»   » ಪ್ರಿಯಾಂಕಾ ಛೋಪ್ರಾ ಹುಟ್ಟುಹಬ್ಬ ಸಂಭ್ರಮ

ಪ್ರಿಯಾಂಕಾ ಛೋಪ್ರಾ ಹುಟ್ಟುಹಬ್ಬ ಸಂಭ್ರಮ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನ ಪ್ರತಿಭಾವಂತ ನಟಿ, ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಛೋಪ್ರಾ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ. ಇತ್ತೀಚೆಗೆ ತನ್ನ ನೆಚ್ಚಿನ ಅಪ್ಪನನ್ನು ಕಳೆದುಕೊಂಡಿದ್ದ ಪ್ರಿಯಾಂಕಾ ಕೆಲ ಕಾಲ ಮಂಕಾಗಿದ್ದರು. ತನ್ನ ವೃತ್ತಿ ಬದುಕಿನ ಪ್ರತಿ ಹೆಜ್ಜೆಯಲ್ಲೂ ದಾರಿದೀಪವಾಗಿದ್ದ ತಂದೆಯ ಅಗಲಿಕೆ ಆಕೆಯನ್ನು ಬಹುವಾಗಿ ಕಾಡಿತ್ತು.

ಆದರೆ, ಚಿಕ್ಕಂದಿನಿಂದಲೇ ವೃತ್ತಿಪರತೆ ಮೈಗೂಡಿಸಿಕೊಂಡು ಬೆಳೆದ ಪ್ರಿಯಾಂಕಾ ಅವರು ಖ್ಯಾತ ಬಾಕ್ಸರ್ ಮೇರಿ ಕೋಮ್ ಅವರ ಜೀವನ ಚರಿತ್ರೆ ಆಧಾರಿಸಿದ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ವಿಶೇಷ ಮೇಕಪ್, ತಯಾರಿ ನಡೆಸಿರುವ ಪ್ರಿಯಾಂಕಾಗೆ ತಮ್ಮ ಹುಟ್ಟು ಹಬ್ಬ ಆಚರಣೆಗಿಂತ ಚಿತ್ರೀಕರಣ ಮುಖ್ಯವಾಗಿದೆಯಂತೆ.

ಡಾ. ಅಶೋಕ್ ಹಾಗೂ ಮಧು ಛೋಪ್ರಾ ದಂಪತಿಯ ಮಗಳು ಪಿಗ್ಗಿ ಅಲಿಯಾಸ್ ಪ್ರಿಯಾಂಕಾ ಛೋಪ್ರಾ ಅವರು 13ನೇ ವರ್ಷ ವಯಸ್ಸಿನಲ್ಲಿದ್ದಾಗ ಇವರ ಕುಟುಂಬ ಅಮೆರಿಕಕ್ಕೆ ವಲಸೆ ಹೋಗಬೇಕಾಯಿತು. ಮ್ಯಾಚಾಸುಸೆಟ್ಸ್ ಹಾಗೂ ಸೆಡಾರ್ ರಾಪಿಡ್ಸ್ ಮುಂತಾದ ಕಡೆ ಓದಿದ ಪ್ರಿಯಾಂಕಾ National Opus Honour Choir ಗೆ ಶಾಲೆಯಿಂದ ಆಯ್ಕೆಯಾದ ಏಕೈಕ ಭಾರತೀಯ ವಿದ್ಯಾರ್ಥಿ ಎನಿಸಿದ್ದರು.

ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಧರಿಸಿದ ಪ್ರಿಯಾಂಕಾ ಛೋಪ್ರಾ ಮಿಸ್ ವರ್ಲ್ಡ್ ಕಿರೀಟ ಧರಿಸಿದ ಮೇಲೆ ಬಣ್ಣದ ಲೋಕ ಕೈ ಬೀಸಿ ಕರೆಯಿತು. ಐತರಾಜ್, ಫ್ಯಾಷನ್, 7 ಖೂನ್ ಮಾಫ್, ವಾಟ್ಸ್ ಯುವರ್ಸ್ ರಾಶಿ?, ಬರ್ಫಿ ಮುಂತಾದ ಚಿತ್ರಗಳಲ್ಲಿ ಉತ್ತಮ ಅಭಿನಯಕ್ಕಾಗಿ ಜನಪ್ರಿಯತೆ ಗಳಿಸಿದರು. ಪ್ರಿಯಾಂಕಾ ಛೋಪ್ರಾ ಕುರಿತ ಕೆಲವು ಕುತೂಹಲದ ಸಂಗತಿಗಳು ನಿಮಗಾಗಿ ಇಲ್ಲಿದೆ..

ಚಿಕ್ಕಂದಿನಲ್ಲಿ ಆಸೆ ಏನಿತ್ತು

ಚಿಕ್ಕಂದಿನಲ್ಲಿ ಪ್ರಿಯಾಂಕಾ ಛೋಪ್ರಾಗೆ ಮಾಡೆಲಿಂಗ್ ಬಗ್ಗೆ ಅಷ್ಟು ಒಲವಿರಲಿಲ್ಲ. ಸಾಫ್ಟ್ ವೇರ್ ಇಂಜಿನಿಯರ್ ಅಥವಾ ಕ್ರಿಮಿನಲ್ ಸೈಕಾಲಜಿಸ್ಟ್ ಆಗುವ ಕನಸು ಕಂಡಿದ್ದರು

ಅಮ್ಮನ ಆಸೆ

ಮಗಳನ್ನು ಫೆಮಿನಾ ಮಿಸ್ ಇಂಡಿಯಾಗೆ ತಯಾರಿ ಮಾಡಿದವರು ಪ್ರಿಯಾಂಕಾ ಛೋಪ್ರಾ ಅವರ ತಾಯಿ. 2000ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆ ನಂತರ ಮಿಸ್ ವರ್ಲ್ಡ್ ಕಿರೀಟ ಧರಿಸಿದ್ದು ಈಗ ಇತಿಹಾಸ

ಬಾಲಿವುಡ್ ಪ್ರವೇಶ

2002ರಲ್ಲಿ ಅಬ್ಬಾಸ್ ಮಸ್ತಾನ್ ಜೋಡಿಯ ರೊಮ್ಯಾನಿಟ್ ಥ್ರಿಲ್ಲರ್ ಚಿತ್ರ ಹಮ್ ರಾಹ್ ಚಿತ್ರದಲ್ಲಿ ಪ್ರಿಯಾಂಕಾ ನಟಿಸಬೇಕಾಗಿತ್ತು. ಆದರೆ, ಯಾಕೋ ಸಮಯ ಕೂಡಿ ಬರಲಿಲ್ಲ ಅದರೆ, ಪ್ರಿಯಾಂಕಾ ಮೊದಲು ನಟಿಸಿದ್ದು ಹಿಂದಿ ಚಿತ್ರದಲ್ಲಿ ಎಂಬುದು ವಿಶೇಷ

ತಮಿಳಿನಲ್ಲಿ ಪ್ರಿಯಾಂಕಾ

ಪ್ರಿಯಾಂಕಾ ಅವರು 2002ರಲ್ಲಿ ಮೊದಲಿಗೆ ತಮಿಳನ್ ಎಂಬ ತಮಿಳು ಚಿತ್ರದಲ್ಲಿ ವಿಜಯ್ ಜೋಡಿಯಾಗಿ ನಟಿಸಿದರು.

ಅಪಘಾತ

2005ರ ವಕ್ತ್ ಚಿತ್ರದ Do Me A Favor, Let's Play Holi ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ವಿದ್ಯುತ್ ಶಾಕ್ ಗೆ ಒಳಗಾಗಿ ಕೆಲವು ದಿನಗಳ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ಉಮರಾವ್ ಜಾನ್

ಜೆಪಿ ದತ್ತಾ ಅವರ ಮಹತ್ವಾಕಾಂಕ್ಷೆ ಚಿತ್ರ ಉಮರಾವ್ ಜಾನ್ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಪ್ರಿಯಾಂಕಾ ಅವರನ್ನು ಮೊದಲಿಗೆ ಆಯ್ಕೆ ಮಾಡಲಾಗಿತ್ತು.

ನಿಕ್ ನೇಮ್ಸ್

ಗೆಳೆಯ ಅಭಿಷೇಕ್ ಬಚ್ಚನ್ ಪ್ರೀತಿಯಿಂದ ಇಟ್ಟ ಹೆಸರು ಪಿಗ್ಗಿ ಚಾಪ್ಸ್ ಅಥವಾ ಪಿಗ್ಗಿ. ಮನೆಯಲ್ಲಿ 'ಮಿಮಿ' ಎಂದು ಎಲ್ಲರೂ ಕರೆಯುತ್ತಾರೆ

ಇಟಲಿಯಲ್ಲೂ ಪ್ರಸಿದ್ಧಿ

ಇಟಲಿಯ ಸಾಲ್ವಟೊರ್ ಫೆರಾಗಾಮೊ(Salvatore Ferragamo) ವಸ್ತು ಸಂಗ್ರಹಲಯದಲ್ಲಿ ಪ್ರಿಯಾಂಕಾ ಅವರ ಪಾದದ ಗುರುತುಗಳನ್ನು ತೆಗೆದಿರಿಸಲಾಗಿದೆ. ಈ ರೀತಿ ಗೌರವಕ್ಕೆ ಪಾತ್ರರಾದ ಏಕೈಕ ಭಾರತೀಯ ನಟಿ ಎನಿಸಿದ್ದಾರೆ.

ಮಿಸ್ ವರ್ಲ್ಡ್ ಪ್ರಶ್ನೆ

ಮಿಸ್ ವರ್ಲ್ಡ್ ಸ್ಪರ್ಧೆ ಸಂದರ್ಭದಲ್ಲಿ ಅಮೆರಿಕದ ನಿರೂಪಕ ಜೆರಿ ಸ್ಪಿಂಗರ್ ಅವರು ಜಗತ್ತಿನ ಶ್ರೇಷ್ಠ ಮಹಿಳೆಯರನ್ನು ಆಯ್ಕೆ ಮಾಡಿ ಎಂದು ಕೇಳಿದಾಗ ತಕ್ಷಣವೇ ಮದರ್ ಥೆರೆಸಾ ಹೆಸರು ಹೇಳಿದರು. ಕುಷ್ಠರೋಗಿಗಳಿಗೆ ಸುಶ್ರೂಷೆ ಮಾಡಿದಮಹಾನ್ ಮಹಿಳೆ ಎಂದರು.

ಜಾಹೀರಾತು ಜಗತ್ತಿಗೂ ಫೇವರೀಟ್

ನೋಕಿಯಾ, ಗಾರ್ನಿಯರ್, ಪಾಂಡ್ಸ್, ಲಕ್ಸ್, ಬ್ರೂ, ಟ್ಯಾಗ್ ಹ್ಯೂವರ್, ನಿಕಾನ್, ಸನ್ ಸಿಲ್ಕ್ , ಹೀರೋ ಹೋಂಡಾ ಮುಂತಾದ ಜಾಹೀರಾತು ಸಂಸ್ಥೆಗಳ ನೆಚ್ಚಿನ ರೂಪದರ್ಶಿ ಹಾಗೂ ರಾಯಭಾರಿಯಾಗಿ ಕೂಡಾ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ.

English summary
Priyanka Chopra is one of the most talented and sought after actresses of the Bollywood industry today. Hailing from a non filmy background, PC has achieved the zenith of success and all credit goes to her for her confidence and hard work. And today, it's party time as this beautiful actress has turned 31.
Please Wait while comments are loading...