For Quick Alerts
  ALLOW NOTIFICATIONS  
  For Daily Alerts

  ತುಂಬು ಗರ್ಭಿಣಿ ಕರೀನಾ ಕಪೂರ್ ಯೋಗ ಮಾಡುತ್ತಿರುವ ಫೋಟೋ ವೈರಲ್

  |

  ಬಾಲಿವುಡ್ ನಟಿ ಕರೀನಾ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯದಲ್ಲೇ ಮಗುವಿಗೆ ಜನ್ಮ ನೀಡಲಿರುವ ಕರೀನಾ ಸದ್ಯ ಯೋಗ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇತ್ತೀಚಿಗೆ ನಟಿ ಅನುಷ್ಕಾ ಶರ್ಮಾ ಯೋಗ ಫೋಟೋಗಳು ವೈರಲ್ ಆಗಿತ್ತು. ಇದೀಗ ಗರ್ಭಿಣಿ ಕರೀನಾ ಕಪೂರ್ ಸಹ ಯೋಗ ಮಾಡುತ್ತಿದ್ದಾರೆ.

  ಕರೀನಾ ಕಪೂರ್ ಯೋಗ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿ, ಸ್ವಲ್ಪ ಯೋಗ ಸ್ವಲ್ಪ ಶಾಂತಿ ಎಂದು ಕ್ಯಾಪ್ಷನ್ ನೀಡಿದ್ದಾರೆ.

  ಅರಮನೆಯನ್ನೇ ಹೊಂದಿರುವ ಸೈಫ್, ಮನೆ ಬದಲಾಯಿಸುತ್ತಿದ್ದಾರೆ!

  ಕರೀನಾ ವಿವಿಧ ಭಂಗಿಯ ಯೋಗಗಳನ್ನು ಮಾಡುತ್ತಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಕರೀನಾ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚಿಗಷ್ಟೆ ನಟಿ ಕರೀನಾ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದರು. ಜಾಹೀರಾತು ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಕರೀನಾ 'ನಾವು ಇಬ್ಬರು ಶೂಟಿಂಗ್ ನಲ್ಲಿ ಇದ್ದೀವಿ' ಎಂದು ಹೇಳಿಕೊಂಡಿದ್ದರು.

  ಇನ್ನು ಕರೀನಾ ಮತ್ತು ಸೈಫ್ ಅಲಿ ಖಾನ್ ದಂಪತಿಗೆ ಈಗಾಗಲೇ 4 ವರ್ಷದ ಒಬ್ಬ ಮಗನಿದ್ದಾನೆ. ತೈಮೂರ್ ಅಲಿ ಖಾನ್ ಎಂದು ನಾಮಕರಣ ಮಾಡಿದ್ದಾರೆ. ಕರೀನಾ ಈ ಸಮಯದಲ್ಲಿ ಸಿನಿಮಾ ಚಿತ್ರೀಕರಣ, ಜಾಹೀರಾತು ಚಿತ್ರೀಕರಣ, ಚಾಟ್ ಶೋ ಹೀಗೆ ಒಂದಲ್ಲೊಂದು ಕೆಲಸದಲ್ಲಿ ತೊೆಡಗಿಕೊಂಡಿದ್ದಾರೆ.

  ಗರ್ಭಿಣಿ ಕರೀನಾ ಲಾಕ್ ಡೌನ್ ಬಳಿಕ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಕರೀನಾ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

  ಸ್ನೇಹಿತರ ಮಾತು ಕೇಳದೆ ಇದ್ದಿದ್ರೆ ಜಯಶ್ರೀ ಬದುಕಿರ್ತಾ ಇದ್ರು | Oneindia Kannada
  English summary
  Pregnant Kareena Kapoor Shows her baby bump while performing Yoga photo goes viral on social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X