೇಲೆ ಮೀನಿನ ಸಂಚಾರ

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಹಿರಿಯ ನಟಿ ಡಿಂಪಲ್ ಕಪಾಡಿಯಾ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಗುರ್ಮಿತ್ ಸಿಂಗ್ ಆಕ್ಷನ್ ಕಟ್ ಹೇಳಿರುವ ಚಿತ್ರ 'ವಾಟ್ ದಿ ಫಿಶ್. ಈ ಚಿತ್ರ ಬಿಡುಗಡೆಯಾಗಿದ್ದು ಕಳೆದ ಕೆಲದಿನಗಳಿಂದ ನಡೆಯುತ್ತಿರುವ ಪ್ರಚಾರ ಕಾರ್ಯಕ್ಕೆ ಡಿಂಪಲ್ ಚಕ್ಕರ್ ಹಾಕಿದ್ದಾರೆ.

ಆದರೆ ಈ ಚಿತ್ರದ ಪ್ರಚಾರಕ್ಕಾಗಿ ಚಿತ್ರದ ನಿರ್ಮಾಪಕರು ಬಾಲಿವುಡ್ ಹಾಟ್ ಬೆಡಗಿಯರಾದ ಪೂನಂ ಪಾಂಡೆ ಹಾಗೂ ರಾಖಿ ಸಾವಂತ್ ಅವರನ್ನು ಕಣಕ್ಕಿಳಿಸಿದರು. ಆಗಲೇ ನೋಡಿ ಚಿತ್ರಕ್ಕೆ ಅದ್ಭುತ ಪ್ರಚಾರ ಸಿಕ್ಕಿದ್ದು. ಇಬ್ಬರಿಗೂ ಹಾಟ್ ಅಂಡ್ ಸೆಕ್ಸಿ ಡ್ರೆಸ್ ಗಳನ್ನು ಹಾಕಿ ಚಿತ್ರಕ್ಕೆ ಪ್ರಚಾರ ಕೊಡಲಾಯಿತು.

ಇವರಿಬ್ಬರೂ ಚಿತ್ರದಲ್ಲಿ ಅಭಿನಯಿಸದಿದ್ದರೂ ಕೇವಲ ಮಾಧ್ಯಮಗಳು ಹಾಗೂ ಜನರ ಕಣ್ಣಿಗೆ ಬೀಳುವ ಸಲುವಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾದರು. ಆದರೆ ಚಿತ್ರದ ಮುಖ್ಯ ಪಾತ್ರಧಾರಿ ಡಿಂಪಲ್ ಕಪಾಡಿಯಾ ಮಾತ್ರ ಪ್ರಚಾರಕ್ಕೆ ಬರಲೇ ಇಲ್ಲ. ಈ ಇಬ್ಬರು ಬೆಡಗಿಯರಿದ್ದ ಮೇಲೆ ಡಿಂಪಲ್ ಬಂದರೆಷ್ಟು ಬಿಟ್ಟರೆಷ್ಟು ಅಲ್ಲವೆ?

ಅದೆಲ್ಲಾ ಸರಿ ಇಷ್ಟೆಲ್ಲಾ ನೋಡಿದ ಮೇಲೆ ಪೂನಂ ಪಾಂಡೆಯ ಇನ್ನೊಂದಿಷ್ಟು ಚಿತ್ರಗಳು ನೋಡಬೇಕು ಅನ್ನಿಸದೆ ಇರುತ್ತದೆಯೇ. ಸ್ಲೈಡ್ ನಲ್ಲಿ ಪೂನಂ ಪಾಂಡೆಯ ಎಲ್ಲೆ ಮೀರದ ಚಿತ್ರಗಳು.

ಕೆಲವರ ಆಕ್ಷೇಪಕ್ಕೂ ಗುರಿಯಾಗಿದ್ದಾರೆ

ಆದರೆ ಬಾಲಿವುಡ್ ವಲಯದಲ್ಲಿ ಈ ಇಬ್ಬರು ಹಾಟ್ ಬೆಡಗಿಯರನ್ನು ಪ್ರಚಾರಕ್ಕಾಗಿ ಬಳಸಿಕೊಂಡಿರುವುದು ಕೆಲವರ ಆಕ್ಷೇಪಕ್ಕೂ ಗುರಿಯಾಗಿದೆ. ಇದೊಂದು ಕೆಳದರ್ಜೆಯ ಪ್ರಚಾರ ಎಂಬ ಮಾತುಗಳು ಕೇಳಿಬಂದಿವೆ.

ವಿಚ್ಛೇದಿತ ಮಹಿಳೆಯೊಬ್ಬಳ ಸುತ್ತ ಸುತ್ತುವ ಕಥೆ

ಆದರೆ ಚಿತ್ರದ ನಿರ್ಮಾಪಕರು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ಈ ಚಿತ್ರವನ್ನು Viacom 18 Motion Pictures ಸಂಸ್ಥೆ ನಿರ್ಮಿಸಿದೆ. ಅರುವತ್ತೇಳರ ಹರೆಯದ ವಿಚ್ಛೇದಿತ ಮಹಿಳೆಯೊಬ್ಬಳ ಸುತ್ತ ಸುತ್ತುವ ಕಥೆಯನ್ನು ವಾಟ್ ದಿ ಫಿಶ್ ಚಿತ್ರ ಒಳಗೊಂಡಿದೆ.

ಸಚಿನ್ ಹಚ್ಚೆಯನ್ನು ಹಾಕಿಸಿಕೊಂಡಿದ್ದ ಪೂನಂ

ತೀರಾ ಇತ್ತೀಚೆಗೆ ಈ ಬೆಡಗಿ ಸಚಿನ್ ಹಚ್ಚೆಯನ್ನು ತನ್ನ ಕೋಮಲವಾದ ತೋಳಿನ ಮೇಲೆ ಹಾಕಿಸಿಕೊಂಡಿದ್ದಾರೆ. ತನ್ನ ಬಲಗೈ ತೋಳಿನ ಮೇಲೆ ಸಚಿನ್ ಟ್ಯಾಟೂ ಹಾಕಿಸಿಕೊಂಡು ತಾನೂ ಸಚಿನ್ ಆರಾಧಕಳೆಂದು ಜಗತ್ತಿಗೆ ಹೇಳಿಕೊಂಡಿದ್ದಾರೆ.

'ಲವ್ ಈಸ್ ಪಾಯಿಸನ್' ಚಿತ್ರದಲ್ಲೂ ಐಟಂ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸಚಿನ್ 200ನೇ ಟೆಸ್ಟ್ ಮ್ಯಾಚ್ ಗೂ ಪೂನಂ ಹಾಜರಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇತ್ತೀಚೆಗೆ ಪೂನಂ ಪಾಂಡೆ ಕನ್ನಡದ 'ಲವ್ ಈಸ್ ಪಾಯಿಸನ್' ಚಿತ್ರದಲ್ಲೂ ತಮ್ಮ ಮೈಮಾಟ ಮೆರೆದಿದ್ದಾರೆ. ಆದರೆ ಆ ಚಿತ್ರದ ನಾಯಕ ನಟ 'ಹಳ್ಳಿಹೈದ' ರಾಜೇಶ್ ದುರಂತ ಸಾವಪ್ಪಿದ್ದನ್ನು ಚಿತ್ರರಂಗ ಇನ್ನೂ ಮರೆತಿಲ್ಲ.

ಸ್ಪೆಷಲ್ ಸಾಂಗ್ ಗೆ ರು.60 ಲಕ್ಷ ಕೊಡಲಾಗಿದೆ

ಮಾದಕ ಚೆಲುವೆ ಪೂನಂ ಪಾಂಡೆ ಕುಣಿದ ಲವ್ ಈಸ್ ಪಾಯಿಸನ್ ಸ್ಪೆಷಲ್ ಸಾಂಗ್ ಗೆ ರು.60 ಲಕ್ಷ ಕೊಡಲಾಗಿದೆ. ಸುತ್ತಮುತ್ತ ಗನ್ ಮ್ಯಾನ್ ಗಳು, ಬೌನ್ಸರ್ ಗಳನ್ನ ಹೊಂದಿರೋ ಪೂನಂ ಬೆಂಗಳೂರಿಗೆ ಬಂದು ಒಂದು ಹಾಡಿಗೆ ಮೈ ಬಳುಕಿಸಲು ಪಡೆದ ಹಣ ಇಷ್ಟು.

ಸಿನಿಪ್ರೇಮಿಗಳ ನಿದ್ದೆಗೆಡಿಸಿರುವ ಪೂನಂ

ರು.60 ಲಕ್ಷ ಕೊಡ್ಬೇಕು ಅಂದ್ರೆ ಪೂನಂ ಇನ್ನೂ ಅದೇನೇನು ತೋರಿಸೋದು ಇದ್ಯೋ ಅನ್ನೋ ಕುತೂಹಲ ಪಡ್ಡೆ ಸಿನಿಪ್ರೇಮಿಗಳಿಗೆ ಶುರುವಾಗಿದೆ. ಬಾಲಿವುಡ್ ನ ಸೆಕ್ಸ್ ಬಾಂಬ್ ಪೂನಂ ಪಾಂಡೆ ಅಭಿನಯದ ಮೊದಲ ಸಿನಿಮಾ 'ನಶಾ' ಮೊದಲ ಅವಕಾಶಕ್ಕಾಗಿ ಕಾದಿದ್ದ ಪೂನಂ ಅಲ್ಲೂ ಇಷ್ಟು ಹಣ ಎಣಿಸಿದ್ದಳೋ ಇಲ್ಲವೋ ಗೊತ್ತಿಲ್ಲ.

ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಕುಣಿತ

ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಹಾಕಿದ್ದ ಸೆಟ್ ನಲ್ಲಿ ಪೂನಂ ತಮ್ಮ ಸೊಂಟ ಬಳುಕಿಸಿ ಹೋಗಿದ್ದಾರೆ. ವೀಣಾ ಮಲಿಕ್ ಹೋದ ಬೆನ್ನಲ್ಲೇ ಪೂನಂ ಎಂಟ್ರಿಕೊಟ್ಟಿದ್ದು ವಿಶೇಷ.

ಸ್ಪೆಷಲ್ ಸಾಂಗ್ ನಲ್ಲಿ ಏನುಂಟೋ ಏನೋ!

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಪೂನಂ ಪಾಂಡೆ ಪಡ್ಡೆಗಳಿಗೆ ಬೇಜಾನ್ ಕಿಕ್ ಕೊಟ್ಟಿದ್ದಾರೆ. ಇನ್ನು ಐಟಂ ಸಾಂಗ್ ಎಂದರೆ ಕೇಳಬೇಕೆ. ಇನ್ಯಾವ ರೀತಿ ಇರುತ್ತದೆ ಎಂಬುದನ್ನು ಪಡ್ಡೆಗಳ ಊಹೆಗೆ ಬಿಟ್ಟಿದ್ದಾರೆ ಪೂನಂ.

English summary
Veteran actress Dimple Kapadia reportedly chose to skip the promotional event of her upcoming film What The Fish as news about hotties Poonam Pandey and Rakhi Sawant promoting the film in sleazy outfits began doing the rounds!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada