»   » ಪ್ರಿಯಾಂಕ ಚೋಪ್ರಾ ಈ ನಟನೊಂದಿಗೆ ಡೇಟಿಂಗ್ ಮಾಡಿದ್ದರಂತೆ! ಯಾರವರು?

ಪ್ರಿಯಾಂಕ ಚೋಪ್ರಾ ಈ ನಟನೊಂದಿಗೆ ಡೇಟಿಂಗ್ ಮಾಡಿದ್ದರಂತೆ! ಯಾರವರು?

Posted By:
Subscribe to Filmibeat Kannada

ನಟಿ ಪ್ರಿಯಾಂಕ ಚೋಪ್ರಾ ಗೆ ನಿಜವಾಗಿಯೂ ಬಾಯ್ ಫ್ರೆಂಡ್ ಇದ್ದಾರಾ, ಇದ್ದರು ಸಹ ಅವರು ಯಾರು ಎಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಆದ್ರೆ ಇತ್ತೀಚೆಗೆ ಮಾತ್ರ ಆಗಾಗ ಪಿಗ್ಗಿ ಬಾಯ್ ಫ್ರೆಂಡ್ ಮತ್ತು ಡೇಟಿಂಗ್ ವಿಷಯಗಳಿಂದ ಸುದ್ದಿಯಾಗುತ್ತಿರುವುದು ಮಾತ್ರ ನಿಜ.[ಒಂದು ಜಾಕೆಟ್‌ನಿಂದ ರಟ್ಟಾಯ್ತು ಪ್ರಿಯಾಂಕ ಮಾಜಿ ಬಾಯ್ ಫ್ರೆಂಡ್ ಗುಟ್ಟು?]

ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ನಲ್ಲೂ ಜನಪ್ರಿಯತೆ ಗಿಟ್ಟಿಸಿರುವ ಪ್ರಿಯಾಂಕ ಚೋಪ್ರಾ ಇತ್ತೀಚೆಗೆ 'Dirty Laundry' ಶೋನಲ್ಲಿ ತಮ್ಮ ಜಾಕೆಟ್ ಬಗ್ಗೆ ಮಾತನಾಡಿ ಬಾಯ್ ಫ್ರೆಂಡ್ ಇದ್ದರೂ ಎಂದು ಸುಳಿವು ನೀಡಿದ್ದರು. ಈ ಹೇಳಿಕೆ ಶಾರುಖ್ ಮತ್ತು ಪ್ರಿಯಾಂಕ ಡೇಟಿಂಗ್ ನಡೆಸಿರಬಹುದಾ.. ಎಂದು ಬಿಟೌನ್ ಗುಸು ಗುಸು ಎಂದು ಮಾತಾಡಿಕೊಳ್ಳುವಷ್ಟು ಸುದ್ದಿ ಮಾಡಿ, ಇದೆಲ್ಲಾ ರೂಮರ್ಸ್ ಎಂದು ಸ್ಪಷ್ಟ ಆಗಿತ್ತು. ಆದರೆ ಪಿಗ್ಗಿ ಬಗ್ಗೆ ಈಗೊಂದು ಹೊಸ ಸುದ್ದಿ.. ಅದೂ ಸಹ ಡೇಟಿಂಗ್ ಕುರಿತು ಹರಿದಾಡುತ್ತಿದೆ.

ಪ್ರಿಯಾಂಕ ಚೋಪ್ರಾ ಜೊತೆ 'ಲವ್ ಸ್ಟೋರಿ 2050' ಚಿತ್ರದಲ್ಲಿ ಅಭಿನಯಿಸಿದ್ದ ನಟ ಹರ್ಮನ್ ಬವೇಜಾ ಡೇಟ್ ಮಾಡಿದ್ದರಂತೆ. ಈ ವಿಷಯ ಈಗ್ಯಾಕೆ ಸದ್ದು ಮಾಡುತ್ತಿದೆ ಎಂದರೇ ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡ ಹರ್ಮನ್ ಬವೇಜಾ ಯಾರು ಗುರುತಿಸದಷ್ಟು ಬದಲಾಗಿದ್ದಾರಂತೆ. ಪ್ರಿಯಾಂಕಳ ಮನ ಕದ್ದಿದ್ದ ಆ ಸುರಸುಂದರಾಂಗನನ್ನು ನೀವು ಒಮ್ಮೆ ನೋಡಿ...

ಹರ್ಮನ್ ಲೇಟೆಸ್ಟ್ ಫೋಟೋ

ಬಾಲಿವುಡ್ ನ ಹೆಸರಾಂತ ನಿರ್ದೇಶಕ ಹ್ಯಾರಿ ಬವೇಜಾ ಮತ್ತು ನಿರ್ಮಾಪಕಿ ಪಮ್ಮಿ ಬವೇಜಾ ರವರ ಮುದ್ದಿನ ಪುತ್ರ ಹರ್ಮನ್ ಬವೇಜಾ. ಈತ ಕಳೆದ 9 ವರ್ಷಗಳ ಹಿಂದೆ ಬಾಲಿವುಡ್ ಚಿತ್ರರಂಗಕ್ಕೆ ಪ್ರಿಯಾಂಕ ಚೋಪ್ರಾ ಎದುರು ನಟಿಸುವುದರ ಮೂಲಕ ಪಾದಾರ್ಪಣೆ ಮಾಡಿದ್ದರು.[ಪ್ರಿಯಾಂಕ ಚೋಪ್ರಾ ಪ್ರೀತಿಯಲ್ಲಿ ಬಿದ್ದ ಹಾಲಿವುಡ್ ನಟ!]

ಮೊದಲ ಚಿತ್ರದಲ್ಲೇ ದೊಡ್ಡ ಮಟ್ಟದ ಹಾನಿ

ಹರ್ಮನ್ ಬವೇಜಾ ಬಾಲಿವುಡ್ ಗೆ ಎಂಟ್ರಿಕೊಟ್ಟ ಮೊದಲ ಚಿತ್ರವೇ ದೊಡ್ಡ ಮಟ್ಟದ ಹಾನಿ ಅನುಭವಿಸಿತ್ತು. ಇವರ ಮೊದಲ ಚಿತ್ರ 'ಲವ್ ಸ್ಟೋರಿ 2050'. ನಂತರ ನಟಿಸಿದ 'ವಿಕ್ಟರಿ' ಮತ್ತು 'What's Your Raashee' ಸಹ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದ್ದವು.

ಕಮ್‌ ಬ್ಯಾಕ್ ಸಿನಿಮಾ

2009 ರ ನಂತರ ಪುನಃ ಬಾಲಿವುಡ್ ಕಡೆ ಮುಖ ಮಾಡಿದ್ದ ಹರ್ಮನ್ ಬವೇಜಾ 2014 ರಲ್ಲಿ 'Dishkiyaoon' ಮತ್ತು 'Chaar ShibZasade' ಚಿತ್ರಗಳಲ್ಲಿ ನಟಿಸಿದ್ದರು. ಆದರೆ ನಂತರ ಯಾವುದೇ ಬಾಲಿವುಡ್ ಸಿನಿಮಾಗಳಿಗೆ ಸಹಿ ಮಾಡಿರಲಿಲ್ಲ.

ಹ್ಯಾರಿ ಬವೇಜಾ ರಿಂದ ಹರ್ಮನ್ ರೀಲಾಂಚ್

ಅಂದಹಾಗೆ ಇತ್ತೀಚೆಗೆ ಮತ್ತೆ ಹರ್ಮನ್ ಬವೇಜಾ ರನ್ನು ಅವರ ತಂದೆ ಹ್ಯಾರಿ ಬವೇಜಾ ಬಾಲಿವುಡ್ ನಲ್ಲಿ ರೀಲಾಂಚ್ ಮಾಡಲು ಪ್ಲಾನ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದೂ ಸಹ ಆಕ್ಷನ್ ಥ್ರಿಲ್ಲರ್ ಚಿತ್ರದ ಮೂಲಕ. ಇದು ಎಷ್ಟರ ಮಟ್ಟಿಗೆ ಸತ್ಯ ಆಗಲಿದೆ ಎಂದು ಕಾದು ನೋಡಬೇಕಿದೆ.

ಪಿಗ್ಗಿ ಜೊತೆ ಹರ್ಮನ್ ಡೇಟ್

ಹರ್ಮನ್ ಬವೇಜಾ ರವರ ಈ ಲೇಟೆಸ್ಟ್ ಫೋಟೋ ನೋಡಿದ್ರೆ ಬಹುಶಃ ಪಿಗ್ಗಿ ಜೊತೆ ಹರ್ಮನ್ ಡೇಟ್ ಮಾಡಿರುವ ಬಗ್ಗೆ ಸಂಶಯ ಮೂಡುತ್ತದೆ. ಅಲ್ಲದೇ ಇದು ರೂಮರ್ಸ್ ಎನ್ನಬಹುದು. ಆದರೆ...

'ಲವ್ ಸ್ಟೋರಿ 2050' ಸಮಯದಲ್ಲಿ ಲವ್ ಇತ್ತಂತೆ

ಪ್ರಿಯಾಂಕ ಚೋಪ್ರಾ ಮತ್ತು ಹರ್ಮನ್ ಬವೇಜಾ ಇಬ್ಬರೂ ಸಹ 'ಲವ್ ಸ್ಟೋರಿ 2050' ಚಿತ್ರ ಸೆಟ್ ನಲ್ಲಿ ಡೇಟಿಂಗ್ ಆರಂಭಿಸಿದ್ದರಂತೆ. ಆದರೆ ಅವರ ರಿಲೇಶನ್‌ಶಿಪ್ ದೀರ್ಘಕಾಲ ಉಳಿಯಲಿಲ್ಲವಂತೆ. ಕಾರಣ ತಿಳಿಯಲು ಮುಂದೆ ಓದಿ.

ಬ್ರೇಕಪ್ ಗೆ ಕಾರಣ..

ಪಿಗ್ಗಿ ಮತ್ತು ಹರ್ಮನ್ ಬ್ರೇಕಪ್ ಗೆ ಕಾರಣ ಹರ್ಮನ್ ಬವೇಜಾ ರವರ ಫ್ಯಾಮಿಲಿ ಅಂತೆ. ಹರ್ಮನ್ ಬವೇಜಾ ಕುಟುಂಬ ಇಬ್ಬರ ನಡುವಿನ ಸಂಬಂಧ ಕುರಿತು ಹ್ಯಾಪಿ ಆಗಿರಲಿಲ್ಲವಂತೆ.[ಪ್ರಿಯಾಂಕ ಚೋಪ್ರಾ ಪ್ರೀತಿಯಲ್ಲಿ ಬಿದ್ದ ಹಾಲಿವುಡ್ ನಟ!]

English summary
Harman Baweja, who made his Bollywood debut with 'Love story 2050'. He also dated his co-star from the movie Priyanka Chopra that time. He was recently spotted at a restaurant in Mumbai, and the actor looks almost unrecognizable now. You can See his shocking transformation here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada