For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ಹಾಟ್ ವಿಡಿಯೋ ಭರ್ಜರಿ ಕ್ಲಿಕ್

  By ರವಿಕಿಶೋರ್
  |

  ನಟಿ ಪ್ರಿಯಾಂಕಾ ಚೋಪ್ರಾ ಹಾಟ್ ವಿಡಿಯೋ ಆಲ್ಬಂ ಯೂಟ್ಯೂಬ್ ನಲ್ಲಿ ಭರ್ಜರಿ ಕ್ಲಿಕ್ ಆಗಿದೆ. ಇದುವರೆಗೂ ಈ ವಿಡಿಯೋಗೆ 30 ದಶಲಕ್ಷ ಕ್ಲಿಕ್ಸ್ ಸಿಕ್ಕಿವೆ. ಪ್ರಿಯಾಂಕಾ ಅಭಿನಯದ 'Exotic' ಎಂಬ ಈ ಅಂತಾರಾಷ್ಟ್ರೀಯ ಆಲ್ಬಂನ್ನು ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದಾರೆ.

  ರ್‍ಯಾಪರ್ ಬಿಟ್ ಬುಲ್ ಸಹ ಈ ಹಾಡಿನಲ್ಲಿದ್ದು ಹಿಂದಿ ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲಿ ಈ ಹಾಡನ್ನು ಹೆಣೆಯಲಾಗಿದೆ. ಈ ಹಾಡನ್ನು ತನ್ನ ಅಭಿಮಾನಿಗಳು ಇಷ್ಟಪಟ್ಟು ವೀಕ್ಷಿಸಿರುವುದಕ್ಕೆ ಪ್ರಿಯಾಂಕಾ ಟ್ವೀಟಿಸಿದ್ದು, "ನಿಮ್ಮ ಬೆಂಬಲ ಹಾಗೂ ಪ್ರೀತಿಗೆ ಧನ್ಯವಾದಗಳು. 30 ದಶಲಕ್ಷ ಕ್ಲಿಕ್ಸ್ ಸಿಕ್ಕಿರುವುದಕ್ಕೆ ಭಾವಪರವಶಳಾಗಿದ್ದೇನೆ" ಎಂದಿದ್ದಾರೆ.

  ಭಾರತದ ಐ ಟ್ಯೂನ್ಸ್ ಪಟ್ಟಿಯಲ್ಲಿ ಈ ಹಾಡು ನಂಬರ್ ಒನ್ ಸ್ಥಾನದಲ್ಲಿದೆ. ಆದರೆ ಯುಎಸ್ ನಲ್ಲಿ ಈ ಹಾಡು ಅಷ್ಟೊಂದು ಜನಪ್ರಿಯತೆ ಗಳಿಸಿಲ್ಲ. ಕಳೆದ ದಶಕದಲ್ಲಿ ಜೆನ್ನಿಫರ್ ಲೋಪೆಜ್ ಅಂತಹವರಿಗೆ ಪಿಟ್ ಬುಲ್ ಟಾಪ್ ಮೂರು ಹಿಟ್ ಗಳನ್ನು ಕೊಟ್ಟಂತಹವರು. ಆದರೆ ಪ್ರಿಯಾಂಕಾ ವಿಚಾರದಲ್ಲಿ ಅದು ಸಾಧ್ಯವಾಗಿಲ್ಲ.

  ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಇನ್ನೂ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಬಹುಶಃ ಅವರು ಈಗಷ್ಟೇ ಇನ್ನೂ ಪಾಪ್ ಲೋಕದಲ್ಲಿ ಅಂಬೆಗಾಲಿಡುತ್ತಿದ್ದಾರೆ. ಹಾಗಾಗಿ ಸ್ವಲ್ಪ ಸಮಯ ಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

  ಪ್ರಿಯಾಂಕಾ ಅಭಿನಯದ ಬಾಲಿವುಡ್ ಚಿತ್ರ 'ಗುಂಡೆ' ಬಿಡುಗಡೆಗೆ ಸಿದ್ಧವಾಗಿದೆ. ಅರ್ಜುನ್ ಕಪೂರ್ ಹಾಗೂ ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಪ್ರಚಾರ ಕಾರ್ಯದಲ್ಲೂ ಪಿಗ್ಗಿ ಬಿಜಿಯಾಗಿದ್ದಾರೆ. ಅಲಿ ಅಬ್ಬಾಸ್ ಜಾಫರ್ ಆಕ್ಷನ್ ಕಟ್ ಹೇಳಿರುವ ಚಿತ್ರವಿದು.

  English summary
  Priyanka Chopra has received 30 million hits on YouTube for her international song 'Exotic'. Priyanka Chopra is on her way to the international chart with her song Exotic. The video track also features rapper Pitbull and contains both Hindi and English lyrics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X