For Quick Alerts
  ALLOW NOTIFICATIONS  
  For Daily Alerts

  ಕಳೆದ ವಾರವೇ ನಡೆಯಬೇಕಿದ್ದ ಪ್ರಿಯಾಂಕ ಅಣ್ಣನ ಮದುವೆ ನಿಂತು ಹೋಯ್ತಾ?

  |

  ಅಮೇರಿಕಾದ ಗಾಯಕ ನಿಕ್ ಜೋನಸ್ ಮದುವೆ ಆಗಿರುವ ನಟಿ ಪ್ರಿಯಾಂಕ ಚೋಪ್ರ ಅಮೇರಿಕಾದಲ್ಲೆ ನೆಲೆಸಿದ್ದಾರೆ. ಆದ್ರೆ ಇತ್ತಿಚಿಗೆ ಹೆಚ್ಚಾಗಿ ತನ್ನ ತವರೂರು ಮುಂಬೈಗೆ ಬರುತ್ತಿದ್ದರು. ಕಾರಣ ಪ್ರಿಯಾಂಕ ಅಣ್ಣನ ಮದುವೆ. ಅಣ್ಣನ ಮದುವೆ ಸಂಭ್ರಮದಲ್ಲಿದ್ದ ಪಿಗ್ಗಿ ಫ್ಯಾಮಿಲಿಗೆ ದೊಡ್ಡ ಶಾಕ್ ಎದುರಾಗಿದೆ.

  ಹೌದು ಕಳೆದ ವಾರವೆ ನಡೆಯಬೇಕಿದ್ದ ಪ್ರಿಯಾಂಕ ಸಹೋದರ ಸಿದ್ಧಾರ್ಥ್ ಮದುವೆ ದಿಢೀರನೆ ನಿಂತು ಹೋಗಿದೆ. ಅದ್ಧೂರಿಯಾಗಿ ಮದುವೆ ತಯಾರಿ ನಡೆಯುತ್ತಿದ್ದ ಸಂದರ್ಭದಲ್ಲೆ ಮದುವೆ ನಿಂತು ಹೋಗಿದ್ದು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

  ಪ್ರಿಯಾಂಕಾ-ನಿಕ್ ಜೋನಸ್ ಡೈವೋರ್ಸ್? ಅಂತಾರಾಷ್ಟ್ರೀಯ ಮ್ಯಾಗಜಿನ್ ವರದಿ

  ಮದುವೆ ಅರ್ಧದಲ್ಲೆ ಮುರಿದುಬಿದ್ದಿದೆ ಎನ್ನುವ ಮಾತುಗಲು ಕೂಡ ಕೇಳಿಬರುತ್ತಿವೆ. ಆದ್ರೆ ಮದುವೆ ನಿಂತ ಬಗ್ಗೆ ಪ್ರಿಯಾಂಕ ಫ್ಯಾಮಿಲಿ ಇದುವರೆಗೂ ಯಾವುದೆ ಸ್ಪಷ್ಟನೆ ನೀಡಲಿಲ್ಲ. ಆದ್ರೆ ಮದುವೆ ನಿಂತು ಹೋಗಲು ಅಸಲಿ ಕಾರಣ ಏನು?ಮುಂದೆ ಓದಿ..

  ಕಳೆದ ವಾರವೆ ನಡೆಯಬೇಕಿದ್ದ ಮದುವೆ

  ಕಳೆದ ವಾರವೆ ನಡೆಯಬೇಕಿದ್ದ ಮದುವೆ

  ಪ್ರಿಯಾಂಕ ಚೋಪ್ರ ಸಹೋದರ ಸಿದ್ಧಾರ್ಥ ಮದುವೆ ಕಳೆದ ವಾರವೆ ನಡೆಯಬೇಕಿತ್ತು. ಈಗಾಗಲೆ ಮದುವೆಯ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದರು. ಮನೆಗೆ ಅತ್ತಿಗೆ ಬರುತ್ತಿರುವ ಬಗ್ಗೆ ಪ್ರಿಯಾಂಕ ಮತ್ತು ಸಹೋದರಿ ಪರಿಣೀತಿ ಚೋಪ್ರ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದರು. ಮದುವೆ ಸಂಭ್ರದಲ್ಲಿ ತೇಲುತ್ತಿದ್ದ ಪ್ರಿಯಾಂಕ ಕುಟುಂಬಕ್ಕೆ ದಿಢೀರನೆ ಮದುವೆ ನಿಂತು ಹೋಗಿದ್ದು ಭಾರಿ ಬೇಸರ ಮೂಡಿಸಿದೆ.

  ಸೌತ್ ಗೆ ಬಂದ ಪರಿಣಿತಿ ಚೋಪ್ರಾಗೆ ರಾಜಮೌಳಿ ಬಿಗ್ ಆಫರ್

  ಮದುವೆ ನಿಲ್ಲಲು ಕಾರಣ ಇದೇ

  ಮದುವೆ ನಿಲ್ಲಲು ಕಾರಣ ಇದೇ

  ಪ್ರಿಯಾಂಕ ಸಹೋದರ ಸಿದ್ಧಾರ್ಥ್ ಚೋಪ್ರ ಗೆಳತಿ ಇಶಿತಾ ಜೊತೆ ಹಸೆಮಣೆ ಏರಲು ಸಿದ್ದರಾಗಿದ್ದರು. ಮದುವೆ ದಿನಾಂಕ ಕೂಡ ಫಿಕ್ಸ್ ಆಗಿತ್ತು. ಆದ್ರೆ ನಿಗದಿಯಾದ ದಿನ ಮದುವೆ ನಡೆಯಲೆ ಇಲ್ಲ. ಕಾರಣ ನಿಶಿತಾ ಅವರಿಗೆ ಅರೋಗ್ಯ ಸರಿ ಇಲ್ಲವಂತೆ. ಮದುವೆಗೆ ಕೆಲವುದಿನಗಳ ಮುಂಚೆ ತುರ್ತು ಆಪರೇಶನ್ ಗೆ ಒಳಗಾದ ಕಾರಣ ಮದುವೆಯನ್ನು ಮುಂದಕ್ಕೆ ಹಾಕಿದ್ದಾರಂತೆ. ಮತ್ತೊಂದು ಮುಹೂರ್ತಕ್ಕಾಗಿ ಕಾಯುತ್ತಿದ್ದಾರಂತೆ ಕುಟುಂಬ.

  ಮದುವೆ ನಿಂತು ಹೋಯ್ತು ಎನ್ನುವ ರೂಮರ್

  ಮದುವೆ ನಿಂತು ಹೋಯ್ತು ಎನ್ನುವ ರೂಮರ್

  ಸಿದ್ಧಾರ್ಥ್ ಮತ್ತು ಇಶಿತಾ ಮದುವೆ ಅರ್ಧದಲ್ಲೆ ನಿಂತು ಹೋಯ್ತು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇಶಿತಾ ಆರೋಗ್ಯವಾಗಿಯೇ ಇದ್ದಾರೆ ಆದ್ರೆ ಮದುವೆ ಮುರಿದು ಬಿದ್ದಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಆದ್ರೆ ಇನ್ನೊಂದು ಮೂಲಗಳ ಪ್ರಕಾರ ಪ್ರಿಯಾಂಕ ಫ್ಯಾಮಿಲಿ ಮತ್ತೊಂದು ಒಳ್ಳೆಯ ಮುಹೂರ್ತಕ್ಕಾಗಿ ಕಾಯುತ್ತಿದೆಯಂತೆ. ಆದ್ರೆ ಯಾವುದು ನಿಜ ಯಾವುದು ಸುಳ್ಳು ಎನ್ನುವುದು ಇನ್ನು ತಿಳಿದು ಬಂದಿಲ್ಲ.

  'ಸೈನಾ' ಬಯೋಪಿಕ್ ನಿಂದ ಶ್ರದ್ದಾ ಹೊರಕ್ಕೆ: ಶ್ರದ್ಧಾ ಜಾಗಕ್ಕೆ ಬಂದ ನಟಿ ಯಾರು?

  ಫೆಬ್ರವರಿಯಲ್ಲಿ ಎಂಗೇಜ್ ಆಗಿದ್ದ ಜೋಡಿ

  ಫೆಬ್ರವರಿಯಲ್ಲಿ ಎಂಗೇಜ್ ಆಗಿದ್ದ ಜೋಡಿ

  ಸಿದ್ಧಾರ್ಥ ಮತ್ತು ಇಶಿಕಾ ಇಬ್ಬರು ಫೆಬ್ರವರಿ 27ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ದೆಹಲಿಯಲ್ಲಿ ನಡೆದ ಅದ್ಧೂರಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪ್ರಿಯಾಂಕ ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಸಹೋದರನ ನಿಶ್ಚಿತಾರ್ಥದ ಸಂಭ್ರಮವನ್ನು ಪ್ರಿಯಾಂಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  English summary
  Bollywood most awaited wedding, Priyanka Chopra brother marriage a has been postponed and the family is looking for another muhurat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X