For Quick Alerts
  ALLOW NOTIFICATIONS  
  For Daily Alerts

  'ಲವ್ ಹ್ಯಾಕರ್ಸ್' ಜೊತೆ ಸೇರಿದ ಕಣ್ ಸನ್ನೆಯ ಪ್ರಿಯಾ ವಾರಿಯರ್!

  |

  ಪ್ರಿಯಾ ಪ್ರಕಾಶ್ ವಾರಿಯರ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕಣ್ ಹೊಡೆದು ಯುವಕರರನ್ನ ಕ್ಲೀನ್ ಬೋಲ್ಡ್ ಮಾಡಿದ್ದ ಪ್ರಿಯಾ ರಾತ್ರಿ ಬೆಳಗಾಗುವುದರಲ್ಲೆ ವರ್ಲ್ಡ್ ಸ್ಟಾರ್ ಆಗಿ ಮಿಂಚಿದ್ರು. 'ಒರು ಆಡಾರ್ ಲವ್' ಚಿತ್ರದ ಆ ಒಂದು ಪುಟ್ಟ ದೃಶ್ಯ ಪ್ರಿಯಾ ಪ್ರಕಾಶ್ ವಾರಿಯರ್ ಸಿನಿ ಜೀವನವನ್ನೆ ಬದಲಾಯಿಸಿಯಿತ್ತು.

  ಕಣ್ಣು ಮಿಟುಕಿಸಿ ಸಂಚಲ ಮೂಡಿಸಿ ಆನಂತರ ಮಿಂಚಿನಂತೆ ಮಾಯವಾಗಿದ್ದ ಪ್ರಿಯಾ ಈಗ ಏನ್ಮಾಡುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಆದ್ರೆ ಪ್ರಿಯಾ ಈಗ 'ಲವ್ ಹ್ಯಾಕರ್ಸ್' ಜೊತೆ ಸೇರಿಕೊಂಡು ಸೈಬರ್ ಕ್ರೈಮ್ ನಲ್ಲಿ ಭಾಗಿಯಾಗಿದ್ದಾರೆ. ಅಂದ್ರೆ ಅಚ್ಚರಿ ಪಡಬೇಡಿ 'ಲವ್ ಹ್ಯಾಕರ್ಸ್' ಎನ್ನುವ ಸಿನಿಮದಲ್ಲಿ ಪ್ರಿಯಾ ಅಭಿನಯಿಸುತ್ತಿದ್ದಾರೆ. ಇದು ಪ್ರಿಯಾ ಅಭಿನಯದ ಎರಡನೇ ಬಾಲಿವುಡ್ ಸಿನಿಮಾ.

  ಅಂದ್ಹಾಗೆ 'ಲವ್ ಹ್ಯಾಕರ್ಸ್' ಹೆಸರೆ ಹೇಳುವ ಹಾಗೆ ಸೈಬರ್ ಬಗ್ಗೆ ಇರುವ ಸಿನಿಮಾ. ಕ್ರೈಮ್ ಥ್ರಿಲ್ಲಿಂಗ್ ಚಿತ್ರ ಇದಾಗಿದ್ದು ಈ ಚಿತ್ರದಲ್ಲಿ ಪ್ರಿಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಆನ್ ಲೈನ್ ಹ್ಯಾಕಿಂಗ್ ಗೆ ಸಂಬಂಧಿಸಿದ ಕತೆ ಇದಾಗಿದ್ದು ಕೆಲವು ನೈಜ ಘಟನೆಗಳನ್ನು ಸ್ಫೂರ್ತಿಯಾಗಿರಿಸಿಕೊಂಡು ಮಾಡಿದ ಸಿನಿಮಾ ಇದಾಗಿದೆಯಂತೆ.

  ಸೈಬರ್ ಸುಳಿಯಲ್ಲಿ ಸಿಲುಕಿಕೊಳ್ಳುವ ಯುವತಿ ಅದರಿಂದ ಹೇಗೆ ಆಚೆಗೆ ಬರುತ್ತಾಳೆ ಎನ್ನುವುದು ಚಿತ್ರದ ತಿರುಳು. ಚಿತ್ರಕ್ಕೆ ಮಯಾಂಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಲವ್ ಹ್ಯಾಕರ್ಸ್' ಪ್ರಿಯಾ ಅಭಿನಯದ ಎರಡನೇ ಬಾಲಿವುಡ್ ಸಿನಿಮಾ. ಈ ಮೊದಲು 'ಶ್ರೀದೇವಿ ಬಂಗ್ಲೋ' ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಪ್ರಿಯಾ ಮೊದಲ ಸಿನಿಮಾ ಬಿಡುಗಡೆಗೂ ಮೊದಲೆ ಎರಡನೆ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Malayalam actress Priya Prakash Varrier sings second Bollywood movie title 'Love Hackers'. It is a crime thriller movie directed by Mayank.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X