For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್: ವಿದೇಶದಲ್ಲಿ ಹೋಳಿ ಸಂಭ್ರಮಿಸಿದ ಪ್ರಿಯಾಂಕಾ ಚೋಪ್ರಾ ದಂಪತಿ

  |

  ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ವಿದೇಶದಲ್ಲಿ ನೆಲೆಸಿದ್ದರೂ ಪ್ರಿಯಾಂಕಾ ಭಾರತದ ಹಬ್ಬ, ಸಂಸ್ಕೃತಿಯನ್ನು ಮರೆತಿಲ್ಲ. ಈ ವಿಚಾರವಾಗಿ ಪ್ರಿಯಾಂಕಾ ಭಾರತೀಯರ ಗಮನ ಸೆಳೆಯುತ್ತಿರುತ್ತಾರೆ.

  ಇದೀಗ ಪ್ರಿಯಾಂಕಾ ದಂಪತಿ ಭಾರತದ ಸುಂದರ ಹಬ್ಬಗಳಲ್ಲಿ ಒಂದಾಗಿರುವ ಬಣ್ಣದ ಹಬ್ಬ ಹೋಳಿಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಪ್ರಿಯಂಕಾ ಪತಿ ಜೊತೆ ಲಂಡನ್‌ನಲ್ಲಿದ್ದಾರೆ. ಸಿನಿಮಾ ಕೆಲಸಗಳ ನಿಮಿತ್ತ ಪ್ರಿಯಾಂಕಾ ಲಂಡನ್ ಗೆ ತೆರಳಿದ್ದು, ಅಲ್ಲೇ ಹಬ್ಬವನ್ನು ಆಚರಿಸಿದ್ದಾರೆ.

  'ನಿಮ್ಮ ಮದುವೆಗೆ ಯಾಕೆ ಕರೆದಿಲ್ಲ' ಎಂದ ಅಭಿಮಾನಿಗೆ ಪ್ರಿಯಾಂಕಾ ಚೋಪ್ರಾ ಸಖತ್ ಪ್ರತಿಕ್ರಿಯೆ

  ಪತಿ ನಿಕ್ ಜೋನಸ್ ಮತ್ತು ಅವರ ಕುಟುಂಬದವರ ಜೊತೆ ಪ್ರಿಯಾಂಕಾ ಹೋಳಿ ಆಡಿರುವ ಫೋಟೋಗಳು ವೈರಲ್ ಆಗಿವೆ. ರಂಗಿನಹಬ್ಬ ಹೋಳಿ ಫೋಟೋವನ್ನು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಪತಿ ಮತ್ತು ಅವರ ತಂದೆ ತಾಯಿ ಜೊತೆ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಬಣ್ಣಗಳು ಮತ್ತು ಹೂಗಳಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

  ಫೋಟೋ ಜೊತೆಗೆ, 'ಹೋಳಿ, ಬಣ್ಣಗಳ ಹಬ್ಬ ನನ್ನ ಮೆಚ್ಚಿನ ಹಬ್ಬಗಳಲ್ಲಿ ಒಂದು. ನಾವೆಲ್ಲರೂ ಇದನ್ನು ನಮ್ಮ ಪ್ರೀತಿಪಾತ್ರರೊಡನೆ ಆಚರಿಸಬಹುದೆಂದು ಭಾವಿಸುತ್ತೇನೆ. ಆದರೆ ನಮ್ಮ ಮನೆಯಗಳಲ್ಲಿ, ಹ್ಯಾಪಿ ಹೋಳಿ' ಎಂದು ಬರೆದುಕೊಂಡಿದ್ದಾರೆ.

  ಇದೇ ಫೋಟೋಗಳನ್ನು ಪ್ರಿಯಾಂಕಾ ಪತಿ ಕೂಡ ಶೇರ್ 'ನಮ್ಮ ಕುಟುಂಬದಿಂದ ನಿಮಗೆಲ್ಲರಿಗೂ ಹೋಳಿ ಹಬ್ಬದ ಶುಭಾಶಯ' ಎಂದು ಹೇಳಿದ್ದಾರೆ. ಅಂದಹಾಗೆ ಪ್ರಿಯಾಂಕಾ ದಂಪತಿ ಕಳೆದ ವರ್ಷ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಮುಂಬೈನಲ್ಲಿ ಹಬ್ಬ ಆಚರಣೆ ಮಾಡಿದ್ದ ಪ್ರಿಯಾಂಕಾ ದಂಪತಿಗೆ ಇಡೀ ಬಾಲಿವುಡ್ ಸಾಥ್ ನೀಡಿತ್ತು. ಸಾಕಷ್ಟು ಜನ ಕಲಾವಿದರು ಹೋಳಿ ಆಚರಣೆಯಲ್ಲಿ ಭಾಗಿಯಾಗಿದ್ದರು.

  Smrithi Irani Marriage Story : ಆಪ್ತ ಗೆಳತಿಯ ಪತಿಯನ್ನೇ ಮದುವೆಯಾದ ಸ್ಮೃತಿ ಇರಾನಿ | Filmibeat Kannada

  ಈ ಬಾರಿ ವಿದೇಶದಲ್ಲಿ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ಅಂದಹಾಗೆ ಪ್ರಿಯಾಂಕಾ ಸಿನಿಮಾಗಳ ಜೊತೆಗೆ ರೆಸ್ಟೊರೆಂಟ್ ಕೂಡ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ನ್ಯೂಯಾರ್ಕ್‌ನಲ್ಲಿ ಸೋನಾ ರೆಸ್ಟೊರೆಂಟ್ ತೆರೆದಿರುವ ಪ್ರಿಯಾಂಕಾ ಭಾರತೀಯ ಶೈಲಿಯ ಆಹಾರ ಪದ್ದತಿಯನ್ನು ಪರಿಚಯಿಸಿದ್ದಾರೆ. ಭಾರತೀಯ ಸಂಸ್ಕೃತಿಯಂತೆ ಹೋಟೆಲ್ ಪೂಜೆ ಮಾಡಿ ಅದ್ದೂರಿಯಾಗಿ ಲಾಂಚ್ ಮಾಡಿದ್ದಾರೆ. ಆಗಾಗ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ರೆಸ್ಟೋರೆಂಟ್‌ನಲ್ಲಿ ತಯಾರಾಗುವ ವಿಶೇಷ ಖಾದ್ಯಗಳ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ.

  English summary
  Bollywood Actress Priyanka Chopra celebrated Holi festival with her husband nick Jonas and his family in London.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X