For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ಅವತಾರ ನೋಡಿ ನೆಟ್ಟಿಗರ ಗೇಲಿ

  |
  ಟ್ರೋಲ್‍ಗಳಿಗೆ ಆಹಾರವಾದ ಪ್ರಿಯಾಂಕಾ ಚೋಪ್ರಾ

  ಚಿತ್ರತಾರೆಯರು ಯಾವಾಗಲು ವಿಭಿನ್ನವಾದ ಕಾಸ್ಟ್ಯೂಮ್ ನಲ್ಲಿ ಕಂಗೊಳಿಸುತ್ತಿರುತ್ತಾರೆ. ಅದ್ರಲ್ಲೂ ಯಾವುದಾದರು ಅವಾರ್ಡ್ ಕಾರ್ಯಕ್ರಮ ಅಥವಾ ವಿಶೇಷವಾದ ಸಮಯದಲ್ಲಿ ನಟಿಮಣಿಯ ಧರಿಸುವ ಕಾಸ್ಟ್ಯೂಮ್ ನೋಡುಗರ ಕಣ್ಣುಕುಕ್ಕುತ್ತಿರುತ್ತದೆ. ಸದ್ಯ ಬಾಲಿವುಡ್ ನಟಿ ಪ್ರಿಯಾಂಕಾ ಅವರ ಹೊಸ ಅವತಾರ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ.

  ಅಮೇರಿಕಾದ ಖ್ಯಾತ ಫ್ಯಾಷನ್ ಶೋ ಮೆಟ್ ಗಾಲಾ 2019 ಸಂಭ್ರಮ ಪ್ರಾರಂಭವಾಗಿದೆ. ಅಂತರಾಷ್ಟ್ರೀಯ ಖ್ಯಾತಿಯ ನಟಿಮಣಿಯರು ತರಹೇವಾರಿ ಕಾಸ್ಟ್ಯೂಮ್ ಗಳನ್ನು ಧರಿಸಿ ರೆಡ್ ಕಾರ್ಪೆಟ್ ಮೇಲೆ ಬೆಕ್ಕಿನ ನಡಿಗೆ ಹಾಕುತ್ತಾರೆ. ಇಲ್ಲಿ ನಟಿಯರು ಧರಿಸುವ ಕಾಸ್ಟ್ಯೂಮ್ ವಿಚಿತ್ರವಾಗಿರುತ್ತೆ.

  ಮುರಿದು ಬಿತ್ತು ಪ್ರಿಯಾಂಕ ಚೋಪ್ರ ಸಹೋದರನ ಮದುವೆ: ನಿಜವಾದ ಕಾರಣ ಇಲ್ಲಿದೆ

  ವಿಶೇಷ ಅಂದ್ರೆ ಈ ಬಾರಿಯ ಮೆಟ್ ಗಾಲಾ ಶೋ ನಲ್ಲಿ ಬಾಗಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ವಿಚಿತ್ರವಾದ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಪಿಗ್ಗಿಯನ್ನು ನೆಟ್ಟಿಗರು ಗೇಲಿ ಮಾಡುತ್ತಿದ್ದಾರೆ. ಗುಂಗುರು ಕೂದಲು ಮಾಡಿಕೊಂಡು ವಿಚಿತ್ರ ಮೇಕಪ್ ಹಾಕಿ ಸಿಲ್ವರ್ ಬಣ್ಣದ ಗೌನ್ ನಲ್ಲಿ ಮಿಂಚಿದ್ದಾರೆ. ಈ ಲುಕ್ ಈಗ ಟ್ರೋಲ್ ಗಳ ಕಣ್ಣುಕುಕ್ಕುತ್ತಿದೆ.

  ಪ್ರಿಯಾಂಕಾ ಚೋಪ್ರಾ ಮೆಟ್ ಗಾಲಾ ಫ್ಯಾಷನ್ ಶೋ ನಲ್ಲಿ ಮೂರು ವರ್ಷಗಳಿಂದ ಭಾಗಿಯಾಗುತ್ತಿದ್ದಾರೆ. ಈ ಬಾರಿ ಪ್ರಿಯಾಂಕಾ ಚೋಪ್ರ ಜೊತೆಗೆ ಪತಿ ನಿಕ್ ಜೋನಸ್ ಸಹ ಕಾಣಿಸಿಕೊಂಡಿದ್ದಾರೆ. ಮದುವೆ ನಂತರ ಮೊದಲ ಬಾರಿಗೆ ಪಿಂಕಿ ಮೆಟ್ ಗಾಲಾ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ಸಹ ರೆಟ್ ಕಾರ್ಪೆಟ್ ಮೇಲೆ ಕ್ಯಾಟ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

  ಇನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಭಾಗಿಯಾಗಿದ್ದಾರೆ. ಪಿಂಕ್ ಬಣ್ಣದ ಉದ್ದನೆಯ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಬೆಕ್ಕಿನ ನಡಿಗೆ ಹಾಕಿದ್ದಾರೆ. ದೀಪಿಕಾಳ ಬಾರ್ಬಿ ಲುಕ್ ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದ್ರೆ ಪ್ರಿಯಾಂಕಾ ವಿಚಿತ್ರ ಅವತಾರಕ್ಕೆ ನೆಟ್ಟಿಗರು ತರಹೇವಾರಿ ಕಮೆಂಟ್ಸ್ ಮಾಡುತ್ತಿದ್ದಾರೆ.

  English summary
  Bollywood actres Priyanka Chopra gets trolled met gala look. Deepika Padukone looks like barbie doll in pink gown in met gala 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X