For Quick Alerts
  ALLOW NOTIFICATIONS  
  For Daily Alerts

  'ನಾನು ನಿಕ್ ಜೋನಸ್ ಗೆ ಉತ್ತಮ ಪತ್ನಿ ಅಲ್ಲ': ಪ್ರಿಯಾಂಕಾ ಚೋಪ್ರಾ

  |

  ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಲ್ಲಿ ಟಾಪ್ ನಟಿಯಾಗಿ ಈಗ ಮದುವೆಯಾಗಿ ನ್ಯೂಯಾರ್ಕ್ ನಲ್ಲಿ ಸೆಟಲ್ ಆಗಿದ್ದಾರೆ. ಕಳೆದ ವರ್ಷ ನಿಕ್ ಜೋನಸ್ ಜೊತೆ ಹಸೆಮಣೆ ಏರಿದ್ದ ಪ್ರಿಯಾಂಕಾ ಬಾಲಿವುಡ್ ನಿಂದ ದೂರವಾಗಿ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ.

  ಹಾಲಿವುಡ್ ನ ಬ್ಯಾಕ್ ಕು ಬ್ಯಾಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕ ತನ್ನ ಪತಿಯ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಭಿನ್ನ ಗೆಟಪ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದಾ ಸಂಚಲನ ಎಬ್ಬಿಸುತ್ತಿರುವ ಪ್ರಿಯಾಂಕಾ ಈಗ ನಿಕ್ ಜೋನಸ್ ಗೆ ನಾನು ಒಳ್ಳೆಯ ಪತ್ನಿ ಅಲ್ಲ ಅಂತ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  ಏನು.. ನಟಿ ಪ್ರಿಯಾಂಕಾ ಚೋಪ್ರಾ ಗರ್ಭಿಣಿ ಅಂತೆ.! ಹೌದಾ.?

  ಪ್ರಿಯಾಂಕ - ನಿಕ್ ಒಬ್ಬರನ್ನೊಬ್ಬರು ತುಂಬಾ ಇಷ್ಟಪಟ್ಟ ಮೇಲೆಯೇ ಇಬ್ಬರು ಮದುವೆಯಾಗಿದ್ದಾರೆ. ಅಂದಮೇಲೆ ಪಿಗ್ಗಿ ಯಾಕೆ ಹೀಗೆ ಹೇಳುತ್ತಿದ್ದಾರೆ ಅಂತೀರಾ. ಅದಕ್ಕೆ ಉತ್ತರ ಪ್ರಿಯಾಂಕಾ ಅವರೇ ನೀಡಿದ್ದಾರೆ.

  ಪ್ರಿಯಾಂಕಾ ಅವರಿಗೆ ಅಡುಗೆ ಮಾಡಲು ಬರುವುದಿಲ್ಲವಂತೆ. ಹಾಗಾಗಿ ಪತಿ ನಿಕ್ ಜೋನಸ್ ಗೆ ಅಡುಗೆ ಮಾಡಿ ಬಡಿಸುವುದಿಲ್ಲವಂತೆ. ನಿಕ್ ತಾಯಿ ಮಾಡಿದ ಅಡುಗೆಯನ್ನೆ ತಿನ್ನುತ್ತಾರಂತೆ. ಆದ್ರೆ ಅವರ ತಾಯಿ ಮಾಡಿದ ಅಡುಗೆ ಪ್ರಿಯಾಂಕಾ ಚೋಪ್ರಾ ಗೆ ಅಷ್ಟೊಂದು ಇಷ್ಟವಾಗುವುದಿಲ್ಲವಂತೆ. ಈ ವಿಚಾರದಲ್ಲಿ 'ನಿಕ್ ಪಾಲಿಗೆ ನಾನು ಭಯಾನಕ ಪತ್ನಿ' ಅಂತ ಹೇಳಿಕೊಂಡಿದ್ದಾರೆ.

  ಸದ್ಯ ಪ್ರಿಯಾಂಕಾ 'ಈಸ್ ನಾಟ್ ಇಟ್ ರೋಮ್ಯಾಟಿಂಕ್' ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಅಲ್ಲದೆ 'ದಿ ಸ್ಕೈ ಈಸ್ ಪಿಂಕ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  English summary
  Priyanka Chopra said she is terrible wife to Nick Jonas because she does not know how to cook.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X