Just In
Don't Miss!
- Sports
ಐಪಿಎಲ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್
- News
ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಶೇ.81ರಷ್ಟು ಪರಿಣಾಮಕಾರಿ
- Lifestyle
ದಿನ ಭವಿಷ್ಯ: ಗುರುವಾರದ ರಾಶಿಫಲ ಹೇಗಿದೆ ನೋಡಿ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Automobiles
31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಿಯಾಂಕಾ ಚೋಪ್ರಾಗೆ 'ಒಳ ಉಡುಪು ತೋರಿಸು' ಎಂದಿದ್ದ ನಿರ್ದೇಶಕ
ನಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ದ ಸ್ಟಾರ್ ನಟಿ. ತಮಿಳಿನಿಂದ ನಟನಾ ವೃತ್ತಿ ಆರಂಭಿಸಿದ ಪ್ರಿಯಾಂಕಾ ಚೋಪ್ರಾ ಇಂದು ಏರಿರುವ ಎತ್ತರ ಸಾಮಾನ್ಯದಲ್ಲ.
ಬಹುತೇಕ ನಟಿಯರಂತೆ ಪ್ರಿಯಾಂಕಾ ಚೋಪ್ರಾ ಸಹ ಆರಂಭದ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಚಿತ್ರರಂಗದಲ್ಲಿ ಎದುರಿಸಿದವರೇ. ಆದರೆ ಎಲ್ಲವನ್ನೂ ಮೆಟ್ಟಿನಿಂತು ಇಂದು ದೊಡ್ಡ ಎತ್ತರಕ್ಕೆ ಏರಿದ್ದಾರೆ.
ಇದೀಗ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಘಟನೆಗಳ ಸಂಗ್ರಹ 'ಅನ್‌ಫಿನಿಶ್ಡ್' ಹೆಸರಿನ ಪುಸ್ತಕವನ್ನು ಪ್ರಿಯಾಂಕಾ ಚೋಪ್ರಾ ಬರೆದಿದ್ದು, ನಿರ್ದೇಶಕನೊಬ್ಬ ತಮ್ಮ ಬಳಿ ಕೆಟ್ಟದಾಗಿ ನಡೆದುಕೊಂಡ ಬಗ್ಗೆ ಪ್ರಿಯಾಂಕಾ ಚೋಪ್ರಾ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಸಿನಿಮಾವೊಂದಕ್ಕೆ ತುಸು ಗ್ಲಾಮರಸ್ ಆದ ಹಾಡೊಂದರ ಚಿತ್ರೀಕರಣದಲ್ಲಿ ತೊಡಗಿದ್ದರಂತೆ ಪ್ರಿಯಾಂಕಾ. ಹಾಡು ಉದ್ದವಾಗಿದ್ದರಿಂದ ಹಲವು ಉಡುಪುಗಳನ್ನು ಹಾಡಿನಲ್ಲಿ ಧರಿಸಬೇಕಿತ್ತು ಪ್ರಿಯಾಂಕಾ. ಹಾಗಾಗಿ 'ನಾನು ಒಂದರ ಮೇಲೆ ಮತ್ತೊಂದು ಬಟ್ಟೆ ಹಾಕಿಕೊಳ್ಳಲೇ' ಎಂದು ನಿರ್ದೇಶಕರನ್ನು ಕೇಳಿದ್ದಾರೆ ಪ್ರಿಯಾಂಕಾ.

ಫ್ಯಾಷನ್ ಡಿಸೈನರ್ ಬಳಿ ಮಾತನಾಡಿ ಒಪ್ಪಿಸಿದ ಪ್ರಿಯಾಂಕಾ
ಇದಕ್ಕೆ ಉತ್ತರಿಸಿದ ಆ ನಿರ್ದೇಶಕ, 'ಸಿನಿಮಾದ ಸ್ಸ್ಟೈಲಿಷ್ ಅಥವಾ ಫ್ಯಾಷನ್ ಡಿಸೈನರ್ ಬಳಿ ಮಾತನಾಡಿ' ಎಂದಿದ್ದಾರೆ. ಕೂಡಲೇ ಪ್ರಿಯಾಂಕಾ ಚೋಪ್ರಾ ಫ್ಯಾಷನ್ ಡಿಸೈನರ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆತನೂ ಒಪ್ಪಿಕೊಂಡಿದ್ದಾನೆ. ಪ್ರಿಯಾಂಕಾ ಮೊಬೈಲ್ ಅನ್ನು ಆ ನಿರ್ದೇಶಕನಿಗೆ ಮಾತನಾಡಲು ಕೊಟ್ಟು ಅಲ್ಲಿಯೇ ನಿಂತಿದ್ದಾರೆ.

'ಒಳ ಉಡುಪು ಕಾಣಬೇಕು' ಅಷ್ಟೆ ಎಂದಿದ್ದ ನಿರ್ದೇಶಕ
ಫೋನ್ ಪಡೆದ ನಿರ್ದೇಶಕ, 'ಆಕೆ ಏನಾದರೂ ಮಾಡಿಕೊಳ್ಳಲಿ ಆದರೆ ಆಕೆಯ ಚಡ್ಡಿ (ಒಳ ಉಡುಪು) ಕ್ಯಾಮೆರಾಗೆ ಕಾಣಬೇಕಷ್ಟೆ, ಜನರೇನು ಸುಮ್ಮನೆ ಸಿನಿಮಾ ನೋಡಲು ಬರುತ್ತಾರಾ' ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಸರಿಪಡಿಸಿದರು: ಪ್ರಿಯಾಂಕಾ
ಇದು ಪ್ರಿಯಾಂಕಾ ಚೋಪ್ರಾಗೆ ತೀವ್ರ ಆಘಾತ ತಂದಿದೆ. ಕೂಡಲೇ ಆ ಸಿನಿಮಾದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಪ್ರಿಯಾಂಕಾ ಚೋಪ್ರಾ. ಆ ನಂತರ ಅದೇ ನಿರ್ದೇಶಕ ಬೇರೆ ಸಿನಿಮಾದ ಸೆಟ್‌ನಲ್ಲಿ ಪ್ರಿಯಾಂಕಾರನ್ನು ಭೇಟಿಯಾಗಿ ಮನವಿ ಮಾಡಿದರಂತೆ. ಕೊನೆಗೆ ಸಲ್ಮಾನ್ ಖಾನ್ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಿದರಂತೆ.

ಆತನ ಯೋಚನೆ ನನಗೆ ಹಿಡಿಸಲಿಲ್ಲ: ಪ್ರಿಯಾಂಕಾ ಚೋಪ್ರಾ
'ನನಗೆ ಗ್ಲಾಮರಸ್ ಉಡುಗೆ ತೊಡುವುದು ಕಷ್ಟವೇನಲ್ಲ. ಆದರೆ ಆ ನಿರ್ದೇಶಕನ ಆಲೋಚನೆ ನನಗೆ ಇಷ್ಟವಾಗಿರಲಿಲ್ಲ. ಅವನ ಮಾತುಗಳು ನನಗೆ ಸ್ವೀಕಾರಾರ್ಹವಲ್ಲ' ಎಂದು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

ಸ್ತನಗಳ ಗಾತ್ರ ದಪ್ಪ ಮಾಡಿಕೊ ಎಂದಿದ್ದ ನಿರ್ದೇಶಕ
ಮತ್ತೊಬ್ಬ ನಿರ್ದೇಶಕ 'ನಿನ್ನ ಸ್ತನಗಳ ಗಾತ್ರವನ್ನು ದಪ್ಪ ಮಾಡಿಕೊ' ಎಂದು ಪ್ರಿಯಾಂಕಾ ಚೋಪ್ರಾಗೆ ಸಲಹೆ ನೀಡಿದ್ದನ್ನು ಸಹ ಪ್ರಿಯಾಂಕಾ ಚೋಪ್ರಾ ತಮ್ಮ ಪುಸ್ತಕದಲ್ಲಿ ನಮೂದಿಸಿದ್ದಾರೆ. ತಾವು ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದು ಏಕೆ ಎಂಬುದನ್ನೂ ಬರೆದುಕೊಂಡಿದ್ದಾರೆ.