ಕೊನೆಗೂ ಪ್ರಧಾನಿ ಮೋದಿ ಬಯೋಪಿಕ್ ರಿಲೀಸ್ ಗೆ ದಿನಾಂಕ ಫಿಕ್ಸ್ ಆಯ್ತು
ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ಪಿ ಎಂ ನರೇಂದ್ರ ಮೋದಿ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಲೆ ಇತ್ತು. ಇವತ್ತು ತೆರೆಗೆ ಬರುತ್ತೆ ನಾಳೆ ತೆರೆಗೆ ಬರುತ್ತೆ ಅಂತ ಕಾಯುತ್ತಿದ್ದ ವೋದಿ ಭಕ್ತರಿಗೆ ಶಾಕ್ ನೀಡಿತ್ತು ಚುನಾವಣಾ ಆಯೋಗ. ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನಲೆ ಚಿತ್ರ ರಿಲೀಸ್ ಗೆ ಬ್ರೇಕ್ ಹಾಕಲಾಗಿತ್ತು.
ಆದ್ರೀಗ ಬಹು ನಿರೀಕ್ಷೆಯ ಮೋದಿ ಬಯೋಪಿಕ್ ರಿಲೀಸ್ ಗೆ ಕಾಲ ಕೂಡಿ ಬಂದಿದೆ. ಬಾಲಿವುಡ್ ನಟ ವಿವೇಕ್ ಓಬೆರಾಯ್ ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಮೋದಿ ಸಿನಿಮಾ ಲೋಕಸಭಾ ಚುನಾವಣಾ ಫಲಿತಾಂಶ ಬಂದ ನಂತರ ತೆರೆಗೆ ಬರುತ್ತಿದೆ.
ಹೌದು, ಇಡೀ ದೇಶವೆ ಕಾತುರದಿಂದ ಕಾಯುತ್ತಿರುವ ಲೋಕ ಸಭಾ ಚುನಾವಣೆಯ ಫಲಿತಾಂಶ ಮೇ 23ಕ್ಕೆ ಹೊರಬೀಳಲಿದೆ. ಅದರ ಮರುದಿನವೆ ಮೇ 24ಕ್ಕೆ ಮೋದಿ ಬಯೋಪಿಕ್ ತೆರೆಗೆ ಬರುತ್ತಿದೆ. ಈ ಬಗ್ಗೆ ಚಿತ್ರತಂಡವೆ ಅಧಿಕೃತವಾಗಿ ಹೇಳಿದೆ.

ಈ ಮೊದಲು ಏಪ್ರಿಲ್ 5ಕ್ಕೆ ತೆರೆಗೆ ಬರಲು ಸಿದ್ಧವಾಗಿತ್ತು. ಆ ನಂತರ ಏಪ್ರಿಲ್ 12ಕ್ಕೆ ರಿಲೀಸ್ ಆಗುತ್ತೆ ಎಂದು ಹೇಳಲಾಗಿತ್ತು ಆದ್ರೆ ಚುನಾವಣಾ ಆಯೋಗ ರಿಲೀಸ್ ಗೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದರು ಆದ್ರೂ ಸಿನಿಮಾ ರಿಲೀಸ್ ಆಗಿರಲಿಲ್ಲ. ಆದ್ರೀಗ ಮೋದಿ ಬಯೋಪಿಕ್ ಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಚಿತ್ರವನ್ನು ಬಾಲಿವುಡ್ ನಿರ್ದೇಶಕ ಓಮಂಗ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











