For Quick Alerts
  ALLOW NOTIFICATIONS  
  For Daily Alerts

  ರೈತರ ಪ್ರತಿಭಟನೆ; 'ಭಾರತದ ಆಹಾರ ಸೈನಿಕರ' ಬೆಂಬಲಕ್ಕೆ ನಿಂತ ನಟಿ ಪ್ರಿಯಾಂಕಾ ಚೋಪ್ರಾ

  |

  ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತರು ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದ್ದು, ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ.

  ರೈತರ ಪ್ರತಿಭಟನೆಗೆ ಅನೇಕರು ಬೆಂಬಲ ನೀಡಿದ್ದಾರೆ. ಬಾಲಿವುಡ್ ನ ಕೆಲವು ಸಿನಿಮಾ ತಾರೆಯರು ಹಾಗೂ ಕ್ರೀಡಾ ತಾರೆಯರು ಸಹ ರೈತರ ಬೆನ್ನಿಗೆ ನಿಂತಿದ್ದಾರೆ. ನಟ ದಿಲ್ಜಿತ್ ದೊಸಾಂಜ್, ರಿತೇಶ್ ದೇಶಮುಖ್, ಅನುಭವ್ ಸಿನ್ಹ, ಹನ್ಸಾಲ್ ಮೆಹ್ತಾ ಸೇರಿದಂತೆ ಅನೇಕರು ರೈತರಿಗೆ ಬೆಂಬಲ ಸೂಚಿಸಿದ್ದಾರೆ. ಇದೀಗ ನಟಿ ಪ್ರಿಯಾಂಕಾ ಚೋಪ್ರಾ ಬೆಂಬಲ ನೀಡಿದ್ದಾರೆ. ರೈತರನ್ನು ಆಹಾರ ಸೈನಿಕರು ಎಂದು ಕರೆದಿರುವ ಪ್ರಿಯಾಂಕಾ ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಯಬೇಕು ಎಂದಿದ್ದಾರೆ. ಮುಂದೆ ಓದಿ..

  ಪ್ರತಿಭಟನೆ ಮಾಡುತ್ತಿರುವ ರೈತರಿಗೆ 1 ಕೋಟಿ ರೂ. ನೀಡಿದ ನಟ ದಿಲ್ಜಿತ್ ದೊಸಾಂಜ್ಪ್ರತಿಭಟನೆ ಮಾಡುತ್ತಿರುವ ರೈತರಿಗೆ 1 ಕೋಟಿ ರೂ. ನೀಡಿದ ನಟ ದಿಲ್ಜಿತ್ ದೊಸಾಂಜ್

  ರೈತರ ಬೆನ್ನಿಗೆ ನಿಂತ ಪ್ರಿಯಾಂಕಾ ಚೋಪ್ರಾ

  ರೈತರ ಬೆನ್ನಿಗೆ ನಿಂತ ಪ್ರಿಯಾಂಕಾ ಚೋಪ್ರಾ

  ರೈತರ ಬೆಂಬಲಕ್ಕೆ ನಿಂತಿರುವ ಪ್ರಿಯಾಂಕಾ ಚೋಪ್ರಾ ರೈತರನ್ನು ಭಾರತದ ಆಹಾರ ಸೈನಿಕರು ಎಂದಿದ್ದಾರೆ. ಮೊದಲು ರೈತರ ಭಯವನ್ನು ಹೋಗಲಾಡಿಸಬೇಕು ಎಂದು ಹೇಳಿದ್ದಾರೆ. 'ನಮ್ಮ ರೈತರು ಭಾರತದ ಆಹಾರ ಸೈನಿಕರು. ಮೊದಲು ಅವರ ಭಯವನ್ನು ಹೋಗಲಾಡಿಸಬೇಕಿದೆ. ಅವರ ಆಶಯಗಳನ್ನು ಈಡೇರಿಸಬೇಕಾಗಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಯಬೇಕು' ಎಂದು ಟ್ವೀಟ್ ಮಾಡಿದ್ದಾರೆ.

  ದಿಲ್ಜಿತ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಿಯಾಂಕಾ

  ದಿಲ್ಜಿತ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಿಯಾಂಕಾ

  ನಟ ದಿಲ್ಜಿತ್ ದೊಸಾಂಜ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ. ದಿಲ್ಜಿತ್ ಟ್ವೀಟ್ ನಲ್ಲಿ 'ಪ್ರೀತಿಯ ಬಗ್ಗೆ ಮಾತನಾಡಿ, ಯಾವುದೇ ಧರ್ಮವು ಹಿಂಸೆಯನ್ನು ಕಲಿಸುವುದಿಲ್ಲ. ಹಿಂದೂ ಸಿಖ್, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಎಲ್ಲರೂ ಸಹೋದರರಂತೆ ಪರಿಗಣಿಸುತ್ತಾರೆ. ಅದಕ್ಕಾಗಿಯೇ ಭಾರತವು ವಿಶ್ವದಲ್ಲೇ ಅತ್ಯುತ್ತಮವಾಗಿದೆ. ಇಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಾರೆ ಮತ್ತು ಪ್ರತಿಯೊಂದು ಧರ್ಮವನ್ನೂ ಗೌರವಿಸಲಾಗುತ್ತದೆ' ಎಂದು ದಿಲ್ಜಿತ್ ಟ್ವೀಟ್ ಮಾಡಿದ್ದಾರೆ.

  ನಟ ರಿತೇಶ್ ದೇಶಮುಖ್ ಬೆಂಬಲ

  ನಟ ರಿತೇಶ್ ದೇಶಮುಖ್ ಬೆಂಬಲ

  ಪ್ರಿಯಾಂಕಾ ಟ್ವೀಟ್ ಗೆ ಸಾಕಷ್ಟು ಜನ ಬೆಂಬಲ ನೀಡಿದ್ದಾರೆ. ಅಭಿಮಾನಿಗಳು ಪ್ರಿಯಾಂಕಾ ಚೋಪ್ರಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಮೊದಲು ನಟ ರಿತೇಶ್ ದೇಶಮುಖ್ ಟ್ವೀಟ್ ಮಾಡಿ, 'ನೀವು ಇವತ್ತು ಊಟ ಮಾಡುತ್ತಿದ್ದರೆ ಒಬ್ಬ ರೈತನಿಗೆ ಧನ್ಯವಾದ ಹೇಳಿ. ನಮ್ಮ ದೇಶದ ಪ್ರತಿಯೊಬ್ಬ ರೈತನೊಂದಿಗೆ ನಾನು ಒಗ್ಗಟ್ಟಿನಲ್ಲಿ ನಿಲ್ಲುತ್ತೇನೆ. ಜೈ ಕಿಸಾನ್' ಎಂದು ಹೇಳಿದ್ದಾರೆ.

  ಪ್ರಿಯಾಂಕಾ ಚೋಪ್ರಾ ನಟನೆಯ ಮತ್ತೊಂದು ಹಾಲಿವುಡ್ ಸಿನಿಮಾದ ಟ್ರೇಲರ್ ಬಿಡುಗಡೆಪ್ರಿಯಾಂಕಾ ಚೋಪ್ರಾ ನಟನೆಯ ಮತ್ತೊಂದು ಹಾಲಿವುಡ್ ಸಿನಿಮಾದ ಟ್ರೇಲರ್ ಬಿಡುಗಡೆ

  ಹೊಸ ಜನ್ಮ ಸಿಕ್ಕಷ್ಟೇ ಖುಷಿ ಆಗುತ್ತೆ ನಂಗೆ | Filmibeat Kannada
  ಪ್ರಿಯಾಂಕಾ ಚೋಪ್ರಾ ಸಿನಿಮಾಗಳು

  ಪ್ರಿಯಾಂಕಾ ಚೋಪ್ರಾ ಸಿನಿಮಾಗಳು

  ಪ್ರಿಯಾಂಕಾ ಚೋಪ್ರಾ ಕೊನೆಯ ಬಾರಿಗೆ ದಿ ಸ್ಕೈ ಈಸ್ ಪಿಂಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಚಿತ್ರದಲ್ಲಿ ಫರ್ಹಾನ್ ಅಖ್ತರ್ ಜೊತೆ ತೆರೆಹಂಚಿಕೊಂಡಿದ್ದರು. ಇದೀಗ ರಾಜ್ ಕುಮಾರ್ ರಾವ್ ಜೊತೆ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಬಾಲಿವುಡ್ ಜೊತೆಗೆ ಪ್ರಿಯಾಂಕಾ ಹಾಲಿವುಡ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ.

  English summary
  Bollywood Actress Priyanka Chopra extends Support to Farmers protest. She calls them India's Food Soldiers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X