For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಬಟ್ಟೆಯಿಂದ ಪಿರಮಿಡ್ ಕಟ್ಟಬಹುದು, ಟೆಂಟ್ ಹಾಕಬಹುದು!

  By Bharath Kumar
  |

  ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿ ಡಿಫ್ರೆಂಟ್ ಗೌನ್ ತೊಟ್ಟು ಗಮನ ಸೆಳೆದಿದ್ದ ನಟಿ ಪ್ರಿಯಾಂಕಾ ಚೋಪ್ರಾ, ಈಗ ಮತ್ತೊಮ್ಮೆ ಡ್ರೆಸ್ ವಿಚಾರಕ್ಕೆ ವಿಶ್ವಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

  ನ್ಯೂಯಾರ್ಕ್‌ ಮೂಲದ ವಸ್ತ್ರವಿನ್ಯಾಸ ಸಂಸ್ಥೆಯ ಪ್ರದರ್ಶನ ಕಾರ್ಯಕ್ರಮ 'ಮೆಟ್ ಗಾಲಾ 2017'ದಲ್ಲಿ ಪ್ರಿಯಾಂಕಾ ಚೋಪ್ರಾ ಉದ್ದನೆಯ ಮಳೆಯ ನಿಲುವಂಗಿಯಲ್ಲಿ ಕಾಣಿಸಿಕೊಂಡರು. ಇದು ಜಗತ್ತಿನ ಅತಿ ಉದ್ದನೆಯ ಟ್ರೆಂಚ್ ಕೋಟ್‌ ಎಂಬ ದಾಖಲೆ ಬರೆದಿದೆ.[ಹಾಟ್ ಬ್ಯೂಟಿ ಪ್ರಿಯಾಂಕ'ಳ ಹಾಲಿವುಡ್ 'ಬೇವಾಚ್' ಟ್ರೈಲರ್]

  ಆದ್ರೆ, ಪ್ರಿಯಾಂಕಾ ತೊಟ್ಟಿದ್ದ ಡ್ರೆಸ್ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಜೋಕ್ ಗಳು ಹರಿದಾಡುತ್ತಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಪ್ರಿಯಾಂಕಾ ಬಟ್ಟೆಯಿಂದ ಪಿರಮಿಡ್ ಕಟ್ಟಬಹುದು, ಟೆಂಟ್ ಹಾಕಬಹುದು, ಮಳೆ ಬಿದ್ರೆ ಸ್ಟೇಡಿಯಂಗೆ ಹೊದಿಸಬಹುದಂತೆ. ಅದರ ಝಲಕ್ ನೀವೇ ನೋಡಿ.....ಮುಂದೆ ಓದಿ....

  ಚಿತ್ರಕೃಪೆ: ಟ್ವಿಟ್ಟರ್

  ಪ್ರಿಯಾಂಕಾ ತೊಟ್ಟಿದ 'ಟ್ರೆಂಚ್ ಕೋಟ್‌' ಇದು

  ಪ್ರಿಯಾಂಕಾ ತೊಟ್ಟಿದ 'ಟ್ರೆಂಚ್ ಕೋಟ್‌' ಇದು

  ಇದು ಮೆಟ್ ಗಾಲಾ 2017' ಕಾರ್ಯಕ್ರಮದಲ್ಲಿ ಪ್ರಿಯಾಂಕಾ ತೊಟ್ಟಿದ್ದ 'ಟ್ರೆಂಚ್ ಕೋಟ್‌'. ರಾಲ್ಫ್ ಲಾರೆನ್ ಎಂಬುವವರು ವಿನ್ಯಾಸ ಮಾಡಿದ್ದರು.[ಪ್ರಿಯಾಂಕ ಚೋಪ್ರಾ ಸದ್ಯದಲ್ಲೇ 'ಗಗನಯಾತ್ರಿ' ಆಗ್ತಾರೆ!]

  ಪ್ರಿಯಾಂಕಾ ಕೋಟ್ ನಿಂದ ಪಿರಮಿಡ್ ಕಟ್ಟಬಹುದಂತೆ!

  ಪ್ರಿಯಾಂಕಾ ಕೋಟ್ ನಿಂದ ಪಿರಮಿಡ್ ಕಟ್ಟಬಹುದಂತೆ!

  ಪ್ರಿಯಾಂಕಾ ತೊಟ್ಟಿದ್ದ ಅತಿ ಉದ್ದನೇಯ 'ಟ್ರೆಂಚ್ ಕೋಟ್‌'ನಿಂದ ಈಜಿಫ್ಟ್ ನ ಪಿರಮಿಡ್ ನಿರ್ಮಾಣ ಮಾಡಬಹುದಂತೆ. ಗ್ರಾಫಿಕ್ಸ್ ಬಳಿಸಿ ಅದನ್ನ ಹಲವರು ನಿರ್ಮಾಣ ಮಾಡಿದ್ದಾರೆ ನೋಡಿ.[ಪ್ರಿಯಾಂಕ ಚೋಪ್ರಾ ಈಗ ವಿಶ್ವದ 2ನೇ ಅತ್ಯಂತ ಸುಂದರ ಮಹಿಳೆ]

  ಮಳೆ ಬಿದ್ರೆ ಸ್ಡೇಡಿಯಂಗೆ ಹೊದಿಸಬಹುದು!

  ಮಳೆ ಬಿದ್ರೆ ಸ್ಡೇಡಿಯಂಗೆ ಹೊದಿಸಬಹುದು!

  ಸಾಮಾನ್ಯವಾಗಿ ಸ್ಡೇಡಿಯಂಗಳಲ್ಲಿ ಮಳೆ ಬಿದ್ರೆ ಕ್ರೀಡಾಂಗಣವೆಲ್ಲ ನೆನೆಯುತ್ತೆ. ಇಲ್ಲ ಪಿಚ್ ಮಾತ್ರಕ್ಕೆ ಕವರ್ ನಿಂದ ಹೊದಿಸುತ್ತಾರೆ. ಆದ್ರೆ, ಪಿಗ್ಗಿಯ ಈ ಕೋಟ್ ನಿಂದ ಇಡೀ ಸ್ಡೇಡಿಯಂ ಪೂರ್ತಿ ಮುಚ್ಚಬಹುದಂತೆ.['ಆಸ್ಕರ್ ಪಾರ್ಟಿ'ಯಲ್ಲಿ ದೀಪಿಕಾ ಮತ್ತು ಪ್ರಿಯಾಂಕ: ಮಿಸ್ ಮಾಡದೇ ನೋಡಿ]

  ಶಶಿಕಲಾ ಶಪಥ ಮಾಡಿದ್ದು ಇದೇ ಕೋಟ್ ಮೇಲೆ!

  ಶಶಿಕಲಾ ಶಪಥ ಮಾಡಿದ್ದು ಇದೇ ಕೋಟ್ ಮೇಲೆ!

  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಮಾಧಿ ಮೇಲೆ ಕೈಯಿಟ್ಟು ಶಶಿಕಲಾ ಶಪಥ ಮಾಡಿದ್ದನ್ನ ಯಾರು ಮರೆತಿಲ್ಲ. ಆದ್ರೆ, ಪ್ರಿಯಾಂಕಾ ಅವರ ಕೋಟ್ ಟ್ರೆಂಡಿಂಗ್ ಹೇಳುತ್ತಿದೆ, ಶಶಿಕಲಾ ಶಪಥ ಮಾಡಿದ್ದು ಪ್ರಿಯಂಕಾ ಅವರ ಈ ಟ್ರೆಂಚ್ ಕೋಟ್ ಮೇಲೆ ಆಣೆ ಇಟ್ಟಂತೆ.['ಆಸ್ಕರ್' ವೇದಿಕೆಯಲ್ಲಿ ಎಲ್ಲರ ಚಿತ್ತ 'ಪ್ರಿಯಾಂಕ'ಳತ್ತ]

  ನಿಮ್ಮ ಕಾರನ್ನೇ ಕವರ್ ಮಾಡಬಹುದು!

  ನಿಮ್ಮ ಕಾರನ್ನೇ ಕವರ್ ಮಾಡಬಹುದು!

  ನಿಮ್ಮ ಕಾರ್ ಮಳೆಯಲ್ಲಿ, ಬಿಸಿಲಿನಲ್ಲಿ ನಿಂತಿದ್ರೆ, ಪ್ರಿಯಾಂಕಾ ಅವರ ಟ್ರೆಂಚ್ ಕೋಟ್ ನಿಂದ ಕಾರನ್ನ ಮುಚ್ಚಬಹುದಂತೆ.[ಪ್ರತಿಷ್ಠಿತ 'ಪೀಪಲ್ಸ್ ಚಾಯ್ಸ್ ಅವಾರ್ಡ್' ಮುಡಿಗೇರಿಸಿಕೊಂಡ ಪ್ರಿಯಾಂಕ ಚೋಪ್ರಾ]

  'ದಂಗಾಲ್' ಕುಸ್ತಿ ಮಾಡಿದ್ದು ಇಲ್ಲೇ?

  'ದಂಗಾಲ್' ಕುಸ್ತಿ ಮಾಡಿದ್ದು ಇಲ್ಲೇ?

  ಅಮೀರ್ ಖಾನ್ ಅಭಿನಯದ 'ದಂಗಾಲ್' ಚಿತ್ರದಲ್ಲಿ ಕುಸ್ತಿ ಮಾಡುವ ಅಮೀರ್ ಮತ್ತು ಮಕ್ಕಳು, ಪ್ರಿಯಾಂಕಾ ಅವರ ಕೋಟ್ ಮೇಲೆ ತರಬೇತಿ ಪಡೆದುಕೊಂಡಿದ್ದರಂತೆ.

  ಪಿಕ್ನಿಕ್ ಬ್ಲ್ಯಾಂಕಟ್ ಮಾಡ್ಕೊಬಹುದು!

  ಪಿಕ್ನಿಕ್ ಬ್ಲ್ಯಾಂಕಟ್ ಮಾಡ್ಕೊಬಹುದು!

  ಪ್ರಿಯಾಂಕಾ ಚೋಪ್ರಾ ತೊಟ್ಟಿದ್ದ ಕೋಟ್ ನಿಂದ, ಪಾರ್ಕ್ ನಲ್ಲಿ ಕುಳಿತುಕೊಳ್ಳಲು ಪಿಕ್ನಿಕ್ ಬ್ಲ್ಯಾಂಕಟ್ ಮಾಡ್ಕೊಬಹುದು.

  ಟೆಂಟ್ ಕಟ್ಟಿಕೊಳ್ಳಬಹುದು!

  ಟೆಂಟ್ ಕಟ್ಟಿಕೊಳ್ಳಬಹುದು!

  ಪಿಗ್ಗಿಯ ಈ ಕೋಟ್ ನಿಂದ ಟೆಂಟ್ ಕೂಡ ಕಟ್ಟಿಕೊಳ್ಳುಬಹುದು. ಹೀಗೆ, ಪ್ರಿಯಾಂಕಾ ಅವರ ಈ ಹೊಸ ಡ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಟ್ರೋಲ್ ಆಗುತ್ತಿದೆ.

  English summary
  Bollywood Actress Priyanka Chopra Posted an album of her best picks of the Photoshop Battle on her Ralph Lauren trench coat dress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X