For Quick Alerts
  ALLOW NOTIFICATIONS  
  For Daily Alerts

  ಮಗುವಿನ ಚಿತ್ರ ಹಂಚಿಕೊಂಡು ಸತ್ಯ ಹೊರಹಾಕಿದ ಪ್ರಿಯಾಂಕಾ ಚೋಪ್ರಾ

  |

  ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಅನ್ನು ವಿವಾಹವಾಗಿ ವಿದೇಶದಲ್ಲಿಯೇ ಸೆಟಲ್ ಆಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಈ ದಂಪತಿ ಪೋಷಕರಾಗಿದ್ದಾರೆ.

  ಸೆರೊಗಸಿ ಮಾದರಿ ಮೂಲಕ ಪ್ರಿಯಾಂಕಾ ಹಾಗೂ ನಿಕ್ ದಂಪತಿ ತಂದೆ ತಾಯಿ ಆಗಿದ್ದಾರೆ. ತಾವು ಸೆರೊಗಸಿ ಮಾದರಿ ಮೂಲಕ ತಾಯಿಯಾದ ವಿಷಯವನ್ನು ಪ್ರಿಯಾಂಕಾ ಚೋಪ್ರಾ ಜನವರಿ 15 ರಂದು ಘೋಷಿಸಿದ್ದರು. ಇದೀಗ ಮೊದಲ ಬಾರಿಗೆ ತಮ್ಮ ಮಗಳ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಮಗಳಿಗೆ ಭಾರತೀಯ ಹೆಸರಿಟ್ಟ ಪ್ರಿಯಾಂಕಾ-ನಿಕ್ಮಗಳಿಗೆ ಭಾರತೀಯ ಹೆಸರಿಟ್ಟ ಪ್ರಿಯಾಂಕಾ-ನಿಕ್

  ಮಗಳನ್ನು ಎದೆಗೆ ಅಪ್ಪಿಕೊಂಡಿರುವ ಚಿತ್ರವನ್ನು ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಮಗು ಎದುರಿಸಿದ ಸಂಕಷ್ಟ, ತಾವು ಅನುಭವಿಸಿದ ಆತಂಕಕಗಳ ಬಗ್ಗೆಯೂ ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  ''ಕಳೆದ ಕೆಲ ದಿನಗಳ ನಾವು ತೀವ್ರ ಭಾವತೀವ್ರತೆಯ ಏರು-ಇಳುವಿನ ಹಾದಿಯಲ್ಲಿ ಪಯಣಿಸಿದ್ದೇವೆ. ಅದನ್ನು ಈ ತಾಯಂದಿರ ದಿನದಂದು ನೆನಪು ಮಾಡಿಕೊಳ್ಳುತ್ತಿದ್ದೇನೆ. ನಾನು ಅನುಭವಿಸಿದ ಕಷ್ಟವನ್ನು ಸಾಕಷ್ಟು ಮಂದಿ ಅನುಭವಿಸಿರುತ್ತಾರೆ'' ಎಂದು ಬರೆದುಕೊಂಡಿದ್ದಾರೆ ಪ್ರಿಯಾಂಕಾ ಚೋಪ್ರಾ.

  ''ಕಳೆದ 100 ದಿನಗಳಿಂದ ಐಸಿಯುನಲ್ಲಿದ್ದ ನನ್ನ ಪುಟ್ಟ ಮಗಳು ಕೊನೆಗೂ ಮನೆಗೆ ಬಂದಿದ್ದಾಳೆ. ಈ ರೀತಿಯ ಸನ್ನಿವೇಶದಲ್ಲಿ ಪ್ರತಿ ಕುಟುಂಬದ ಪಯಣ ಬೇರೆಯದ್ದೇ ರೀತಿಯದ್ದಾಗಿರುತ್ತದೆ. ಈ ರೀತಿಯ ಸನ್ನಿವೇಶಗಳ ಪರಸ್ಪರ ನಂಬಿಕೆ, ಧೈರ್ಯವನ್ನು ಬೇಡುತ್ತವೆ. ಕಳೆದ ಕೆಲವು ತಿಂಗಳುಗಳು ನಮಗೆ ಬಹಳ ಸವಾಲಿನದ್ದಾಗಿದ್ದವು. ಪ್ರತಿ ನಿಮಿಷ, ಕ್ಷಣ ನಮಗೆ ಬಹಳ ಕಠಿಣವಾಗಿದ್ದವು ಮತ್ತು ಬಹಳ ಪ್ರಾಮುಖ್ಯತೆಯಿಂದ ಕೂಡಿದ್ದವು'' ಎಂದಿದ್ದಾರೆ ಪ್ರಿಯಾಂಕಾ.

  ''ನಮ್ಮ ಪುಟ್ಟ ಮಗಳು ಕೊನೆಗೂ ಮನೆಗೆ ಬಂದಿರುವುದು ನಮಗೆ ಅತೀವ ಸಂತಸ ತಂದಿದೆ. ಲಾಸ್ ಎಂಜಲ್ಸ್‌ನ ರಾಡಿ ಚಿಲ್ಡಡ್ರನ್ಸ್ ಲಾ ಜೊಲ್ಲಾ ಹಾಗೂ ಸೆಡರ್ ಸಿನೈನ ಪ್ರತಿಯೊಬ್ಬ ವೈದ್ಯರಿಗೂ, ದಾದಿಯರಿಗೂ, ತಜ್ಞರಿಗೆ ಧನ್ಯವಾದ ಹೇಳುತ್ತೇನೆ. ಇವರು ನಿಸ್ವಾರ್ಥಿಗಳಾಗಿ ನಮಗೆ ಸಹಾಯ ಮಾಡಿದರು'' ಎಂದು ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ ಪ್ರಿಯಾಂಕಾ.

  ''ಮಗಳು ಮನೆಗೆ ಬಂದಾಗಿದೆ. ಈಗ ನಮ್ಮ ಎರಡನೇ ಅಧ್ಯಾಯ ಪ್ರಾರಂಭವಾಗುತ್ತದೆ. ನಮ್ಮ ಮಗಳು ಬಹಳ ಗಟ್ಟಿಗಿತ್ತಿ. ಅಪ್ಪ-ಅಮ್ಮನಾದ ನಾವು ಆಕೆಯನ್ನು ಬಹಳ ಇಷ್ಟಪಡುತ್ತೇವೆ. ನನ್ನ ಜೀವನದಲ್ಲಿ ಬಂದ ಎಲ್ಲ ತಾಯಂದಿರಿಗೂ, ಕೇರ್‌ ಟೇಕರ್‌ಗಳಿಗೂ ತಾಯಂದಿರ ದಿನದ ಶುಭಾಶಯಗಳು'' ಎಂದಿರುವ ಪ್ರಿಯಾಂಕಾ, ಪತಿ ನಿಕ್ ಜೋನಸ್‌ ಕುರಿತು, ''ನನ್ನನ್ನು ಅಮ್ಮನನ್ನಾಗಿ ಮಾಡಿದ್ದಕ್ಕೆ ಧನ್ಯವಾದ'' ಎಂದಿದ್ದಾರೆ.

  English summary
  Priyanka Chopra shared her daughter's picture on Instagram. She said her daughter is in NICU for last 100 days.
  Monday, May 9, 2022, 11:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X