For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ಕೈಯಲ್ಲಿರೋ 'ಕರಿಮಣಿ' ರಹಸ್ಯ ಬಹಿರಂಗ

  By Bharath Kumar
  |
  ಕರಿಮಣಿ ಬಗ್ಗೆ ಅಂತೂ ಇಂತೂ ಸತ್ಯ ಹೇಳಿದ ಪ್ರಿಯಾಂಕಾ ಚೋಪ್ರಾ | Oneindia Kannada

  ಕಳೆದ ಎರಡ್ಮೂರು ದಿನಗಳಿಂದ ಪ್ರಿಯಾಂಕಾ ಚೋಪ್ರಾ ಮದುವೆ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಪ್ರಿಯಾಂಕಾ ಗೌಪ್ಯವಾಗಿ ಮದುವೆ ಆಗಿದ್ದಾರೆ. ಕೈಯಲ್ಲಿ ಮಂಗಳಸೂತ್ರವನ್ನ ಕಟ್ಟಿಕೊಂಡಿದ್ದಾರೆ. ಮದುವೆ ವಿಚಾರವನ್ನ ಸೀಕ್ರೆಟ್ ಆಗಿ ಇಟ್ಟಿದ್ದಾರೆ ಎಂಬ ಸುದ್ದಿಗಳು ಚರ್ಚೆಯಾಗುತ್ತಿದೆ.

  ಇದಕ್ಕೆ ಕಾರಣ ಪ್ರಿಯಾಂಕಾ ಕೈಯಲ್ಲಿ ಕೊಟ್ಟಿಕೊಂಡಿದ್ದ ಕರಿಮಣಿ. ಇದನ್ನ ಗಮನಿಸಿದ ಕೆಲವು ಮಂದಿ ಇದು ಮಂಗಳಸೂತ್ರ ಎಂದು ಬಿಂಬಿಸಿದರು. ಇದರಿಂದ ಸುದ್ದಿ ವೈರಲ್ ಆಗಿ ಮದುವೆ ಆಗಿಯೇಬಿಟ್ಟಿದ್ದಾರೆ ಎನ್ನೋ ಮಟ್ಟಿಗೆ ವರದಿಯಾಗಿವೆ.

  ಏನು.? ನಟಿ ಪ್ರಿಯಾಂಕಾ ಛೋಪ್ರಾ ಗುಟ್ಟಾಗಿ ಮದುವೆ ಆದ್ರಾ.?ಏನು.? ನಟಿ ಪ್ರಿಯಾಂಕಾ ಛೋಪ್ರಾ ಗುಟ್ಟಾಗಿ ಮದುವೆ ಆದ್ರಾ.?

  ಆದ್ರೆ, ಈ ಎಲ್ಲ ಅಂತೆ-ಕಂತೆಗಳಿಗೆ ಬಾಲಿವುಡ್ ನಟಿ ಪಿಗ್ಗಿ ತೆರೆ ಎಳೆದಿದ್ದಾರೆ. ಮದುವೆ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಬ್ರೇಕ್ ಹಾಕಿದ್ದಾರೆ. ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ''ಮದುವೆ ಬಗ್ಗೆ ಊಹೆಗಳು ಹೆಚ್ಚಾಗಿವೆ. ದುಷ್ಟ ವ್ಯಕ್ತಿಗಳ ದೃಷ್ಟಿ ಬೀಳಬಾರದೆಂದು ಧರಿಸಿರುವ ಕರಿಮಣಿ ಸರ. ನಾನು ಯಾವಾಗ ಮದುವೆ ಆಗ್ತೀನಿ ಅಂತ ಖಂಡಿತ ತಿಳಿಸುತ್ತೇನೆ. ಇದನ್ನ ರಹಸ್ಯವಾಗಿಡುವುದೇನು ಇಲ್ಲ'' ಎಂದಿದ್ದಾರೆ.

  10 ವರ್ಷದ ನಂತರ ಮತ್ತೆ ಒಂದಾದ ಸಲ್ಮಾನ್-ಪ್ರಿಯಾಂಕಾ10 ವರ್ಷದ ನಂತರ ಮತ್ತೆ ಒಂದಾದ ಸಲ್ಮಾನ್-ಪ್ರಿಯಾಂಕಾ

  ಸದ್ಯ, ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಸಲ್ಮಾನ್ ಖಾನ್ ಅವರ 'ಭಾರತ್' ಸಿನಿಮಾ ಮೂಲಕ ಮತ್ತೆ ಬಾಲಿವುಡ್ ಗೆ ಮರು ಪ್ರವೇಶ ಮಾಡುತ್ತಿದ್ದಾರೆ. ಕೊನೆಯದಾಗಿ 2016ರಲ್ಲಿ ಬಿಡುಗಡೆಯಾಗಿದ್ದ 'ಜೈ ಗಂಗಾಜಲ್' ಚಿತ್ರದ ನಂತರ ಯಾವುದೇ ಭಾರತೀಯ ಸಿನಿಮಾಗಳಲ್ಲಿ ಪ್ರಿಯಾಂಕಾ ಅಭಿನಯಿಸಿರಲಿಲ್ಲ.

  English summary
  Bollywood actress Priyanka Chopra denies getting secretly marries, assures fans her wedding will not be a secret affair.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X