For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ಜೀವನ ನೋಡಿ ಅಯ್ಯೋ ಪಾಪ ಅನದಿರಲಾಗದು

  |

  ನಟಿ ಪ್ರಿಯಾಂಕಾ ಚೋಪ್ರಾ ಭಾರತದ ಅತ್ಯಂತ ಯಶಸ್ವಿ ನಟಿಯರಲ್ಲಿ ಪ್ರಮುಖರು. ಬಾಲಿವುಡ್‌ ಅನ್ನು ದಶಕ ಆಳಿದ ನಟಿ ಹಾಲಿವುಡ್‌ನಲ್ಲೂ ಸಖತ್ ಮಿಂಚು ಹರಿಸುತ್ತಿದ್ದಾರೆ.

  ಬಾಲಿವುಡ್ ಹಾಗೂ ಹಾಲಿವುಡ್ ಎರಡರಲ್ಲೂ ಸಮಾನ ಬೇಡಿಕೆ ಹೊಂದಿರುವ ನಟಿ ಪ್ರಿಯಾಂಕಾ ಚೋಪ್ರಾ. ಪತಿ ನಿಕ್ ಜೋನಸ್ ಸಹ ಹಾಲಿವುಡ್‌ನಲ್ಲಿ ಸಖತ್ ಬೇಡಿಕೆಯ ಗಾಯಕ.

  ಇಷ್ಟೆಲ್ಲಾ ಖ್ಯಾತಿ, ಹಣ ಇದ್ದಮೇಲೆ ಪ್ರಿಯಾಂಕಾ ಜೀವನ ನೋಡಿ 'ಅಯ್ಯೋ ಪಾಪಾ' ಎಂದೇಕೆ ಎನ್ನಬೇಕು ಎಂಬ ಪ್ರಶ್ನೆ ಮೂಡಿಯೇ ತೀರುತ್ತದೆ. ಅಯ್ಯೋ ಪಾಪ ಎನ್ನಲು ಕಾರಣ, ಪ್ರಿಯಾಂಕ ಸವೆಸುತ್ತಿರುವ ಬಿಡುವೇ ಇಲ್ಲದ ಜೀವನ ಶೈಲಿಗೆ.

  ಭಾರತ ಹಾಗೂ ಅಮೆರಿಕ ಎರಡೂ ಕಡೆ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ. ಭಾರತದಲ್ಲಿ ಶೂಟಿಂಗ್ ಮುಗಿಸಿ ಅಮೆರಿಕಕ್ಕೆ ಹಾರಿ ಅಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿ ಅಲ್ಲಿಂದ ಬ್ರಿಟನ್‌ ಗೆ ಹಾರಿ ಹೀಗೆ ಹಲವು ಸುತ್ತುಗಳನ್ನು ಹೊಡೆಯುತ್ತಿರುತ್ತಾರೆ.

  ಪ್ರಿಯಾಂಕಾ ಗೆ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ನಿದ್ದೆ ಮಾಡಲು ಸಹ ಸೂಕ್ತ ಸಮಯ ದೊರೆಯುವುದಿಲ್ಲವಂತೆ. ತಮ್ಮ ಕೆಲಸದ ನಡುವೆ ಸಿಗುವ ಬಿಡುವಿನಲ್ಲಿಯೇ ಕೂತಿದ್ದ ಜಾಗದಲ್ಲಿಯೇ ನಿದ್ದೆ ಮಾಡುತ್ತಾರಂತೆ ಪ್ರಿಯಾಂಕಾ. ಚೇರ್‌ ಮೇಲೆ ಕೂತು ನಿದ್ದೆ ಹೋಗುತ್ತಿರುವ ಚಿತ್ರವೊಂದನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ ಪ್ರಿಯಾಂಕಾ.

  ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಸುದೀಪ್ | Filmibeat Kannada

  'ಬ್ರಿಟನ್‌ನಲ್ಲಿದ್ದು ಅಮೆರಿಕದಲ್ಲಿ ಲೇಟ್‌ ನೈಟ್‌ ಶೋ ಗಳಿಗೆ ಅತಿಥಿಯಾಗಿ ಭಾಗವಹಿಸುವ ಸೀಕ್ರೆಟ್ ಇದೇ ನೋಡಿ' ಎಂದು ತಾವು ಕೂತಲ್ಲೇ ನಿದ್ರೆ ಮಾಡುವ ಚಿತ್ರವನ್ನು ಉಲ್ಲೇಖಿಸಿದ್ದಾರೆ ಪ್ರಿಯಾಂಕಾ.

  English summary
  Actress Priyanka Chopra who works in both Hollywood and Bollywood has very busy schedule.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X