»   » ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ ಹಬ್ಬಿರುವ ಹೊಸ ಸುದ್ದಿ ನಿಜವೇ.?

ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ ಹಬ್ಬಿರುವ ಹೊಸ ಸುದ್ದಿ ನಿಜವೇ.?

Posted By:
Subscribe to Filmibeat Kannada

ಒಂದೇ ಒಂದು ವಿಡಿಯೋ ಮೂಲಕ ರಾಷ್ಟ್ರಾದ್ಯಂತ ಸದ್ದು-ಸುದ್ದಿ ಮಾಡಿದ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್. ಕಣ್ಣು ಮಿಟುಕಿಸುವುದರೊಳಗೆ ನ್ಯಾಷನಲ್ ಕ್ರಶ್ ಆದವರು ಮಲೆಯಾಳಿ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್.

ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ಚೊಚ್ಚಲ ಸಿನಿಮಾ 'ಒರು ಅಡಾರ್ ಲವ್' ಇನ್ನೂ ತೆರೆಗೆ ಬಂದಿಲ್ಲ. ಅಷ್ಟು ಬೇಗ ಈ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಹೊಸ ಸಂಚಲನ ಹುಟ್ಟು ಹಾಕಲು ಕಾರಣ ಪ್ರಿಯಾ ಕಣ್ಣೋಟ.

ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಗಟ್ಟಲೆ ಫಾಲೋವರ್ಸ್ ಹೊಂದಿರುವ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಸ್ಯಾಂಡಲ್ ವುಡ್ ನಿಂದಲೂ ಪ್ರಿಯಾಗೆ ಕರೆ ಹೋಗಿತ್ತು. ಇದೀಗ ಕೇಳಿಬರುತ್ತಿರುವ ಸುದ್ದಿ ನಿಜವೇ ಆಗಿದ್ದರೆ, ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಬಾಲಿವುಡ್ ನಲ್ಲಿ ಪದಾರ್ಪಣೆ ಮಾಡುವುದು ಖಚಿತ. ಮುಂದೆ ಓದಿರಿ....

ಬಾಲಿವುಡ್ ನಲ್ಲಿ ಕೇಳಿಬರುತ್ತಿರುವ ಹೊಸ ಗುಲ್ಲು

ಶೀಘ್ರದಲ್ಲೇ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ. ಬಾಲಿವುಡ್ ಹೀರೋ ರಣ್ವೀರ್ ಸಿಂಗ್ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಲಿದ್ದಾರೆ ಅಂತ ಬಾಲಿವುಡ್ ಅಂಗಳಲ್ಲಿ ಗುಲ್ಲೋ ಗುಲ್ಲು.

ಕಣ್ಣಲ್ಲೇ ಕೊಲ್ಲುತ್ತಿರುವ ಈ ಹುಡುಗಿ ಬಗ್ಗೆ ಎಲ್ಲಿಯೂ ರಿವೀಲ್ ಆಗದ ಸಂಗತಿಗಳು!

ಯಾವ ಸಿನಿಮಾದಲ್ಲಿ.?

ರಣ್ವೀರ್ ಸಿಂಗ್ ಅಭಿನಯಿಸಲು ಒಪ್ಪಿಕೊಂಡಿರುವ 'ಸಿಂಬಾ' ಚಿತ್ರದಲ್ಲಿ ನಟಿಸಲು ಪ್ರಿಯಾ ಪ್ರಕಾಶ್ ವಾರಿಯರ್ ಗೆ ಬುಲಾವ್ ಬಂದಿದ್ಯಂತೆ. ರೋಹಿತ್ ಶೆಟ್ಟಿ ನಿರ್ದೇಶನದ ಕರಣ್ ಜೋಹರ್ ನಿರ್ಮಾಣದ 'ಸಿಂಬಾ'ದಲ್ಲಿ ಆಕ್ಟ್ ಮಾಡುವ ಚಾನ್ಸ್ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಸಿಕ್ಕಿದ್ಯಂತೆ.

ಸಾಮಾಜಿಕ ಜಾಲತಾಣದ ಕ್ವೀನ್ ಪ್ರಿಯಾ ಕನ್ನಡ ಸಿನಿಮಾ ಮಾಡ್ತಾರಂತೆ!

ಹೀರೋಯಿನ್ ಆಗಿ ಅಲ್ಲ.!

'ಸಿಂಬಾ' ಸಿನಿಮಾದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ನಾಯಕಿಯ ಪಾತ್ರ ಆಫರ್ ಮಾಡಿಲ್ಲ. ಬದಲಾಗಿ ಒಂದು ಸಣ್ಣ ಪಾತ್ರಕ್ಕೆ ಮಾತ್ರ ಬಣ್ಣ ಹಚ್ಚುವಂತೆ ಚಿತ್ರತಂಡ ಕೇಳಿಕೊಂಡಿದೆ ಎಂಬ ಗಾಸಿಪ್ ಬಿಟೌನ್ ಗಲ್ಲಿಗಳಲ್ಲಿ ಗಿರಕಿ ಹೊಡೆಯುತ್ತಿವೆ.

ಇದು ನಿಜವೇ.?

ಬಾಲಿವುಡ್ ನಿಂದ ಕರೆ ಬಂದಿರುವ ಬಗ್ಗೆ ಪ್ರಿಯಾ ಪ್ರಕಾಶ್ ವಾರಿಯರ್ ತುಟಿ ಎರಡು ಮಾಡಿಲ್ಲ. ಇನ್ನೂ, 'ಸಿಂಬಾ' ಸಿನಿಮಾದಲ್ಲಿ ಪ್ರಿಯಾ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಕೂಡ ಅನೌನ್ಸ್ ಮಾಡಿಲ್ಲ. ಆದರೂ, ಸೋಷಿಯಲ್ ಮೀಡಿಯಾದಲ್ಲಿ ಈ ಗುಸು ಗುಸು ಕೇಳಿಬರುತ್ತಿದೆ.

English summary
According to the Grapevine, National Crush Priya Prakash Varrier to make Bollywood Debut with Ranveer Singh starrer 'Simmba'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada