»   » ಶಿಲ್ಪಾ ಶೆಟ್ಟಿ ಕಣ್ಣೀರಿಡುವಂತೆ ಮಾಡಿದ ಪ್ರಿಯಾಂಕಾ

ಶಿಲ್ಪಾ ಶೆಟ್ಟಿ ಕಣ್ಣೀರಿಡುವಂತೆ ಮಾಡಿದ ಪ್ರಿಯಾಂಕಾ

Posted By:
Subscribe to Filmibeat Kannada

ಖ್ಯಾತ ಬಾಕ್ಸಿಂಗ್ ಪಟು ಮೇರಿಕೋಮ್ ಜೀವನ ಕಥೆಯಾಧಾರಿತ ಚಿತ್ರ 'ಮೇರಿಕೋಮ್' ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ವಿಮರ್ಶಕರು ಚಿತ್ರವನ್ನು ಕೊಂಡಾಡುತ್ತಿದ್ದಾರೆ. ಚಿತ್ರದಲ್ಲಿನ ಪ್ರಿಯಾಂಕಾ ಚೋಪ್ರಾ ಅವರ ಅಭಿನಯದ ಮೋಡಿ ನೋಡಿ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.

ಇತ್ತೀಚೆಗೆ 'ಮೇರಿಕೋಮ್' ಚಿತ್ರವನ್ನು ವೀಕ್ಷಿಸಿದ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಕಣ್ಣೀರಧಾರೆ ಹರಿಸಿದರು. ಮೇರಿಕೋಮ್ ಜೀವನದ ವಿವಿಧ ಆಯಾಮಗಳನ್ನು, ಕಷ್ಟನಷ್ಟಗಳನ್ನು ತೆರೆದಿಟ್ಟರುವ ಬಗೆಯನ್ನು ನೋಡಿ ಭಾವೋದ್ವೇಗಕ್ಕೆ ಒಳಗಾದ ಶಿಲ್ಪಾ ಕಣ್ಣಲ್ಲಿ ನೀರು ಧಾರಾಕಾರವಾಗಿ ಪ್ರವಹಿಸಿತು.


ತಾನು ಕಣ್ಣೀರಿಟ್ಟ ಘಟನೆಯನ್ನು ಶಿಲ್ಪಾ ಶೆಟ್ಟಿ ತನ್ನ ಟ್ವಿಟ್ಟರ್ ನಲ್ಲಿ ಹೊರಹಾಕಿದ್ದಾರೆ, "ಮೇರಿಕೋಮ್ ಚಿತ್ರದಲ್ಲಿ ಎಲ್ಲರೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಆದರೆ ಪ್ರಿಯಾಂಕಾ ಚೋಪ್ರಾ ಅವರ ಅಭಿನಯ ವರ್ಣನಾತೀತ. ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡಿದ್ದಾರೆ. ಓಮಂಗ್ ಅವರ ನಿರ್ದೇಶನವೂ ಚೆನ್ನಾಗಿದೆ. ಚಿತ್ರ ನೋಡಿದ ಬಳಿಕ ಕಣ್ಣುಗಳು ಮಂಜಾದವು. ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಿ" ಎಂದು ಶಿಲ್ಪಾ ಟ್ವೀಟಿಸಿದ್ದಾರೆ.

ಈ ಚಿತ್ರಕ್ಕಾಗಿ ಪ್ರಿಯಾಂಕಾ ಚೋಪ್ರಾ ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಮೇರಿಕೋಮ್ ಪಾತ್ರದಲ್ಲಿ ಪ್ರವೇಶಿಸಲು ಸ್ವತಃ ಬಾಕ್ಸಿಂಗ್ ತರಬೇತಿ ಪಡೆದಿದ್ದರು. ಮೇರಿಕೋಮ್ ಜೊತೆಗೂ ಕೆಲದಿನಗಳ ಕಾಲ ಇದ್ದರು. ಮಣಿಪುರ ಪ್ರದೇಶದ ಸಣ್ಣ ಹಳ್ಳಿಗಾಡಿನ ಹುಡುಗಿ ಮೇರಿಕೋಮ್. ಬಾಕ್ಸಿಂಗ್ ಎಂದರೆ ಅಪಾರ ಆಸಕ್ತಿ ಇರುತ್ತದೆ.

ತಾನೂ ಒಬ್ಬ ದೊಡ್ಡ ಬಾಕ್ಸಿಂಗ್ ಪಟು ಆಗಬೇಕು. ದೇಶಕ್ಕೆ ಒಲಂಪಿಕ್ ಪದಕ ತರಬೇಕು ಎಂದು ಕನಸು ಕಾಣುತ್ತಾಳೆ. ಬಾಕ್ಸಿಂಗ್ ಎಂದರೆ ಪುರುಷಾಧಿಪತ್ಯ ಇರುವ ಕ್ರೀಡೆ. ಇಂತಹ ಕ್ರೀಡೆಗೆ ಮಹಿಳೆಯರು ಪ್ರವೇಶಿಸುವುದು ಎಂದರೆ ಮಾಮೂಲಿ ಸಂಗತಿಯಲ್ಲ.

ಇತ್ತ ಮನೆಯಲ್ಲಿ ಅತ್ತ ಸಮಾಜದಲ್ಲಿನ ಪರಿಸ್ಥಿತಿಗಳು ಆಕೆಯನ್ನು ಸಂಪೂರ್ಣವಾಗಿ ನಿರಾಸೆಗೆ ಗುರಿಮಾಡುತ್ತವೆ. ಆ ಕ್ರೀಡೆಗೆ ಹೋಗಲು ತಂದೆ ನಿರಾಕರಿಸುತ್ತಾರೆ. ತಂದೆಯನ್ನು ದಿಕ್ಕರಿಸಿ ಬಾಕ್ಸಿಂಗ್ ರಿಂಗ್ ನಲ್ಲಿ ಹೆಜ್ಜೆ ಇಟ್ಟ ಮೇಲೆ ಅದೆಷ್ಟೋ ಅವಮಾನಗಳನ್ನು ಭರಿಸಬೇಕಾಗುತ್ತದೆ. ಕಡೆಗೆ ಅವರು ಗುರಿಯನ್ನು ಹೇಗೆ ಮುಟ್ಟುತ್ತಾರೆ ಎಂಬುದೇ ಚಿತ್ರದ ಕಥಾಹಂದರ. (ಫಿಲ್ಮಿಬೀಟ್ ಕನ್ನಡ)

English summary
While, actress Priyanka Chopra impressed all with her power-pact performance in the film Mary Kom, actress turned enterpreneur Shilpa Shetty rather cried seeing Priyanka's latest movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada