For Quick Alerts
  ALLOW NOTIFICATIONS  
  For Daily Alerts

  ಬಟ್ಟೆ ಕದ್ದು ತಪ್ಪೊಪ್ಪಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ: ಫೋಟೋ ವೈರಲ್

  |

  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಪತಿ ನಿಕ್ ಜೋನಸ್ ಜೊತೆ ಕಾಲಕಳೆಯುತ್ತಿರುವ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ ಪತಿಯ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಆದರೀಗ ಪ್ರಿಯಾಂಕಾ ಬಟ್ಟೆ ಕದ್ದು ತಪ್ಪೊಪ್ಪಿಕೊಂಡಿರುವ ಪೋಸ್ಟ್ ಹಾಕಿದ್ದಾರೆ.

  ಪ್ರಿಯಾಂಕಾ ಚೋಪ್ರಾ ಬಟ್ಟೆ ಕದ್ದಿದ್ದಾರಾ ಅಂತ ಅಚ್ಚರಿ ಪಡಬೇಡಿ. ಪ್ರಿಯಾಂಕಾ ಬಟ್ಟೆ ಕದ್ದಿರುವುದು ನಿಜ ಆದರೆ ಅದು ಅವರ ಪತಿಯ ಬಟ್ಟೆ. ಹೌದು, ಪತಿ ನಿಕ್ ಜೋನಸ್ ಬಟ್ಟೆಯನ್ನು ಕದ್ದು ಹಾಕುವುದು ಎಂದರೆ ಪ್ರಿಯಾಂಕಾಗೆ ತುಂಬಾ ಇಷ್ಟವಂತೆ. ಹಾಗಾಗಿ ಪತಿಯ ಬಟ್ಟೆಯನ್ನು ಕದ್ದು ಧರಿಸಿ, ಮುದ್ದಿನ ನಾಯಿ ಡಯಾನಾ ಜೊತೆ ಜರ್ಮನಿ ಬೀದಿಯಲ್ಲಿ ವಾಕ್ ಮಾಡುತ್ತಿದ್ದಾರೆ.

  ಅಮೆರಿಕದಲ್ಲಿ ಹೊಸ ದಾಖಲೆ ಬರೆದ ಪ್ರಿಯಾಂಕಾ ಚೋಪ್ರಾ ಪುಸ್ತಕ!

  ಪತಿಯ ವೈಟ್ ಅ್ಯಂಡ್ ವೈಟ್ ಬಟ್ಟೆ ಕದ್ದು ಧರಿಸಿದ್ದಾರೆ. ಬಿಳಿ ಬಣ್ಣದ ಜಾಕೆಟ್, ಬಿಳಿ ಬಣ್ಣದ ಟ್ರ್ಯಾಕ್ ಪ್ಯಾಂಟ್, ಕೈಗೆ ಗ್ಲೌಸ್, ಕ್ಯಾಪ್, ಮಾಸ್ಕ್ ಧರಿಸಿ ಜರ್ಮನಿಯಲ್ಲಿ ಓಡಾಡುತ್ತಿದ್ದಾರೆ. ಇದನ್ನು ನೋಡಿದ್ರೆ ಮುಂಬರುವ ಚಳಿಗಾಲಕ್ಕೆ ಪ್ರಿಯಾಂಕಾ ಈಗಲೇ ಸಿದ್ಧರಾದಂತೆ ಕಾಣುತ್ತಿದೆ. ಫೋಟೋ ಶೇರ್ ಮಾಡಿ 'ನಿನ್ನ ಬಟ್ಟೆ ಕದಿಯುವುದು ನನಗೆ ತುಂಬ ಇಷ್ಟ' ಎಂದು ಬರೆದುಕೊಂಡಿದ್ದಾರೆ.

  ಒಂದೇ ಬಟ್ಟೆಯನ್ನು ಗಂಡ-ಹೆಂಡತಿ ಇಬ್ಬರೂ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಂದ್ಹಾಗೆ ಪ್ರಿಯಾಂಕಾ ಸದ್ಯ ಜರ್ಮನಿಯಲ್ಲಿದ್ದು ಮುಂಬರುವ ಹಾಲಿವುಡ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಪ್ರಿಯಾಂಕಾ 'ಮ್ಯಾಟ್ರಿಕ್ಸ್ 4' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಪ್ರಿಯಾಂಕಾ ಚೋಪ್ರಾ ಮುಂದಿನ ಸಿನಿಮಾದ ಬಗ್ಗೆ ಹೆಚ್ಚು ವಿಚಾರ ಬಿಟ್ಟುಕೊಟ್ಟಿಲ್ಲ. ಈ ಸಿನಿಮಾ ಜೊತೆಗೆ ಪ್ರಿಯಾಂಕಾ ವೈಟ್ ಟೈಗರ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಅಭಿನಯದ ಜೊತೆಗೆ ಪ್ರಿಯಾಂಕಾ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ.

  English summary
  Bollywood actress Priyanka Chopra says She loves to steal husband Nick Jonas clothes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X