For Quick Alerts
  ALLOW NOTIFICATIONS  
  For Daily Alerts

  ಏನು.. ನಟಿ ಪ್ರಿಯಾಂಕಾ ಚೋಪ್ರಾ ಗರ್ಭಿಣಿ ಅಂತೆ.! ಹೌದಾ.?

  |

  ಅಮೆರಿಕನ್ ನಟ ಕಮ್ ಸಿಂಗರ್ ನಿಕ್ ಜೋನಸ್ ಎಂಬುವರ ಜೊತೆ ನಟಿ ಪ್ರಿಯಾಂಕಾ ಚೋಪ್ರಾ ವಿವಾಹ ಮಹೋತ್ಸವ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನೆರವೇರಿತ್ತು. ಬಳಿಕ ಹನಿಮೂನ್ ಗಾಗಿ ವಿದೇಶಗಳನ್ನು ಸುತ್ತಿ ಬಂದಿದ್ದ ಪ್ರಿಯಾಂಕಾ ಚೋಪ್ರಾ ಇದೀಗ ಗರ್ಭಿಣಿಯಂತೆ.!

  ಹೀಗೊಂದು ಗುಸುಗುಸು ಬಾಲಿವುಡ್ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿದೆ. ಅದಕ್ಕೆ ಕಾರಣ ಪ್ರಿಯಾಂಕಾ ಚೋಪ್ರಾ ರವರ ಒಂದು ಫೋಟೋ.

  ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ನಟಿ ಪ್ರಿಯಾಂಕಾ ಚೋಪ್ರಾ ಫೋಟೋಶೂಟ್ ಒಂದರಲ್ಲಿ ಭಾಗವಹಿಸಿದ್ದರು. ಅದೇ ಈ ಫೋಟೋ ಶೂಟ್ ನ ಫೋಟೋಗಳನ್ನು ನೋಡಿ ಬಿಟೌನ್ ಗಾಸಿಪ್ ಪಂಡಿತರು ಪ್ರಿಯಾಂಕಾ ಗರ್ಭವತಿ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಮುಂದೆ ಓದಿರಿ..

  ಇದೇ ನೋಡಿ ಆ ಫೋಟೋ..

  ಇದೇ ನೋಡಿ ಆ ಫೋಟೋ..

  ಪ್ರಿಯಾಂಕಾ ಚೋಪ್ರಾ ಪ್ರೆಗ್ನೆಂಟ್ ಎಂದು ಗಾಸಿಪ್ ಹಬ್ಬಲು ಕಾರಣವಾಗಿರುವ ಫೋಟೋ ಇದೆ. ಈ ಛಾಯಾಚಿತ್ರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ಪ್ರಿಯಾಂಕಾ ಹೊಟ್ಟೆ ಕೊಂಚ ಉಬ್ಬಿದಂತೆ ಕಂಡು ಬಂದಿರುವ ಕಾರಣ ಪ್ರಿಯಾಂಕಾ ಗರ್ಭಿಣಿ ಎಂಬ ಅಂತೆ ಕಂತೆ ಆರಂಭವಾಗಿದೆ.

  ಆರತಕ್ಷತೆಯಲ್ಲಿ ನವ ದಂಪತಿ ಪ್ರಿಯಾಂಕಾ-ನಿಕ್ ಗೆ ಪ್ರಧಾನಿ ಮೋದಿ ಕೊಟ್ಟ ಉಡುಗೊರೆ ಏನು.? ಆರತಕ್ಷತೆಯಲ್ಲಿ ನವ ದಂಪತಿ ಪ್ರಿಯಾಂಕಾ-ನಿಕ್ ಗೆ ಪ್ರಧಾನಿ ಮೋದಿ ಕೊಟ್ಟ ಉಡುಗೊರೆ ಏನು.?

  ಗಾಸಿಪ್ ಕೇಳಿ ನಕ್ಕ ಪ್ರಿಯಾಂಕಾ

  ಗಾಸಿಪ್ ಕೇಳಿ ನಕ್ಕ ಪ್ರಿಯಾಂಕಾ

  ಹೇಳಿ ಕೇಳಿ ಸಿನಿಮಾ ತಾರೆಯರಿಗೆ ಗಾಸಿಪ್ ಅನ್ನೋದು ಕಾಮನ್. ಮದುವೆ ಆದ ಮೇಲೆ ಇಂತಹ ಅಂತೆ ಕಂತೆ ಇದ್ದಿದ್ದೇ ಎಂದು ನಟಿ ಪ್ರಿಯಾಂಕಾ ಚೋಪ್ರಾ ನಕ್ಕು ಸುಮ್ಮನಾಗಿದ್ದಾರೆ.

  ಬ್ರೈಡಲ್ ಶವರ್: ಪ್ರಿಯಾಂಕಾ ಛೋಪ್ರಾ ತೊಟ್ಟಿದ್ದ ಆಭರಣಗಳ ಬೆಲೆ ಎಷ್ಟು ಗೊತ್ತಾ.? ಬ್ರೈಡಲ್ ಶವರ್: ಪ್ರಿಯಾಂಕಾ ಛೋಪ್ರಾ ತೊಟ್ಟಿದ್ದ ಆಭರಣಗಳ ಬೆಲೆ ಎಷ್ಟು ಗೊತ್ತಾ.?

  ಪ್ರಿಯಾಂಕಾ ಚೋಪ್ರಾ ತಾಯಿ ಹೇಳುವುದೇನು.?

  ಪ್ರಿಯಾಂಕಾ ಚೋಪ್ರಾ ತಾಯಿ ಹೇಳುವುದೇನು.?

  "ಪ್ರಿಯಾಂಕಾ ಚೋಪ್ರಾ ಗರ್ಭಿಣಿಯಾಗಿಲ್ಲ. ಇದೀಗ ಕೆಲವು ಸಿನಿಮಾಗಳಲ್ಲಿ ಆಕೆ ಬಿಜಿ ಆಗಿದ್ದಾಳೆ. ಸದ್ಯಕ್ಕೆ ಮಗು ಬೇಡ ಎಂದು ದಂಪತಿ ನಿರ್ಧಾರ ಮಾಡಿದ್ದಾರೆ" ಎಂದು ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ಮದುವೆಯ ಫೋಟೋ ಆಲ್ಬಂ ಇಲ್ಲಿದೆ ನೋಡಿ ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ಮದುವೆಯ ಫೋಟೋ ಆಲ್ಬಂ ಇಲ್ಲಿದೆ ನೋಡಿ

  ಅದ್ದೂರಿಯಾಗಿ ನಡೆದಿದ್ದ ಮದುವೆ

  ಅದ್ದೂರಿಯಾಗಿ ನಡೆದಿದ್ದ ಮದುವೆ

  ಜೋಧ್ ಪುರದ ಉಮೈದ್ ಭವನ್ ಅರಮನೆಯಲ್ಲಿ ಕ್ರೈಸ್ತ ಮತ್ತು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಕಾಲಿಟ್ಟಿದ್ದರು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಇವರಿಬ್ಬರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿತ್ತು.

  English summary
  Bollywood Actress Priyanka Chopra is not pregnant confirms mother Madhu Chopra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X