For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕ ಚೋಪ್ರಾ ಸದ್ಯದಲ್ಲೇ 'ಗಗನಯಾತ್ರಿ' ಆಗ್ತಾರೆ!

  By Suneel
  |

  ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಅಂಗಳದಲ್ಲೂ ತನ್ನ ಪ್ರಭಾವ ಬೀರಿರುವ ನಟಿ ಪ್ರಿಯಾಂಕ ಚೋಪ್ರಾ 2014 ರ 'ಮೇರಿ ಕೋಮ್' ಚಿತ್ರದ ನಂತರ ಬಿ ಟೌನ್ ನಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಕಳೆದ ಮೂರು ವರ್ಷಗಳಿಂದ ಪ್ರಿಯಾಂಕ ಚೋಪ್ರಾ ಮುಖ್ಯ ಭೂಮಿಕೆಯ ಚಿತ್ರಗಳನ್ನು ನೋಡದ ಬಾಲಿವುಡ್ ಸಿನಿಪ್ರಿಯರ ನಿರಾಸೆಗೆ ಸದ್ಯದಲ್ಲೇ ಬ್ರೇಕ್ ಬೀಳಲಿದೆ.[ಪ್ರಿಯಾಂಕ ಚೋಪ್ರಾ ಈಗ ವಿಶ್ವದ 2ನೇ ಅತ್ಯಂತ ಸುಂದರ ಮಹಿಳೆ]

  ಅಂದಹಾಗೆ ಈ ಹಿಂದೆ ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕೋಮ್ ಜೀವನ ಚರಿತ್ರೆ ಆಧರಿಸಿದ ಚಿತ್ರದಲ್ಲಿ ನಟಿಸಿ ಪ್ರಿಯಾಂಕ ಚೋಪ್ರಾ ಎಲ್ಲರ ಗಮನ ಸೆಳೆದಿದ್ದರು. ಈಗ ಮತ್ತೆ ಭಾರತದ ಇನ್ನೊಬ್ಬರು ಸಾಹಸಿ ಮಹಿಳೆಯ ಜೀವನ ಚರಿತ್ರೆ ಆಧರಿಸಿದ ಚಿತ್ರದಲ್ಲಿ ನಟಿಸಲಿದ್ದಾರೆ ಬಾಲಿವುಡ್ ಹಾಟ್ ಬ್ಯೂಟಿ ಪ್ರಿಯಾಂಕ ಚೋಪ್ರಾ. ಇನ್ನೊಂದು ವಿಶೇಷ ಅಂದ್ರೆ ಪಿಗ್ಗಿ ತಮ್ಮ ಹೊಸ ಸಿನಿಮಾದಲ್ಲಿ ಗಗನಯಾತ್ರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಸಿನಿಮಾ ಯಾವುದು ಗೊತ್ತಾ?..

  ಕಲ್ಪನಾ ಚಾವ್ಲಾ ಬಯೋಪಿಕ್ ನಲ್ಲಿ ಪ್ರಿಯಾಂಕ ಚೋಪ್ರಾ

  ಕಲ್ಪನಾ ಚಾವ್ಲಾ ಬಯೋಪಿಕ್ ನಲ್ಲಿ ಪ್ರಿಯಾಂಕ ಚೋಪ್ರಾ

  ಪ್ರಿಯಾಂಕ ಚೋಪ್ರಾ ಸದ್ಯದಲ್ಲೇ ಭಾರತದ ಪ್ರಥಮ ಮಹಿಳಾ ಬಾಹ್ಯಾಕಾಶಯಾನಿ ಕಲ್ಪನಾ ಚಾವ್ಲಾ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸಲಿದ್ದಾರೆ.['ಆಸ್ಕರ್' ವೇದಿಕೆಯಲ್ಲಿ ಎಲ್ಲರ ಚಿತ್ತ 'ಪ್ರಿಯಾಂಕ'ಳತ್ತ]

  ಗಗನಯಾತ್ರಿ ಪಾತ್ರದಲ್ಲಿ ಪ್ರಿಯಾಂಕ ಚೋಪ್ರಾ

  ಗಗನಯಾತ್ರಿ ಪಾತ್ರದಲ್ಲಿ ಪ್ರಿಯಾಂಕ ಚೋಪ್ರಾ

  ಈ ಹಿಂದೆ ಮೇರಿ ಕೋಮ್ ಬಯೋಪಿಕ್ ಚಿತ್ರದಲ್ಲಿ ಮೇರಿ ಕೋಮ್ ಆಗಿ ಪಾತ್ರವನ್ನು ನಿರ್ವಹಿಸಿದ್ದ ಪ್ರಿಯಾಂಕ ಚೋಪ್ರಾ, ಈಗ ಕಲ್ಪನಾ ಚಾವ್ಲಾ ಅವರ ಜೀವನ ಚರಿತ್ರೆ ಆಧರಿಸಿದ ಸಿನಿಮಾದಲ್ಲಿ ಗಗನಯಾತ್ರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.[ಪ್ರತಿಷ್ಠಿತ 'ಪೀಪಲ್ಸ್ ಚಾಯ್ಸ್ ಅವಾರ್ಡ್' ಮುಡಿಗೇರಿಸಿಕೊಂಡ ಪ್ರಿಯಾಂಕ ಚೋಪ್ರಾ]

  ಉದಯೋನ್ಮುಖ ನಿರ್ದೇಶಕರಿಂದ ಚಿತ್ರಕ್ಕೆ ಆಕ್ಷನ್ ಕಟ್

  ಉದಯೋನ್ಮುಖ ನಿರ್ದೇಶಕರಿಂದ ಚಿತ್ರಕ್ಕೆ ಆಕ್ಷನ್ ಕಟ್

  ಅಂದಹಾಗೆ ಪ್ರಿಯಾಂಕ ಚೋಪ್ರಾ ಗಗನಯಾತ್ರಿ 'ಕಲ್ಪನಾ ಚಾವ್ಲಾ' ಆಗಿ ಅಭಿನಯಿಸಲಿರುವ ಚಿತ್ರಕ್ಕೆ ಉದಯೋನ್ಮುಖ ನಿರ್ದೇಶಕರಾಗಿ ಪ್ರಿಯಾ ಮಿಶ್ರಾ ಎಂಬುವವರು ಮೊಟ್ಟ ಮೊದಲು ಆಕ್ಷನ್ ಕಟ್ ಹೇಳಲಿದ್ದಾರೆ. ಅಲ್ಲದೇ ಇವರು ಈ ಚಿತ್ರಕ್ಕಾಗಿ ಕಳೆದ ಏಳು ವರ್ಷಗಳಿಂದ ಪ್ರಾಜೆಕ್ಟ್ ರೆಡಿ ಮಾಡಿದ್ದಾರೆ.

  ಹೊಸ ಪ್ರೊಡಕ್ಷನ್ ಹೌಸ್ ನಿಂದ ಚಿತ್ರ ನಿರ್ಮಾಣ

  ಹೊಸ ಪ್ರೊಡಕ್ಷನ್ ಹೌಸ್ ನಿಂದ ಚಿತ್ರ ನಿರ್ಮಾಣ

  ಮೂಲಗಳ ಪ್ರಕಾರ ಪ್ರಿಯಾಂಕ ಚೋಪ್ರಾ ಅವರ ಹೊಸ ಸಿನಿಮಾವನ್ನು Getway ಎಂಬ ಹೊಸ ಕಂಪನಿ ನಿರ್ಮಾಣ ಮಾಡಲಿದೆ ಎಂದು ತಿಳಿದಿದೆ.

  ಬೇವಾಚ್ ಮತ್ತು ಕ್ವಾಂಟಿಕೋ-2 ನಲ್ಲಿ ಪಿಗ್ಗಿ ಬಿಜಿ

  ಬೇವಾಚ್ ಮತ್ತು ಕ್ವಾಂಟಿಕೋ-2 ನಲ್ಲಿ ಪಿಗ್ಗಿ ಬಿಜಿ

  ಸದ್ಯದಲ್ಲಿ ಪ್ರಿಯಾಂಕ ಚೋಪ್ರಾ ಹಾಲಿವುಡ್ ನ ಸೂಪರ್ ಹಿಟ್ ಟಿವಿ ಶೋ 'ಕ್ವಾಂಟಿಕೋ-2' ಮತ್ತು ತಮ್ಮ ಹಾಲಿವುಡ್ ಮೊದಲ ಚಿತ್ರ 'ಬೇವಾಚ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಆದ್ದರಿಂದ ಬಾಲವುಡ್ ಸಿನಿಮಾ ಆರಂಭ ಯಾವಾಗ ಎಂಬ ಮಾಹಿತಿ ಇನ್ನೂ ತಿಳಿದಿಲ್ಲ.

  ಮಹಿಳೆಯರಿಗೆ ಸ್ಫೂರ್ತಿ ನೀಡುವ ಸಿನಿಮಾ

  ಮಹಿಳೆಯರಿಗೆ ಸ್ಫೂರ್ತಿ ನೀಡುವ ಸಿನಿಮಾ

  ಕಲ್ಪನಾ ಚಾವ್ಲಾ ರವರು ಕಳೆದ ದಶಕದಲ್ಲಿ 31 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಭೂಮಿಗೆ ಹಿಂದಿರುಗುವಾಗ ಬಾಹ್ಯಾಕಾಶ ನೌಕೆ ಸ್ಫೋಟಗೊಂಡು ಫೆಬ್ರವರಿ 1, 2003 ರಲ್ಲಿ ಸಾವನಪ್ಪಿದರು. ಭಾರತದ ಮೊದಲ ಗಗನಯಾತ್ರಿಯಾದ ಇವರ ಜೀವನ ಚರಿತ್ರೆಯ ಚಿತ್ರ ಮಹಿಳೆಯರಿಗೆ ಪ್ರೇರಣೆ ನೀಡುವ ಚಿತ್ರವೆಂಬ ಭರವಸೆ ಮೂಡಿಸಿದೆ. ಅಲ್ಲದೇ ನಟಿ ಪ್ರಿಯಾಂಕ ಚೋಪ್ರಾ ರವರಿಗೂ ಇನ್ನೂ ಹೆಚ್ಚಿನ ಮಟ್ಟದಲ್ಲಿ ಹೆಸರು ತಂದುಕೊಡಲಿದೆ.

  English summary
  Priyanka Chopra’s next Bollywood film has been finalised. The actress will be seen essaying the title role in the late NASA astronaut Kalpana Chawla’s biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X