»   » ಪ್ರೀತಿ ಜಿಂಟಾಗೆ ಲೈಂಗಿಕ ಕಿರುಕುಳ: 4 ವರ್ಷಗಳಾದ್ಮೇಲೆ ಮಾಜಿ ಬಾಯ್ ಫ್ರೆಂಡ್ ಮೇಲೆ ಚಾರ್ಜ್ ಶೀಟ್.!

ಪ್ರೀತಿ ಜಿಂಟಾಗೆ ಲೈಂಗಿಕ ಕಿರುಕುಳ: 4 ವರ್ಷಗಳಾದ್ಮೇಲೆ ಮಾಜಿ ಬಾಯ್ ಫ್ರೆಂಡ್ ಮೇಲೆ ಚಾರ್ಜ್ ಶೀಟ್.!

Posted By:
Subscribe to Filmibeat Kannada

ಒಂದ್ಕಾಲದಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ಹಾಗೂ ಉದ್ಯಮಿ ನೆಸ್ ವಾಡಿಯಾ ಪ್ರೇಮಿಗಳು. ನಾಲ್ಕು ವರ್ಷಗಳ ಕಾಲ ಪ್ರೇಮಿಗಳಾಗಿದ್ದ ಪ್ರೀತಿ ಜಿಂಟಾ ಹಾಗೂ ನೆಸ್ ವಾಡಿಯಾ 2009 ರಲ್ಲಿ ಬ್ರೇಕಪ್ ಮಾಡಿಕೊಂಡರು. ಆದ್ರೆ, ಅದಾಗಲೇ ಐ.ಪಿ.ಎಲ್ ನ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿ ಇಬ್ಬರದ್ದೂ ಪಾಲುದಾರಿಕೆ ಇದ್ದ ಕಾರಣ ವ್ಯವಹಾರವನ್ನು ಮಾತ್ರ ಮುಂದುವರೆಸಿದರು.

ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗಲೇ, ಮೇ 30, 2014 ರಲ್ಲಿ ನಡೆಯಬಾರದ ಘಟನೆಯೊಂದು ನಡೆದೇ ಹೋಯಿತು. ಅಂದು ವಾಂಖೆಡೆ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯುತ್ತಿದ್ದಾಗ, ನೆಸ್ ವಾಡಿಯಾ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮೆರೈನ್ ಡ್ರೈವ್ ಪೊಲೀಸರಿಗೆ ಪ್ರೀತಿ ಜಿಂಟಾ ದೂರು ನೀಡಿದರು.

ಅಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡ ಮುಂಬೈ ಪೊಲೀಸರು ಇದೀಗ.. ಅಂದ್ರೆ ನಾಲ್ಕು ವರ್ಷಗಳ ಬಳಿಕ ಉದ್ಯಮಿ ನೆಸ್ ವಾಡಿಯಾ ವಿರುದ್ಧ ಚಾರ್ಜ್ ಶೀಟ್ ಫೈಲ್ ಮಾಡಿದ್ದಾರೆ. ಮುಂದೆ ಓದಿರಿ...

ಪ್ರೀತಿ ಜಿಂಟಾ ಮಾಜಿ ಬಾಯ್ ಫ್ರೆಂಡ್ ವಿರುದ್ಧ ಚಾರ್ಜ್ ಶೀಟ್.!

ಐ.ಪಿ.ಸಿ ಸೆಕ್ಷನ್ 354, 506, 509 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪ್ರೀತಿ ಜಿಂಟಾ ಮಾಜಿ ಪ್ರಿಯಕರ ನೆಸ್ ವಾಡಿಯಾ ವಿರುದ್ಧ ಸದ್ಯ ಮುಂಬೈ ಪೊಲೀಸರು ಚಾರ್ಜ್ ಶೀಟ್ ಫೈಲ್ ಮಾಡಿದ್ದಾರೆ.

ಲೈಂಗಿಕ ಕಿರುಕುಳ ದೂರು ದಾಖಲಿಸಿದ ಪ್ರೀತಿ ಜಿಂಟಾ

ಅಷ್ಟಕ್ಕೂ, ಇಬ್ಬರ ಮಧ್ಯೆ ನಡೆದದ್ದು ಏನು.?

ಐ.ಪಿ.ಎಲ್ ನ 'ಕಿಂಗ್ ಇಲೆವನ್ ಪಂಜಾಬ್' ತಂಡಕ್ಕೆ ಪ್ರೀತಿ ಜಿಂಟಾ ಹಾಗೂ ನೆಸ್ ವಾಡಿಯಾ ಸಹ ಮಾಲೀಕರು. ಮೇ 30 ರಂದು ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದ ವೀಕ್ಷಣೆಗಾಗಿ ಪ್ರೀತಿ ಜಿಂಟಾ ಹಾಗೂ ನೆಸ್ ವಾಡಿಯಾಗೆ ತಲಾ 15 ಸೀಟ್ ಗಳನ್ನ ಮೀಸಲಿಡಲಾಗಿತ್ತು. ಅಂದು ನೆಸ್ ವಾಡಿಯಾ ಹುಟ್ಟುಹಬ್ಬ ಬೇರೆ. ಜನ್ಮದಿನವನ್ನ ವಾಂಖೆಡೆ ಸ್ಟೇಡಿಯಂನಲ್ಲೇ ಸೆಲೆಬ್ರೇಟ್ ಮಾಡಲು ಕುಟುಂಬಸ್ಥರು ಹಾಗೂ ಸ್ನೇಹಿತರಿಗಾಗಿ 35 ಎಕ್ಸ್ ಟ್ರಾ ಟಿಕೆಟ್ ಗಳನ್ನ ನೆಸ್ ವಾಡಿಯಾ ಖರೀದಿಸಿದ್ದರು.

ಕಿತ್ತಾಟ ಶುರು ಆಗಿದ್ದು ಎಲ್ಲಿಂದ.?

ಪ್ರೀತಿ ಜಿಂಟಾ ಹಾಗೂ ಆಕೆಯ ಸ್ನೇಹಿತರು ಮುಂದಿನ ಸಾಲಿನ ಆಸನಗಳಲ್ಲಿ ಆಸೀನರಾಗಿದ್ದರು. ಆಗ, ಮುಂದಿನ ಸಾಲಿನ ಆಸನಗಳನ್ನು ಬಿಟ್ಟುಕೊಡುವಂತೆ ಕಿಂಗ್ಸ್ ಇಲೆವನ್ ಸಿ.ಓ.ಓ ಹಾಗೂ ಪ್ರೀತಿ ಜಿಂಟಾ ಬಳಿ ಮನವಿ ಮಾಡಿದ್ದೆ. ಆದ್ರೆ, ಅದಕ್ಕೆ ಪ್ರೀತಿ ಜಿಂಟಾ ಒಪ್ಪಿಕೊಳ್ಳಲಿಲ್ಲ. ಇದರಿಂದ ಕಿತ್ತಾಟ ಆರಂಭ ಆಯಿತು ಎಂದು ಪೊಲೀಸರ ಮುಂದೆ ನೆಸ್ ವಾಡಿಯಾ ಹೇಳಿಕೆ ನೀಡಿದ್ದರು. ಮಾತಿಗೆ ಮಾತು ಬೆಳೆದಿದ್ದು ನಿಜ. ಆದ್ರೆ ಲೈಂಗಿಕ ಕಿರುಕುಳ ನೀಡಿಲ್ಲ, ಅಸಭ್ಯವಾಗಿ ವರ್ತಿಸಿಲ್ಲ ಎಂಬುದು ನೆಸ್ ವಾಡಿಯಾ ವಾದವಾಗಿತ್ತು.

ಪ್ರೀತಿ ಜಿಂಟಾ ಹೇಳುವುದೇನು.?

''ಟಿಕೆಟ್ ಹಂಚಿಕೆ ಕುರಿತಾಗಿ ತಂಡದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನೆಸ್ ವಾಡಿಯಾ ನಿಂದಿಸುತ್ತಿದ್ದರು. ಆಗ ತಾಳ್ಮೆ ಕಳೆದುಕೊಳ್ಳದಂತೆ ಹೇಳಿದಾಗ, ಅನೇಕ ಜನರ ಮುಂದೆಯೇ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಪ್ರೇಕ್ಷಕರ ಮುಂದೆಯೇ ನೆಸ್ ವಾಡಿಯಾ ನನ್ನ ಕೈ ಹಿಡಿದು ಎಳೆದಿದ್ದಲ್ಲದೇ, ಕೆಟ್ಟ ಶಬ್ದಗಳನ್ನು ಬಳಸಿ ನಿಂದಿಸಿದರು. ಬೆದರಿಕೆಯನ್ನೂ ಹಾಕಿದರು'' ಎಂದು ತಮ್ಮ ದೂರಿನಲ್ಲಿ ಪ್ರೀತಿ ಜಿಂಟಾ ತಿಳಿಸಿದ್ದರು.

ಹಲವರ ಹೇಳಿಕೆ ದಾಖಲಾಗಿದೆ.!

ಪ್ರಕರಣದ ಸಂಬಂಧ ಪ್ರೀತಿ ಜಿಂಟಾ ಪತಿ ಜೆನೆ ಗುಡೆನಫ್, ಕ್ರಿಕೆಟರ್ ಡೇವಿಡ್ ಮಿಲ್ಲರ್ ತಂದೆ ಆಂಡ್ರ್ಯೂ ಮಿಲ್ಲರ್ ಸೇರಿದಂತೆ ಹಲವರ ಹೇಳಿಕೆಯನ್ನ ದಾಖಲಿಸಿಕೊಂಡು ಮುಂಬೈ ಪೊಲೀಸರು ಚಾರ್ಜ್ ಶೀಟ್ ಫೈಲ್ ಮಾಡಿದ್ದಾರೆ.

ಪ್ರೇಮಿಗಳಾಗಿದ್ದವರು.!

''ನಾನು ಹಾಗೂ ನೆಸ್ ವಾಡಿಯಾ ಪರಸ್ಪರ ಪ್ರೀತಿಸುತ್ತಿದ್ದೇವೆ'' ಎಂದು 2005 ರಲ್ಲಿ ಪ್ರೀತಿ ಜಿಂಟಾ ಘೋಷಿಸಿದರು. ಎಲ್ಲೇ ಹೋದರೂ ಕೈಕೈ ಹಿಡಿದುಕೊಂಡು ಓಡಾಡುತ್ತಿದ್ದ ಪ್ರೀತಿ ಜಿಂಟಾ ಹಾಗೂ ನೆಸ್ ವಾಡಿಯಾ ಐ.ಪಿ.ಎಲ್ ಗಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನೂ ಖರೀದಿಸಿದರು. ಇಬ್ಬರು ಇನ್ನೇನು ಮದುವೆ ಆಗುತ್ತಾರೆ, ನಿಶ್ಚಿತಾರ್ಥ ಸದ್ಯದಲ್ಲೇ ನಡೆಯಲಿದೆ ಎಂಬ ಗುಸು ಗುಸು ಆರಂಭವಾಗುತ್ತಿದ್ದಂತೆ 2009 ರಲ್ಲಿ ಬ್ರೇಕಪ್ ಆಗ್ಹೋಯ್ತು. ಪ್ರೀತಿಸುತ್ತಿದ್ದವರು ಇದ್ದಕ್ಕಿದ್ದಂತೆ ಯಾಕೆ ಬ್ರೇಕಪ್ ಮಾಡಿಕೊಂಡರು ಎಂಬ ಸತ್ಯ ಇಲ್ಲಿಯವರೆಗೂ ಬಯಲಾಗಿಲ್ಲ. ಆದ್ರೆ, ಬ್ರೇಕಪ್ ಆದ್ಮೇಲೂ ಕಿಂಗ್ಸ್ ಇಲೆವನ್ ಪಂಜಾಬ್ ಪಾಲುದಾರಿಕೆಯನ್ನ ಮುಂದುವರೆಸಿದರು.

ಅಮೇರಿಕನ್ ಬಾಯ್ ಫ್ರೆಂಡ್ ಜೊತೆ ಮದುವೆಯಾದ ಪ್ರೀತಿ

ಫೆಬ್ರವರಿ 29, 2016 ರಂದು ಲಾಸ್ ಏಂಜಲಿಸ್ ನಲ್ಲಿ ತಮ್ಮ ಅಮೇರಿಕನ್ ಬಾಯ್ ಫ್ರೆಂಡ್ ಜೆನೆ ಗುಡೆನಫ್ ನ ಪ್ರೀತಿ ಜಿಂಟಾ ಮದುವೆ ಆದರು.

English summary
Preity Zinta molestation case: After 4 long years, Chargesheet is filed against EX Boyfriend Ness Wadia under IPC section 354, 506, 509.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada